ಭೂಮೌಲ್ಯ ಏಕಾಏಕಿ ಏರಿಕೆ ಮಾಡಿದ್ದನ್ನು ಪ್ರಶ್ನಿಸಿದ ಉದ್ಯಮಿಗಳು
ಮುಗಿಯದ ಕಾನೂನು ಸಮರ ರಗಳೆ
ಶಿವಾನಂದ ಹಿರೇಮಠ ಗದಗ
ಜಿಲ್ಲೆಯಲ್ಲಿ ಬೃಹತ್ ಕೈಗಾರಿಕಾ ವಲಯ ಸ್ಥಾಪನೆಗೆ ಕೆಐಎಡಿಬಿ ಸಾವಿರಾರು ಏಕರೆ ಭೂಬ್ಯಾಂಕ್ ಹೊಂದದಿರುವ ನೋವಿನ ಮಧ್ಯೆ ಸಣ್ಣ ಕೈಗಾರಿಕೆಗಳ ಉತ್ತೇಜನಕ್ಕೆ ಸ್ಥಾಪಿಸಿದ ನರಸಾಪೂರ ಕೈಗಾರಿಕಾ ವಲಯವು ಉದ್ಯಮಿಗಳ ನಿರುತ್ಸಾಹ, ಭೂಮೌಲ್ಯ ದ್ವಿಗುಣ ಮತ್ತು ನಾನಾ ಕಾನೂನು ಸಮರದಿಂದ ಸೊರಗುತ್ತಿದೆ. ಕಿರು ಮತ್ತು ಮಧ್ಯಮ ಕೈಗಾರಿಕೆ ಉತ್ತೇಜನಕ್ಕೆ ನಿವೇಶನ ನೀಡಿದರೂ ಸಹ ಉದ್ಯಮಿಗಳು ನಿರುತ್ಸಾಹ ತೋರಿದ್ದು, ಜಿಲ್ಲೆಯಲ್ಲಿ ಕೈಗಾರಿಕೋದ್ಯಮ ನಿರೀಸಿದಷ್ಟು ಪ್ರಗತಿ ಕಾಣುತ್ತಿಲ್ಲ.
ಕಳೆದ 20 ವರ್ಷದ ಹಿಂದೆ ನರಸಾಪುರ ಕೈಗಾರಿಕಾ ವಲಯದಲ್ಲಿ ಒಂದು ಏಕರೆಗೆ ಲೀಸ್ ಕಮ್ ಸೇಲ್ ಡೀಡ್ ಸರ್ಕಾರಿ ಮೌಲ್ಯ 2 ಲಕ್ಷ ರೂ. ಇತ್ತು. ಇದೇ ಮೌಲ್ಯವು 2008ರ ವರೆಗೆ ಮುಂದುವರಿಸಲಾಗಿತ್ತು. 2010ರಲ್ಲಿ 4 ಲಕ್ಷ ರೂ, 2016&17ರಲ್ಲಿರಲ್ಲಿ 10 ಲಕ್ಷ ರೂ. ಗೆ ಏರಿಕೆ ಆಗಿ 2020ರ ನಂತರ ಹೊಸ ಕೈಗಾರಿಕಾ ನೀತಿಯ ಪ್ರಕಾರ ಒಂದು ಏಕರೆಗೆ 20 ಲಕ್ಷಕ್ಕೆ ಲೀಸ್ ಕಮ್ ಸೇಲ್ ಡಿಡ್ ಮೌಲ್ಯ ನಿಗದಿ ಆಯಿತು. ಸರ್ಕಾರಿ ನಿಯಮಾವಳಿ ಪ್ರಕಾರ ಕಳೆದ 20 ವರ್ಷಗಳ ಹಿಂದೇ ಲೀಸ್ ಕಮ್ ಸೇಲ್ ಡೀಡ್ ಪಡೆದು ಈದ ಖರೀದಿ(ಸೇಲ್ ಡೀಡ್) ಮಾಡಿಕೊಳ್ಳಲು ಮುಂದಾಗಿರುವ ಉದ್ಯಮಿಗಳಿಗೆ ಮೂಲ ಬೆಲೆ ಹೊರತುಪಡಿಸಿ ಅತ್ಯಧಿಕ ಮೌಲ್ಯಕ್ಕೆ ಖರೀದಿಸಬೇಕು ಎನ್ನುವ ನಿಯಮಾವಳಿಗಳನ್ನು ಜಾರಿ ಮಾಡಲಾಗಿದೆ. 2016&17ರಲ್ಲಿ 10 ಲಕ್ಷಕ್ಕೆ ಲಿಸ್ ಕಮ್ ಸೇಲ್ ಡೀಡ್ ಪಡೆದವರು ಈಗ ಸೇಲ್ ಡೀಡ ಮಾಡಿಕೊಳ್ಳಲು 42 ಲಕ್ಷ ಪಾವತಿಸವಬೇಕಾಗುತ್ತದೆ. ಈ ನಿಯಮವನ್ನು ಪ್ರಶ್ನಿಸಿ ಹಲವರು ನ್ಯಾಯಾಲಯ ಮೊರೆ ಹೋದರು. ಹೀಗಾಗಿ ನರಸಾಪುರ ಕೈಗಾರಿಕಾ ವಲಯಕ್ಕೆ ಹೊಸ ಉದ್ಯಮಗಳು ಸ್ಥಾಪಿಸಲು ಕಾನೂನು ತೋಡಕು ಎದುರಾಗಿ, ಕೈಗಾರಿಕೆಗಳ ಪ್ರಕರಣ ಕುಂಠಿತಗೊಂಡಿತು.
ಒಂದೆಡ ಭೂಮೌಲ್ಯ ಅಧಿಕಗೊಳಿಸಿದ ಪರಿಣಾಮ ಕೈಗಾರಿ ಸ್ಥಾಪನೆಗೆ ವಿಳಂಭ ಆಗುತ್ತಿದ್ದರೆ, ಮತ್ತೊಂದೆಡೆ ಉದ್ಯಮಿಗಳ ನಿರುತ್ಸಾಹದಿಂದ ಕೈಗಾರಿಕಾ ವಲಯದಲ್ಲಿ ಖಾಲಿ ಉಳಿಸಿಕೊಂಡಿರುವ ನಿವೇಶನ ಮಾಲೀಕರಿಗೆ ನೋಟೀಸ್ ನೀಡಲಾಗಿದ್ದು, ದಂಡ ವಸೂಲಿಗೆ ಇಲಾಖೆ ಮುಂದಾಗಿದೆ. ಈ ವರೆಗೆ 50 ಲಕ್ಷಕ್ಕೂ ಅಧಿಕ ದಂಡ ವಸೂಲಿ ಮಾಡಲಾಗಿದೆ. ಇನ್ನೂ ಕೆಲವರ ನಿವೇಶನ ಹಿಂಪಡೆಯಲು ಸೂಚಿಸಲಾಗಿದೆ. ಇವೆಲ್ಲವನ್ನು ಪ್ರಶ್ನಿಸಿ ಉದ್ಯಮಿಗಳು ಕೊರ್ಟ್ ಮೆಟ್ಟಿಲೇರಿದ್ದು, ಈ ಪ್ರಕರಣಗಳು ಇನ್ನೂ ಕೋರ್ಟ ಹಂತದಲ್ಲೇ ವಿಚಾರಣೆಯಲ್ಲಿ ಇವೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಕೆಐಡಿಬಿ ವತಿಯಿಂದ ಮೂಲಭೂತ ಸೌಕರ್ಯ ಒದಗಿಸಿದ ಕಾರಣದಿಂದಲೂ ನರಸಾಪೂರ ಕೈಗಾರಿಕಾ ವಲಯದಲ್ಲಿ ಕೈಗಾರಿಕಾ ವಲಯದಲ್ಲಿ ನಿವೇಶ ಹೊಂದಿದರೂ ಸಹ ಕೈಗಾರಿಕೆ ಆರಂಭಿಸಲು ಉದ್ಯಮಿದಾರರು ಹಿಂದೇಟು ಹಾಕುತ್ತಿದ್ದಾರೆ. ಈ ಕಾರಣಗಳಿಂದ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಕೊರತೆ ಕಾಣುತ್ತೊಇದೆ.
ಹಲವರಿಗೆ ನೋಟೀಸ್:
ಕೈಗಾರಿಕಾ ಉದ್ದೇಶದಿಂದ ನಿವೇಶನ ಪಡೆದು ಆರಂಭಿಕ ಪ್ರಕ್ರಿಯೆ ಕೈಗೊಳ್ಳದೇ ನಿವೇಶನ ಖಾಲಿ ಉಳಿಸಿಕೊಂಡ ಉದ್ಯಮಿಗಳಿಗೆ ಕೆಐಎಡಿಬಿ ಕಾಯ್ದೆ 34/ಬಿ ಅಡಿಯಲ್ಲಿ ನೋಟೀಸ್ ನೀಡಿ ನಿವೇಶನವನ್ನು ಮರಳಿ ಪಡೆಯಲು ಇಲಾಖೆ ಕಳೆದ ಮೂರು ವರ್ಷದ ಹಿಂದೆಯೇ ನೋಟೀಸ್ ನೀಡಿತ್ತು. ಹಲವು ಉದ್ಯಮಿಗಳು ನೋಟೀಸ್ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣ ಆದಷಟು ಬೇಗ ಮುಗಿದು ಉದ್ಯಮ ಆರಮಭಿಸುವ ಕನಸು ಹೊಂದಿದ್ದ ಉದ್ಯಮಿಗಳಿಗೆ ಕೊರ್ಟ್ ನಲ್ಲಿ ಪ್ರಕರಣ ವಿಳಂಭ ಆಗುತ್ತಿರುವುದರಿಂದ ಮತ್ತಷ್ಟು ನಿರುತ್ಸಾಹ ಮುಡಿದೆ. ಮೂಲಗಳ ಪ್ರಕಾರ ಜಿಲ್ಲೆಯಲ್ಲಿ ಕೆಐಎಡಿಬಿ ಮತ್ತು ಕೆಎಸ್ಎಸ್ಐಡಿಸಿ ಯಿಂದ ವಿತರಿಸಿದ 440 ನಿವೇಶನಗಳ ಪೈಕಿ 234 ಕಾರ್ಯ ನಿರ್ವಹಿಸುತ್ತಿದ್ದು, 206 ನಿವೇಶನಗಳಲ್ಲಿ ಉತ್ಪಾದನೆ ಪ್ರಕ್ರಿಯೆ ಇನ್ನೂ ಆರಂಭಗೊಂಡಿಲ್ಲ ಎಂದು ತಿಳಿದು ಬಂದಿದೆ.
ಕೆಐಎಡಿಬಿ:
2020 -25ರ ನೂತನ ಕೈಗಾರಿಕಾ ನೀತಿ ಜಾರಿ ತಂದಿರುವ ರಾಜ್ಯ ಸರ್ಕಾರ, ಕಳೆದ ಜ.1, 2022 ರಂದು ಹೊಸ ಆದೇಶ ಹೊರಡಿಸಿತ್ತು. ಈ ಪ್ರಕಾರ, ಕೆಐಎಡಿಬಿಯಿಂದ ಪಡೆದ ನಿವೇಶನವನ್ನು 2 ವರ್ಷದೊಳಗೆ ಶೇ.50ರಷ್ಟು ಬಳಸಿಕೊಂಡು ಉತ್ಪಾದನೆ ಆರಂಭಿಸಬೇಕು. 2 ವರ್ಷದ ನಂತರವೂ ಆರಂಭಿಕ ಪ್ರಕ್ರಿಯೆ ಜರುಗಿಸದಿದ್ದರೆ 34ಬಿ(ಕೆಐಎಡಿಬಿ) ನೋಟೀಸ್ ವಿತರಿಸಿ ನಿವೇಶನ ವಶಕ್ಕೆ ಪಡೆದುಕೊಳ್ಳುವ ಕಾನೂನು ಇದೆ.
ಕೆಎಸ್ಎಸ್ಐಡಿಸಿ:
ಜಿಲ್ಲೆಯಲ್ಲಿ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ(ಕೆಎಸ್ಎಸ್ಐಡಿಸಿ) ಗಜೇಂದ್ರಗಡ, ರೋಣ, ಗದಗ, ಮುಂಡರಗಿ, ಲಕ್ಷ$್ಮಶ್ವರ ಹಾಗೂ ಬೆಟಗೇರಿಯಲ್ಲಿ 6 ಎಸ್ಟೇಟ್ಗಳನ್ನು ಸ್ಥಾಪಿಸಲಾಗಿದೆ. ರೋಣ ಮತ್ತು ಲೆ$್ಮಶ್ವರ ಎಸ್ಟೇಟ್ಗಳು ಅಭಿವೃದ್ಧಿಗೊಳ್ಳದ ಹಿನ್ನೆಲೆ ಸ್ಥಳಿಯ ಸಂಸ್ಥೆಗೆ ಇನ್ನೂ ಹಸ್ತಾಂತರಗೊಂಡಿಲ್ಲ. ಜಿಲ್ಲೆಯಲ್ಲೇ ಗಜೇಂದ್ರಗಡ ಕಿರು ಉದ್ಯಮದ ಎಸ್ಟೇಟ್ ಉತ್ತಮ ಕಾರ್ಯನಿರ್ವಹಿಸುತ್ತಿದ್ದು, ರೋಣ ಪಟ್ಟಣದ ಕೆಎಸ್ಎಸ್ಐಡಿಸಿ ನಿವೇಶನಗಳಲ್ಲಿ ಕಿರು ಉದ್ಯಮ ಆರಂಭವೇ ಆಗಿಲ್ಲ. 293 ನಿವೇಶನ ಪೈಕಿ 152 ಕಾರ್ಯ ನಿರ್ವಹಿಸುತ್ತಿದ್ದು, ಇನ್ನೂಳಿದವು ನಾನಾ ಕಾರಣದಿಂದ ಆರಂಭಗೊಳ್ಳದ ಹಿನ್ನೆಲೆ ನಿವೇಶ ವಶಕ್ಕೆ ಪಡೆಯಲು ಕೆಎಸ್ಎಸ್ಐಡಿಸಿ ಕಾನೂನು ಸಮರ ಮುಂದು ವರೆದಿದೆ. ಗಜೇಂದ್ರಗಡದಲ್ಲಿನ ಎಸ್ಟೇಟ್ನಲ್ಲಿರುವ ಎಲ್ಲ 43 ನಿವೇಶನದಲ್ಲಿ ಕಿರು ಉದ್ಯಮ ಆಂಭಗೊಂಡಿವೆ. ರೋಣದಲ್ಲಿ 43 ನಿವೇಶನದಲ್ಲಿ ಕೇವಲ 8 ಶೆಡ್ಗಳು ಮಾತ್ರ ನಿರ್ಮಾಣವಾಗಿವೆ.
ಹೈಲೆಟ್ಸ್:
* ಬೂಮೌಲ್ಯ ಏರಿಕೆ, ಕೈಗಾರಿಕಾ ನಿವೇಶನ ಖರೀದಿಗೆ ಉದ್ಯಮಿಗಳು ಹಿಂದೇಡು.
* ಭೂಮೌಲ್ಯ ದ್ವಿಗುಣಗೊಳಿಸಿದ್ದನ್ನು ಪ್ರಶ್ನಿಸಿ ಕೋರ್ಟ್ ಮೊರೆ, ಮುಗಿಯದ ರಗಳೆ
* ಖಾಲಿ ನಿವೇಶನ ಉಳಿಸಿಕೊಂಡ ಉದ್ಯಮಿದಾರರಿಗೆ ನೋಟೀಸ್,
* ನಿವೇಶ ಮರಳಿ ನೀಡುವಂತೆ ಸೂಚನೆ.
* ಹಲವರಿಂದ ದಂಡ ವಸೂಲಿ, 50 ಲಕ್ಷಕ್ಕೂ ಅಧಿಕ ದಂಡ ಪಾವತಿ.
* ಬೃಹತ್ ಉದ್ಯಮಕ್ಕೆ ಕನಿಷ್ಠ 500 ಎಕರೆ ಭೂಬ್ಯಾಂಕ್ ಹೊಂದುವಂತೆ ಜಿಲ್ಲಾ ಕೈಗಾರಿಕಾ ಇಲಾಖೆಗೆ ಕೆಐಎಡಿಬಿ ಸೂಚನೆ.
ಕೋಟ್:
ಜಿಲ್ಲೆಯಲ್ಲಿ ಮೊದಲೇ ಉದ್ಯಮಗಳ ಕೊರತೆ ಇದೆ. ಈ ನಿಟ್ಟಿನಲ್ಲಿ ಕೈಗಾರಿಕಾ ನಿವೇಶನ ಮೌಲ್ಯಗಳನ್ನು ಸರ್ಕಾರ ಕಡಿಮೆಗೊಳಿಸಬೇಕು. ಅಂದಾಗ ಮಾತ್ರ ಉದ್ಯಮಿಗಳು ಕೈಗಾರಿಕಾ ಸ್ಥಾಪನೆಗೆ ಮುಂದಡಿ ಇಡುತ್ತಾರೆ. ಏಕಾಏಕಿ ಅತ್ಯಧಿಕ ಮೌಲ್ಯ ನಿಗದಿ ಮಾಡಿದ್ದರಿಂದ ಕಳೆದ ಮೂರ್ನಾಲ್ಕು ವರ್ಷದಿಂದ ನರಸಾಪುರ ಕೈಗಾರಿಕಾ ವಲಯದಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲ. ಈ ಬಗ್ಗೆ ಸಿಎಂ ಅವರಿಗು ಮನವಿ ಸಲ್ಲಿಸಿದ್ದೇವೆ.
ಶಿವಕುಮಾರ ಪಾಟೀಲ, ಅಧ್ಯಕ್ಷರು ನರಸಾಪುರ ಕೈಗಾರಿಕಾ ವಲಯ
== = ==