ಜಿಲ್ಲೆ

ಇನ್ನರ್ ವೀಲ್ ಕ್ಲಬ್ ಗದಗ್ ಮಿಡ್ ಟೌನ್ ದಿಂದ ಸ್ವೀಕಾರ ಕೇಂದ್ರ ಕ್ಕೆ ಉಪಯುಕ್ತ ವಸ್ತುಗಳ ಕೊಡುಗೆ

Gadag - Shivanand Hiremath
Gadag: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸ್ವೀಕಾರ ಕೇಂದ್ರ ದಲ್ಲಿ ಇರುವಂತಹ ಮಹಿಳೆಯರಿಗೆ ಮತ್ತು ಮಕ್ಕಳಿಗೆ
ಹೊಸ ಬಟ್ಟೆಗಳು, ನೀರಿನ ಬಾಟಲಗಳು, ಹಾಗೂ ಆಟಿಕೆ ಸಾಮಾನುಗಳನ್ನು,
ಉಪಯುಕ್ತ ವಾಗಲೆಂದು ಇನ್ನರ್ ವ್ಹೀಲ್ ಕ್ಲಬ್ ಗದಗ ಮಿಡ್ ಟೌನ್ ನಿಂದ ನೀಡಲಾಯಿತು. ಇದರ ಪ್ರಾಯೋಜಕತ್ವವನ್ನು ನಮ್ಮ ಕ್ಲಬ್ಬಿನ ಸದಸ್ಯರಾದ ಶ್ರೀಮತಿ ಶಶಿಕಲಾ ಭಜಂತ್ರಿ, ಶ್ರೀಮತಿ ಅಶ್ವಿನಿ ಮದಗುಂಡಿ, ಡಾ.ಸ್ನೇಹಾ ಶಿರೋಳ ವಹಿಸಿಕೊಂಡಿದ್ದರು.ಹಾಗೂ ಅವರ ಮನರಂಜನೆಗೆ ಅನುಕೂಲ ವಾಗಲೆಂದು ಟಿ.ವಿ.ಚಾನಲ್ ಗಾಗಿ ಒಂದು ವರ್ಷದ ಟಾಟಾ ಸ್ಕೈ ರಿಚಾರ್ಜ್ ಮಾಡಿಸಲಾಯಿತು. ಇದರ ಪ್ರಾಯೋಜಕತ್ವವನ್ನು ನಮ್ಮ ಕ್ಲಬ್ಬಿನ ಹಾಗೂ ಸ್ವೀಕಾರ ಕೇಂದ್ರದ ಸುಪ್ರೀಡೆಂಟ್ ಆದ ಶ್ರೀಮತಿ ಲಲಿತಾ ಅಳವಂಡಿ
 ವಹಿಸಿಕೊಂಡಿದ್ದರು.
 ಕಾರ್ಯಕ್ರಮ ದಲ್ಲಿ ಕ್ಲಬ್ಬಿನ ಅಧ್ಯಕ್ಷರಾದ ಶ್ರೀಮತಿ ಪ್ರೀತಿ ಶಿವಪ್ಪನಮಠ, ಖಜಾಂಚಿ ಆದ ಶ್ರೀಮತಿ ಮಂಗಲಾ ನಾಲ್ವತವಾಡಮಠ, ಐ ಎಸ್ ಓ ಆದ ಶ್ರೀಮತಿ ಗೀತಾ
ಭಿಕ್ಷಾವತಿಮಠ, ಕ್ಲಬ್ಬಿನ ಸದಸ್ಯರಾದ ಆದ ಶ್ರೀಮತಿ ಶಶಿಕಲಾ ಭಜಂತ್ರಿ, ಶ್ರೀಮತಿ ಅಶ್ವಿನಿ ಮದಗುಂಡಿ, ಸ್ವೀಕಾರ ಕೇಂದ್ರದ ಸುಪ್ರಿಡೆಂಟ್ ಆದ ಶ್ರೀಮತಿ ಲಲಿತಾ ಅಳವಂಡಿ, ರೇಖಾ ನೀಲ ರಡ್ಡಿ, ರೇಣುಕಾ ಹಡಪದ, ರೂಪಾ, ಸಾವಿತ್ರಿ ಉಪಸ್ಥಿತರಿದ್ದರು.