ವಿಜಯವಾಣಿ ಸುದ್ದಿಜಾಲ ಗದಗ
ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ತುಂಬುವುದರೊಂದಿಗೆ ಅವರನ್ನು ಉತ್ತಮ ಪ್ರಜೆಗಳನ್ನಾಗಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಇನ್ನರ್ವ್ಹೀಲ್ ಕ್ಲಬ್ ಸದಸ್ಯೆ ಸುಮಾ ಪಾಟೀಲ ಹೇಳಿದರು.
ಸಂಸ್ತೆಯಿಂದ ದತ್ತು ಪಡೆದ ಸರ್ಕಾರಿ ಶಾಲಾ ಮಕ್ಕಳಿಗೆ ಮಂಗಳವಾಋ ಏರ್ಪಡಿಸಿದ್ದ ರೇನ್ ಕೋಟ್ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಶೈಣಿಕ ಗುಣಮಟ್ಟದ ಚಿಂತನೆಯ ಜೊತೆಗೆ ಅವರ ಆರೋಗ್ಯರ್ಪೂಣ ರಣೆ ಕುರಿತು ಪಾಲಕರೊಂದಿಗೆ ಆಗಾಗ ಸಮಾಗಮ ನಡೆಸಬೇಕು. ಈ ವಿಷಯ ಕುರಿತು ಈಗಾಗಲೇ ಸಂಸ್ಥೆ ವತಿಯಿಂದ ಸರ್ಕಾರಿ ಶಾಲೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಮಕ್ಕಳಿಗೆ ರೇನ್ ಕೋಟ್ ವಿತರಿಸಿ ಮಾತನಾಡಿದ ಕ್ಲಬ್ ಮಾಜಿ ಅಧ್ಯೆ ಅನ್ನರ್ಪೂಣ ವರವಿ ಮಾತನಾಡಿ, ಮಳೆಗಾಲದ ಅವಧಿಯಲ್ಲಿ ಶಾಲೆಗೆ ಬರುವ ಮಕ್ಕಳಿಗೆ ಅನುಕೂಲ ಆಗಲೆಂದು ಉತ್ತಮ ಗುಣಮಟ್ಟದ ರೇನ್ ಕೋಟ್ ನೀಡಲಾಗಿದೆ ಎಂದರು.
ನಾಗರತ್ನಾ ಮಾರನಬಸರಿ, ವೀಣಾ ತಿರ್ಲಾಪೂರ, ಪ್ರೇಮಾ ಗುಳಗೌಡ್ರ, ರಾಜೇಶ್ವರಿ ಬಳ್ಳಾರಿ, ಶ್ರೇಯಾ ಪವಾಡಶೆಟ್ಟರ, ಜಯಶ್ರೀ ಉಗಲಾಟ, ನಂದಾ ಬಾಳಿಹಳ್ಳಿಮಠ ಇತರರು ಇದ್ದರು.