ಜಿಲ್ಲೆ

ಬೃಹತ್​ ಉದ್ಯಮಕ್ಕೆ 1500 ಎಕರೆ ನೀಡಲು ಮುಂದಾದ ರೈತರು

Gadag - Shivanand Hiremath

ಶಿವಾನಂದ ಹಿರೇಮಠ ಗದಗ
ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಉದ್ಯಮ ವಿಸ್ತರಿಸಲು ಸಾಧ್ಯವಾಗದ ವಾತಾವರಣ ಸೃಷ್ಟಿಯಾದರೆ, ಇನ್ನೊಮದೆಡೆ ಜಿಲ್ಲೆಯಲ್ಲಿ ಬೃಹತ್​ ಕೈಗಾರಿಕೆ ಸ್ಥಾಪಿಸಲು ಅನುವು ಮಾಡಿಕೊಡಲು ಪೋಸ್ಕೊ ಬಾದಿತ ರೈತರು ಮತ್ತೆ ಮುಂದೆ ಬಂದಿರುವುದು ವಿಶೇಷ. ಅಂದಾಜು 1500 ಎಕರೆ ಭೂಮಿಯನ್ನು ಕೈಗಾರಿಕಾ ಇಲಾಖೆಗೆ ನೀಡಲು ಆಸಕ್ತಿ ತೋರಿದ್ದರೂ ಸಹ ಜಿಲ್ಲಾ ಕೈಗಾರಿಕಾ ಇಲಾಖೆಯಿಂದ ಜಮೀನು ಪಡೆಯಲು ಯಾವುದೇ ಪ್ರಕ್ರಿಯೆಗೆ ಚಾಲನೆ ನೀಡಿಲ್ಲ. ಜಂಟಿ ಸಮೀೆ ನಡೆಸಿ ಭೂಸ್ವಾಧಿನ ಪಡಿಸಿಕೊಳ್ಳಲು ರಾಜ್ಯ ಸರ್ಕಾರದ ಬಳಿ ಸಮರ್ಪಕ ಅನುದಾನವು ಇಲ್ಲ ಎಂದು ತಿಳಿದು ಬಂದಿದೆ.
ಜಿಲ್ಲೆಯಲ್ಲಿ ನಿರುದ್ಯೋಗ ಉಲ್ಭಣಿಸುತ್ತಿರುವ ಹಿನ್ನೆಲೆ ಬೃಹತ್​ ಕೈಗಾರಿಕೆ ಸ್ಥಾಪನೆಗೆ ಯುವ ಸಮುದಾಯ ಆಗ್ರಹಿಸುತ್ತಿರುವ ಬೆನ್ನಲ್ಲೇ ಕೈಗಾರಿಕೆಗೆ ಕೃಷಿ ಭೂಮಿ ನೀಡಲು ರೈತರು ಉತ್ಸಾಹ ತೋರಿದ್ದು ಸಕಾರಾತ್ಮಕ ಬೆಳವಣಿ ಆಗಿದೆ. ಆದರೆ, ಭೂಸ್ವಾಧಿನ ಪ್ರಕ್ರಿಯೆಗೆ ಅನುದಾನ ಕೊರತೆ ಮತ್ತು ರಾಜಕೀಯ ಹಿತಾಸಕ್ತಿಗೆ ಒಳಪಟ್ಟ ಕೈಗಾರಿಕೆ ಇಲಾಖೆಯಿಂದ ಪ್ರಾಥಮಿಕ ಸಮಿೆ ಒಳಗೊಂಡು ಯಾವುದೇ ಪ್ರಕ್ರಿಯೆ ಜರುಗಿಲ್ಲ ಎಂಬುದೇ ವಿಪರ್ಯಾಸ.
ಈ ಹಿಂದೆ ಜಿಲ್ಲೆಯ ಹಳ್ಳಿಗುಡಿ ಗ್ರಾಮ ವ್ಯಾಪ್ತಿಯ 6000 ಎಕರೆ ಭೂ ಪ್ರದೇಶವನ್ನು ಪೋಸ್ಕೋ ಉದ್ಯಮಕ್ಕೆ ನೀಡಲು ಪ್ರಕ್ರಿಯೆ ಚಾಲನೆಗೊಂಡಿತ್ತು. ಪ್ರತಿಭಟನೆ, ರಾಜಕೀಯ ಒಳಸಂಚಿನಿಂದ ಉದ್ಯಮ ಸ್ಥಾಪನೆಗೆ ಅಡ್ಡಿ ಉಂಟಾಗಿ ಉದ್ಯಮಕ್ಕೆ ಭೂಮಿ ಹಸ್ತಾಂತರಗೊಳ್ಳಲಿಲ್ಲ. ಈ ಹಿನ್ನೆಲೆ ಜಿಲ್ಲೆಯಲ್ಲಿನ ಕೈಗಾರಿಕಾ ಸ್ಥಾಪನೆಯ ಯುವಕರ ಕನಸು ನನಸಾಗಿಯೇ ಉಳಿಯಿತು. ನಿರುದ್ಯೋಗ ಉಲ್ಭಣಿಸಿತು. ಈಗ ಅದೇ ಗ್ರಾಮದ 70 ಕ್ಕೂ ಅಧಿಕ ರೈತರು ಜಿಲ್ಲೆಯಲ್ಲಿ ಬೃಹತ್​ ಕೈಗಾರಿಕಾ ವಸಾಹತು ಸ್ಥಾಪನೆಗೆ 1500 ಎಕರೆ ನೀಡಲು ಮುಂದಾಗಿದ್ದಾರೆ. ಈ ಬಗ್ಗೆ ಧಾರವಾಡ ವಿಭಾಗೀಯ ಕೆಐಎಡಿಬಿ ಗೂ ಜಿಲ್ಲಾ ಕೈಗಾರಿಕೆ ಇಲಾಖೆ ಪತ್ರ ಬರೆದಿದ್ದು, ಪ್ರಾಥಮಿಕ ಸಮೀಾ ವರದಿ ಮತ್ತು ಭೂಸ್ವಾಧಿನ ಪ್ರಕ್ರಿಯೆ ಆರಂಭಿಸಲು ಪತ್ರದಲ್ಲಿ ಉಲ್ಲೇಖಿಸಿದೆ. ಪತ್ರ ಬರೆದು ಒಂದು ವರ್ಷ ಜರುಗಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಯೋಗ್ಯ ಭೂಮಿ:
ರೈತರಿಂದ ಪ್ರಸ್ತಾವನೆ ಸಲ್ಲಿಸಿದ ಭೂಮಿ ಕೈಗಾರಿಕೋದ್ಯಮಕ್ಕೆ ಯೋಗ್ಯ ಪ್ರದೇಶವಾಗಿದ್ದು, ಭೂಮಿಗೆ ಹೊಂದಿಕೊಂಡು ರಾಜ್ಯ ಹೆದ್ದಾರಿ ಮತ್ತು ಹಳ್ಳಿಗುಡಿ ರೈಲ್ವೆ ನಿಲ್ದಾಣ ಸಾಮಿಪ್ಯದಲ್ಲಿದೆ. ಉದ್ಯಮಗಳಿಗೆ ಕಚ್ಚಾ ವಸ್ತು ಸಾಗಾಟ, ಉತ್ಪನ್ನಗಳ ಸಾಗಾಟಕ್ಕೆ ಸಾರಿಗೆ ಸಂಪರ್ಕ ಸಮರ್ಪಕವಾಗಿದೆ ಹಾಗೂ ಹುಬ್ಬಳ್ಳಿ ಮಹಾನಗರಕ್ಕೆ ರಾಜ್ಯ ಹೆದ್ದಾರಿ ಸಂಪರ್ಕ ಇರುವುದರಿಂದ ಕೈಗಾರಿಕೆ ಸ್ಥಾಪನೆಗೆ ಅನುಕೂಲ ವಾತಾವರಣವಿದೆ.

ಭೂಬ್ಯಾಂಕ್​ ಅವಶ್ಯವಿದೆ: ಬೃಹತ್​ ಕೈಗಾರಿಕೆ ಸ್ಥಾಪನೆಗೆ ಜಿಲ್ಲೆಯಲ್ಲಿ ಕೆಐಎಡಿಬಿ ಸಾವಿರಾರು ಏಕರೆ ಭೂಬ್ಯಾಂಕ್​ ಹೊಂದಿಲ್ಲ ಹಾಗೂ ಕಿರು ಮತ್ತು ಮಧ್ಯಮ ಕೈಗಾರಿಕೆ ಉತ್ತೇಜನಕ್ಕೆ ನಿವೇಶನ ನೀಡಿದರೂ ಸಹ ಉದ್ಯಮಿಗಳು ನಿರುತ್ಸಾಹ ತೋರಿಸಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಕೈಗಾರಿಕೋದ್ಯಮ ನಿರೀಸಿದಷ್ಟು ಪ್ರಗತಿ ಕಂಡಿಲ್ಲ. ಮಾನವ ಸಂಪನ್ಮೂಲ ಹಾಗೂ ಕೈಗಾರಿಕೆಗೆ ಅಗತ್ಯವಿರುವ ಮೂಲಭೂತ ಸೌಕರ್ಯ ಕೊರತೆ ಮತ್ತು ರಾಜಕಾರಣ ಹಿತಾಸಕ್ತಿಯಿಂದ ಬೃಹತ್​ ಕೈಗಾರಿಕೆಗಳು ಜಿಲ್ಲೆಗೆ ಕಾಲಿಡುತ್ತಿಲ್ಲ. ಹಾಗಾಗಿ ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿಯ ಕೊರತೆ ಕಾಡುತ್ತಿದ್ದು, ದಿನೇ ದಿನೆ ನಿರುದ್ಯೋಗ ಸೃಷ್ಟಿಯಾಗುತ್ತಿದೆ.