ಸಮಾಜ ನಿರ್ಮಾಣದಲ್ಲಿ ನಿರ್ಧಾರಕ ಪಾತ್ರ ಶಿಕ್ಷಕರದ್ದು : ಶೆಟ್ಟೆಪ್ಪನವರ
ಗದಗ : ಶಿಕ್ಷಕ ವೃತ್ತಿಗೆ ನಿರಂತರ ಅಧ್ಯಯನ ಅವಶ್ಯ. ಶಿಕ್ಷಕರು ತಮ್ಮ ವೃತ್ತಿ ಕೌಶಲ್ಯಗಳ ಮೂಲಕ ಸಮಾಜ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಶಿಕ್ಷಕರು ವಿಷಯ ಜ್ಞಾನ, ಪಠ್ಯ ಕ್ರಮ, ಉತ್ತಮ ಸಂವಹನ ಕೌಶಲ್ಯ ಅವಶ್ಯಕವೆಂದು ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ.ಶೆಟ್ಟೆಪ್ಪನವರ ಹೇಳಿದರು.
ಅವರು ಇನ್ನರ್‌ವ್ಹೀಲ್ ಕ್ಲಬ್ ಗದಗ-ಬೆಟಗೇರಿಯಿಂದ ಜರುಗಿದ “ಉತ್ತಮ ಶಿಕ್ಷಕ ಸಮಾಜ ರಕ್ಷಕ” ಶಿಕ್ಷಕರ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾಜದಲ್ಲಿ ಗೌರವ ಸ್ಥಾನ ಹೊಂದಿರುವ ಶಿಕ್ಷಕ ಸಮುದಾಯವು ಬೋಧನೆಯಲ್ಲಿ ಹೊಸ ಹೊಸ ಬೋಧನಾ ಉಪಕರಣಗಳು, ಮಾಹಿತಿ ಸಂವಹನ ತಂತ್ರಜ್ಞಾನ ಬಳಸುವಲ್ಲಿ ಪರಿಣಿತರಾಗಬೇಕು. ವಿದ್ಯಾರ್ಥಿಗಳ ಉತ್ತಮ ಬೆಳವಣಿಗೆಗೆ ಸಹಕಾರಿ ಹಾಗೂ ಪ್ರೋತ್ಸಾಹಕ ಮತ್ತು ಮಾರ್ಗದರ್ಶಕ ಆಗಿರಬೇಕು ಎಂದರು.
ಗದಗ ಜಿಲ್ಲಾ ಶಿಕ್ಷಣ ಹಾಗೂ ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಬಿ.ಎಫ್.ಅರವಟಗಿ ಮಾತನಾಡಿ ಆದರ್ಶ ಶಿಕ್ಷಕರು ಕೇವಲ ಜ್ಞಾನವನ್ನು ನೀಡುವವರಲ್ಲ. ಬದಲಿಗೆ ವಿದ್ಯಾರ್ಥಿಗಳನ್ನು ಸರ್ವ ಶ್ರೇಷ್ಠ ಸಾಮರ್ಥ್ಯವನ್ನು ಸಾಧಿಸಲು ಪ್ರೇರಣೆ ಹಾಗೂ ಮಾರ್ಗದರ್ಶನ ನೀಡುವರು ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಪಿ.ಪ್ರಭಯ್ಯನಮಠ ಮಾತನಾಡಿ ಆದರ್ಶ ಶಿಕ್ಷಕರು ಮಕ್ಕಳಲ್ಲಿ ಶೈಕ್ಷಣಿವಾಗಿ ಅಷ್ಟೇ ಅಲ್ಲದೇ ಶಿಸ್ತು ಹಾಗೂ ಆತ್ಮ ವಿಶ್ವಾಸವನ್ನು ಬೆಳೆಸುವಲ್ಲಿಯೂ ಮಾರ್ಗದರ್ಶನ ನೀಡುತ್ತಾರೆ. ಉತ್ಸಾಹದೊಂದಿಗೆ ತರಗತಿಯೊಳಗೆ ಬೋಧಿಸುವ ಶಿಕ್ಷಕರು ಮಕ್ಕಳಿಗೆ ಪಠ್ಯ ಪುಸ್ತಕಗಳನ್ನು ಮೀರಿ ಕಲಿಕೆಯನ್ನು ಅನ್ವೇಷಿಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸುತ್ತಾರೆ ಎಂದರು.
ಶಿಕ್ಷಕ ಹಾಗೂ ಬೋಧನಾ ಕುರಿತು ಮಾತನಾಡಿದ ಸಂಪನ್ಮೂಲ ವ್ಯಕ್ತಿ ಪಿ.ಡಿ.ಮಂಗಳೂರ ಶಿಕ್ಷಕರಲ್ಲಿ ತಾಳ್ಮೆ ಮುಖ್ಯ. ಸಂಕೀರ್ಣ ವಿಚಾರಗಳನ್ನು ಸ್ಪಷ್ಟ ಮತ್ತು ಆಕರ್ಷಕ ರೀತಿಯಲ್ಲಿ ಬೋಧನೆ ಇರಬೇಕು. ಮುಕ್ತ ಚರ್ಚೆ, ಪ್ರಶ್ನೆಗಳು ಮತ್ತು ತರಗತಿಯಲ್ಲಿ ಮಗು ಸಕ್ರಿಯವಾಗಿ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು ಎಂದರು.
ಇನ್ನರ್‌ವ್ಹೀಲ್ ಕ್ಲಬ್ ಗದಗ-ಬೆಟಗೇರಿ ಅಧ್ಯಕ್ಷೆ ಅಶ್ವಿನಿ ಜಗತಾಪ ಮಾತನಾಡಿ ಗುರುವಿನ ಸ್ಥಾನವನ್ನು ಸಮಾಜವೇ ಗೌರವಿಸುತ್ತದೆ. ಶಿಕ್ಷಕ ಸಮುದಾಯ ಹಾಗೂ ವಿದ್ಯಾರ್ಥಿಗಳ ಮಧ್ಯ ಅನನ್ಯ ಸಂಬAಧವಿದೆ. ಶಾಲೆಯೊಂದು ಕುಟುಂಬದ ರೀತಿಯಂತಿದ್ದು ಮಕ್ಕಳು ನಗುನಗುತ್ತ ನಲಿ-ಕಲಿ ಅಭ್ಯಾಸಗೈಯ್ಯುವವರು, ಶಿಕ್ಷಕರು ಎಂದೆAದಿಗೂ ಪೂಜ್ಯನೀಯ ಎಂದರು.
ಕ್ಲಬ್‌ನ ಸಿ.ಪಿ.ಸಿ.ಸಿ ಮೀನಾಕ್ಷಿ ಕೊರವನರ ಸ್ವಾಗತಿಸಿದರು. ಕ್ಲಬ್‌ನ ಬುಲಿಟಿನ್ ಸಂಪಾದಕಿ ವೀಣಾ ಕಾವೇರಿ ನಿರೂಪಿಸಿದರು. ಸುಲೋಚನಾ ಐಹೋಳೆ ವಂದಿಸಿದರು.
ತರಬೇತಿಯಲ್ಲಿ ಶಿಕ್ಷಣ ಸಂಯೋಜಕರುಗಳಾದ ಮುರಳಿ ಸೊಲ್ಲಾಪೂರ, ಐ.ಬಿ.ಮಡಿವಾಳರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗದಗ ಘಟಕದ ಅಧ್ಯಕ್ಷ ಎಸ್.ಕೆ.ಮಂಗಳಗುಡ್ಡ ಕಾರ್ಯದರ್ಶಿ ಪ್ರಶಾಂತ ಕನಾಜ, ಬಿಆರ್‌ಪಿಗಳಾದ ಶ್ಯಾಮ ಲಾಂಡೆ, ದೀಪಾ ಬೇವಿನಮರದ, ಸಿಆರ್‌ಪಿಗಳಾದ ಎಸ್.ಸಿ.ಹಿರೇಮಠ, ಶ್ರೀನಿವಾಸ ಕೆಂಚಗಾರ, ವಿದ್ಯಾವತಿ ಗಡ್ಯಾಳೆ, ಶಿಲ್ಪಾ ಹಳ್ಳಿಕೇರಿ, ಖಲೀದ್‌ಅಹಮದ್ ಜಲಗೇರಿ, ಏಸ್ತೇರಾ ಹುಗ್ಗೇಣ್ಣವರ, ಕವಿತಾ ಬೇಲೇರಿ, ಕಿರಣ ಕುದರಿಕೊಣ್ಣುರ, ಕುಸುಮಾ ಮರಿಗೌಡ್ರ, ನಿಂಗಪ್ಪ ಮಡಿವಾಳರ, ಶರಣಪ್ಪ, ಮುಖ್ಯೋಪಾಧ್ಯಾಯರುಗಳಾದ ಎಂ.ಎA.ಜೋಗಿನ, ಎಂ.ಎಲ್.ಹೊಸಳ್ಳಿ, ಎಫ್.ಜೆ.ದಲಭಂಜನ, ಎಫ್.ಎ.ನಮಾಜಿ, ಭಾರತಿ ಕುಲಕರ್ಣಿ, ತಾರಾ ಪಾಟೀಲ, ಕ್ಲಬ್‌ನ ಮಾಜಿ ಅಧ್ಯಕ್ಷರುಗಳಾದ ಅನ್ನಪೂರ್ಣ ವರವಿ, ಶಾಂತಾ ನಿಂಬಣ್ಣವರ, ಶಾಂತಾ ಮುಂದಿನಮನಿ ಮುಂತಾದವರು ಉಪಸ್ಥಿತರಿದ್ದರು.