ಗದಗ: ಬಟ್ಟೆಯ ಚೀಲವು ಮರುಬಳಕೆ ಮಾಡಬಹುದಾದ ಚೀಲ. ಬಟ್ಟೆಯ ಚೀಲವನ್ನು ಬಹು ಬಳಕೆಗಾಗಿ ವಿನ್ಯಾಸಗೊಳಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಪರಿಸರ ಸಮಸ್ಯೆಗಳ ಬಗ್ಗೆ ಕಾಳಜಿ ವಹಿತ್ತಿರವ ಮತ್ತು ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡುವ ಸಲುವಾಗಿ ಈ ಬಟ್ಟೆ ಚೀಲಗಳು ಜನಪ್ರಿಯತೆಯನ್ನು ಗಳಿಸಿವೆ. ಸರ್ಕಾರಗಳು ಮತ್ತು ನಿಯಂತ್ರಕ ಸಂಸ್ಥೆಗಳು ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ಕಡಿಮೆ ಮಾಡಲು ಕಟ್ಟುನಿಟ್ಟಾದ ನಿಯಮಗಳು ಮತ್ತು ನಿಬಂಧನೆಗಳನ್ನು ಜಾರಿಗೆ ತರುತ್ತಿವೆ, ಈ ಕಾರಣದಿಂದಾಗಿ ಬಟ್ಟೆ ಚೀಲದ ಮಾರುಕಟ್ಟೆಯ ವಿಸ್ತರಣೆಗೆ ಪ್ರೇರಣೆ ನೀಡುತ್ತಿದೆೆ. ಅನೇಕ ಚಿಲ್ಲರೆ ಅಂಗಡಿಗಳು ಮತ್ತು ಸೂಪರ್ಮಾರ್ಕೆಟ್ಗಳು ಪ್ಲಾಸ್ಟಿಕ್ ಚೀಲಗಳಿಗೆ ಪರ್ಯಾಯವಾಗಿ ಬಟ್ಟೆಯ ಚೀಲಗಳನ್ನು ನೀಡಲು ಪ್ರಾರಂಭಿಸಿವೆ, ಇದು ಬಟ್ಟೆ ಚೀಲದ ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ. ಆದರೆ ಇನ್ನೂ ಹಲವರು ಪ್ಲಾಸ್ಟಿಕ್ ಚೀಲಗಳನ್ನು ಬಳಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಇನ್ನರ್ ವೀಲ್ ಕ್ಲಬ್ ಗದಗ ಬೆಟಗೇರಿಯು ಬೆಟಗೇರಿ ಮುಖ್ಯ ತರಕಾರಿ ಮಾರುಕಟ್ಟೆಯಲ್ಲಿ ಮರುಬಳಕೆ ಮಾಡಬಹುದಾದ ಬಟ್ಟೆ ಚೀಲಗಳ ಕುರಿತು ಜಾಗೃತಿ ಮೂಡಿಸಿದರು.
ಇಂದು ಕಾಣುವ ಸಾಮಾನ್ಯ ವಿದ್ಯಮಾನವೆಂದರೆ ಅಂಗಡಿಗಳಿAದ ಖರೀದಿಸಿದ ಆಹಾರ ಮತ್ತು ಬಟ್ಟೆಯಂತಹ ವಸ್ತುಗಳನ್ನು ಸಾಗಿಸಲು ಜನರು ಪ್ಲಾಸ್ಟಿಕ್ ಚೀಲಗಳನ್ನು ಬಳಸುತ್ತಾರೆ. ಪ್ಲಾಸ್ಟಿಕ್ ಚೀಲಗಳು ಪರಿಸರಕ್ಕೆ ಹಾನಿ ಮಾಡುತ್ತದೆ ಎಂದು ತಿಳಿದ ನಂತರವೂ ಅದನ್ನು ಸಾಮಾನ್ಯವಾಗಿ ಬಳಸುತ್ತಿರುವುದು ವಿಪರ್ಯಾಸ. ಕಸದ ವಿಲೇವಾರಿ ವ್ಯವಸ್ಥೆಯಲ್ಲಿ ಪ್ಲಾಸ್ಟಿಕ್ ಚೀಲಗಳೇ ಹೆಚ್ಚಿನ ವಸ್ತುಗಳಾಗಿವೆ. ಈ ಪ್ಲಾಸ್ಟಕ ಚೀಲಗಳನನ್ನು ಬಳಸಿ ಎಸೆಯುವದರಿಂದ ಪ್ರಾಣಿಗಳನ್ನು ಸೇವಿಸುವುದರಿಂದ ಹೊಟ್ಟೆಯುಬ್ಬುವುದು, ಉಸಿರುಗಟ್ಟಿಸುವಿಕೆ, ಮಾಲಿನ್ಯ, ಚರಂಡೆಗಳ ತಡೆ, ನದಿಗಳು ಕಲುಷಿತಗೊಳ್ಳವುದು ಮುಂತಾದ ಹಲಾವರು ಹಾನಿಕಾರಕ ಪರಿಸರ ಪರಿಣಾಮಗಳಿಗೆ ಕಾರಣವಾಗುತ್ತದೆ. ಇಂತಹ ಅಪಾಯಕಾರಿ ಪರಿಣಾಮಗಳನ್ನು ತಡೆಯಲು ಸಾರ್ವಜನಿಕರು, ಈ ನಿಟ್ಟಿನಲ್ಲಿ ಯೋಚಿಸಿ ಪ್ಲಾಸ್ಟಿಕ್ ಚೀಲಗಳಿಗಿಂತ ಮರುಬಳಕೆಯ ಆರ್ಥಿಕ ಸ್ನೇಹಿ ಬಟ್ಟೆ ಚೀಲಗಳನ್ನು ಬಳಸುವ ಬಗ್ಗೆ ಇನ್ನರ್‌ವ್ಹೀಲ್ ಕ್ಲಬ್ ಗದಗ-ಬೆಟಗೇರಿಯು ಜಾಗೃತಿ ಮೂಡಿಸಲು ಪ್ರಾರಂಭಿಸಿದೆ. ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ನಾಗರತ್ನ ಮಾರನಬಸರಿ ಅವರು ಪ್ಲಾಸ್ಟಿಕ್ ಚೀಲಗಳನ್ನು ಬಳಸಬೇಡಿ ಬದಲಿಗೆ ಮರುಬಳಕೆ ಮಾಡಬಹುದಾದ ಬಟ್ಟೆಯ ಚೀಲಗಳನ್ನು ಬಳಸಿರಿ ಇದರಿಂದ ಹಣ ಉಳಿತಾಯದ ಜೊತೆಗೆ ಪರಿಸರದ ರಕ್ಷಣಗೆ, ಪ್ರಾಣಿಗಳ ತೊಂದರೆಗೆ ರಕ್ಷಣೆ ನೀಡಿದಂತಾಗುತ್ತೆಯೆAದ ಬೆಟಗೇರಿ ತರಕಾರಿ ಮಾರುಕಟ್ಟೆಯಲ್ಲಿ ನೆರದ ಜನರಿಗೆ ಜಾಗೃತಿ ಮೂಡಿಸಿ ಕರೆ ನೀಡುವುದರ ಸ್ಥಳೀಯರಿಗೆ 80 ಚೀಲಗಳನ್ನು ವಿತರಿಸಿದರು. ಮಾರುಕಟ್ಟೆಗೆ ಹೋದಗಲೆಲ್ಲ ಬಟ್ಟೆ ಚೀಲಗಳನ್ನು ತೆಗೆದುಕೊಂಡು ಹೋಗುವಂತೆ ಮನವಿ ಮಾಡಿದರು. ಈ 80 ಬಟ್ಟೆಯ ಚೀಲಗಳನ್ನು ಸಂಸ್ಥೆಯ ಐಎಸ್‌ಒ ಶ್ರೀಮತಿ ಪುಷ್ಪಾ ಭಂಡಾರಿ ಪ್ರಾಯೋಜಿಸಿದ್ದಾರೆ. ಕಾರ್ಯಕ್ರಮದಲ್ಲಿ ಶ್ರೀಮತಿ ವೀಣಾ ತಿರ್ಲಾಪುರ ಹಾಗೂ ಶ್ರೀಮತಿ ಪ್ರಿಯಾಂಕಾ ಹಳ್ಳಿ ಉಪಸ್ಥಿತರಿದ್ದರು. ಕಾರ್ಯದರ್ಶಿಗಳಾದ ಶ್ರೀಮತಿ ವೀಣಾ ತಿಲಾಪೂರ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.