ಜಿಲ್ಲೆ

ಇನ್ನರ್ ವ್ಹೀಲ ಸಂಸ್ಥೆ ಗದಗ ಬೆಟಗೇರಿಯಿಂದ ಮಹಿಳಾ ಸಾಕ್ಷರತಾ ಕಾರ್ಯಕ್ರಮ

Gadag - Shivanand Hiremath

Gadag: ಮಹಿಳಾ ಸಾಕ್ಷರತೆ ಬಹಳ ಮುಖ್ಯ ಮತ್ತು ಸಮಾಜದ ಪ್ರಗತಿಗೆ ಪ್ರಮುಖ ಪಾತ್ರ ವಹಿಸುತ್ತದೆ. ಸಾಕ್ಷರತೆಯ ಮೂಲಕ, ಮಹಿಳೆಯರು ತಮ್ಮ ವ್ಯಕ್ತಿತ್ವವನ್ನು ಸುಧಾರಿಸಬಹುದು ಮತ್ತು ಹೆಚ್ಚಿಸಬಹುದು, ಸಾಕ್ಷರತೆ ಅವರ ಜೀವನದಲ್ಲಿ ಆರ್ಥಿಕ ಸ್ಥಿರತೆ, ಸಬಲೀಕರಣ, ಲಿಂಗ ಸಮಾನತೆ ಮತ್ತು ಸಮಾಜದ ಪ್ರಗತಿಗೆ ಕೊಡುಗೆ ನೀಡಬಹುದು. ಈ ನಿಟ್ಟಿನಲ್ಲಿ ಇನ್ನರ್ ವ್ಹೀಲ್ ಸಂಸ್ಥೆ ಗದಗ ಬೆಟಗೇರಿ ಹಾಗೂ ಗದಗ ತಾಲೂಕ ಪಚಾಯತ್ ಸಹಯೋಗದಲ್ಲಿ ಶಿಕ್ಷಕರಿಗಾಗಿ “ಕ್ರಿಯಾತ್ಮಕ ಸಾಕ್ಷರತಾ ಕಾರ್ಯಕ್ರಮ"ದ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. '
ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಕವಿತಾ ಬೇಲೇರಿ ಕಾರ್ಯಕ್ರಮದಲ್ಲಿ ಮಹಿಳಾ ಸಾಕ್ಷರತೆಯ ಪ್ರಾಮುಖ್ಯತೆಯನ್ನು ತಿಳಿಸುತ್ತಾ ಮಹಿಳೆ ಸಾಕ್ಷರಸ್ತಳಾದರೆ ಶಾಲೆಯೊಂದು ತೆರದಂತೆ, ಮಹಿಳೆ ತನ್ನ ಸಾಮರ್ಥ್ಯವನ್ನು ಅರಿವುದರಲ್ಲಿ ಶಿಕ್ಷಣವು ಮೊದಲ ಹಂತವಾಗಿದೆ ಪ್ರತಿಯೊಬ್ಬ ಮಹಿಳೆಯು ಸಾಕ್ಷರತಳಾಗಿ ತನ್ನ ಹಕ್ಕು ಹಾಗೂ ಕರ್ತವ್ಯಗಳನ್ನು ಅರಿತು ಸಮಾಜದಲ್ಲಿ ಮುಂದೆ ಬರಬೇಕೆಂದು ತಿಳಿಸಿದರು. ಇನ್ನೋರ್ವ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ. ಪಿ.ಡಿ. ಮಂಗಳೂರು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಮಹಿಳೆ ಸಹಜವಾಗಿಯೆ ತ್ಯಾಗ ಹಾಗೂ ನಾಯಕತ್ವ ಗುಣವನ್ನು ತನ್ನಲ್ಲಿ ಹೊಂದಿರುತ್ತಾಳೆ ವಿದ್ಯೆ ಮಹಿಳಿಯಲ್ಲಿ ವಿಶ್ವಾಸವನ್ನು ಹೆಚ್ಚಿಸುತ್ತದೆಯೆಂದರು. ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ನಾಗರತ್ನಾ ಮಾರನಬಸರಿ ಮಾತನಾಡುತ್ತಾ ಸಾಕ್ಷರತೆಯು ಮಹಿಳೆಯು ತಮ್ಮ ಗುರಿಗಳ ಸಾಧನೆಗೆ, ತಮ್ಮ ಜ್ಞಾನ ಮತ್ತು ಸಾಮರ್ಥ್ಯ ಬೆಳವಣಿಗೆಗೆ ಹಾಗೂ ಅವರ ಸಮುದಾಯ ಮತ್ತು ವಿಶಾಲ ವ್ಯಾಪ್ತಿಯ ಸಮಾಜದಲ್ಲಿ ಪಾಲ್ಗೊಳ್ಳಲು ಅನುವು ಮಾಡುವ ಅವಿಚ್ಛಿನ್ನ ಭಾಗವಾಗಿದೆ ಎಂದರು. ಅತಿಥಿಗಳಾಗಿ ಆಗಮಿಸಿದ ಶ್ರೀ ಕೆ. ಎಲ್. ಪೂಜಾರ್ ಸಹಾಯಕ ನಿರ್ದೇಶಕರು ತಾಲೂಕಾ ಪಂಚಾಯತಿ, ಶ್ರೀ ಜಿ. ಎಸ್. ಕಿಲಬಣ್ಣವರ ವೇದಿಕೆಯ ಮೇಲೆ ಉಪಸ್ಥಿತರಿದ್ದು ಸಂಧೋರ್ಭಚಿವಾಗಿ ಮಾತನಾಡಿದರು. ಎಲ್ಲಾ ಸಂಪನ್ಮೂಲ ವ್ಯಕ್ತಿಗಳನ್ನು ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಈ ತರಬೇತಿ ಕಾರ್ಯಕ್ರಮದಿಂದ ಒಟ್ಟು 58 ತರಬೇತುದಾರರು ಪ್ರಯೋಜನ ಪಡೆದರು
ಈ ಸಂಧರ್ಬದಲ್ಲಿ ಸಿಎಲ್‌ಸಿಸಿ ಶ್ರೀಮತಿ ಸುಮಾ ಪಾಟಿಲ, ಐಎಸ್‌ಓ ಶ್ರೀಮತಿ ಪುಷ್ಪಾ ಭಂಡಾರಿ ಹಾಗೂ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ವೀಣಾ ತಿರ್ಲಾಪೂರ ಉಪಸ್ಥಿತರಿದ್ದರು.