ಜಿಲ್ಲೆ

ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸಹಾಯ: ನಾಗರತ್ನಾ

Gadag - Shivanand Hiremath

ಗದಗ: ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸಾರ್ವಜನಿಕರ ಸಹಾಯ ಅಗತ್ಯವಾಗಿದೆ. ಇನ್ನರ್​ವ್ಹೀಲ್​ ಕ್ಲಬ್​ ಮಕ್ಕಳ ಶೈಣಿಕ ಅಭಿವೃದ್ಧಿಗೆ ಪೂರಕವಾಗಿ ಮಕ್ಕಳ ಕಲಿಕಾ ಸಾಮಗ್ರಿ ವಿತರಿಸಿ ಸಹಾಯ ಹಸ್ತ ನೀಡಿದೆ ಎಂದು ಕ್ಲಬ್​ ಅಧ್ಯೆ ನಾಗರತ್ನಾ ಮಾರನಬಸರಿ ಹೇಳಿದರು.

ಇನ್ನರ್​ವ್ಹೀಲ್​ ಕ್ಲಬ್​ ವತಿಯಿಂದ ದತ್ತು ಪಡೆದ ಸರ್ಕಾರಿ ಶಾಲೆ ನ.12ರಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಿ ಮಾತನಾಡಿದರು.

ಮಕ್ಕಳು ಬದುಕಿನ ಭವಿಷ್ಯ. ಚಿಕ್ಕ ವಯಸ್ಸಿನಲ್ಲಿ ಉತ್ತಮ ಬೆಳವಣಿಗೆ ಅವಶ್ಯ. ಹೀಗಾಗಿ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಸಹಾಯಕ್ಕೆ ಇನ್ನರ್​ವ್ಹಿಲ್​ ಕ್ಲಬ್​ ಸಿದ್ದ ಎಂದರು.

ಕ್ಲಬ್​ ಸದಸ್ಯೆ ಸುಮಾ ಪಾಟೀಲ ಮಾತನಾಡಿ, ಶಾಲೆಗೆ ನೀರಿನ ಬಾಟಲ್​, ಮಕ್ಕಳಿಗೆ ರ್ಕುಚಿ, ಟೇಬಲ್​, ಲೈಬ್ರರಿಗೆ ಬುಕ್​ ಸ್ಟಾ$ಂಡ್​, ಪುಸ್ತಕಗಳನ್ನು ವಿತರಿಸಲಾಗಿದೆ. ಈ ಪ್ರಕ್ರಿಯೆ ಮುಂದುವರಿಯಲಿದೆ ಎಂದರು.

ಸರೋಜಾದೇವಿ ಆಲೂರ, ಕಮಲಾ ಭೂಮಾ, ಶಾಂತಾ ಗೌಡರ, ಪ್ರೇಮಾ ಗುಳಗೌಡರ, ವೀಣಾ ತಿರ್ಲಾಪೂರ, ಪುಷ್ಪಾ ಭಂಡಾರಿ ಇತರರು ಇದ್ದರು.