ಜಿಲ್ಲೆ

ಜಿಲ್ಲಾ ಕೈಗಾರಿಕಾ ಅಭಿವೃದ್ಧಿಗೆ ಕಂಟಕ

Gadag - Shivanand Hiremath

ಶಿವಾನಂದ ಹಿರೇಮಠ ಗದಗ
ಬೃಹತ್​ ಕೈಗಾರಿಕೆ ಇಲ್ಲದೇ ಇತರೆ ಜಿಲ್ಲೆಗಳಂತೆ ಅಬಿವೃದ್ಧಿಯ ವೇಗ ಪಡೆಯದ ಗದಗ ಜಿಲ್ಲೆಯಲ್ಲಿ ಮಧ್ಯಮ ವರ್ಗದ ಕೈಗಾರಿಕೆಗಳಿಗೂ ಕೆಐಡಿಬಿ ಮಂಡಳಿ ವತಿಯಿಂದ ಪಾರದರ್ಶಕ ಬೆಂಬಲ ಸಿಗುತ್ತಿಲ್ಲ. ಮಂಡಳಿಯ ದೋರಣೆಯಿಂದ ಜಿಲ್ಲೆಯ ಮಧ್ಯಮ ವರ್ಗದ ಉದ್ಯಮಿಗಳಿಗೆ ಉದ್ಯಮವನ್ನು ವಿಸ್ತಾರಗೊಳಿಸಲು ಸಾಧ್ಯವಾಗುತ್ತಿಲ್ಲ. ಇಲಾಖೆ ನೀಡಿದ ಆಥಿರ್ಕ ಹೊರೆ ಮತ್ತು ಕಾಲ ಕಾಲಕ್ಕೆ ತನ್ನ ಧೋರಣೆ ಬದಲಿಸುತ್ತಿರುವುದರಿಂದ ಕೆಐಡಿಬಿ ನಿವೇಶನ ಪಡೆದು ಕೈಗಾರಿಕೆ ಆರಂಭಿಸಿ ಬದುಕು ಕಟ್ಟಿಕೊಂಡು ಉದ್ಯಮಿಗಳಿಗೆ ದಿನೇ ದಿನೆ ಸಮಸ್ಯೆ ಉಲ್ಭಣಿಸುತ್ತಿದೆ.

ಅನಗತ್ಯ ಆಥಿರ್ಕ ಹೊರೆ:
ನಗರದ ನರಸಾಪುರ ಕೈಗಾರಿಕೆ ವಲಯದಲ್ಲಿ 2000ನೇ ಇಸ್ವಿಯಲ್ಲಿ ಕೆಐಡಿಬಿಯಿಂದ ಹಂಚಿಕೆ ಆದ ನಿವೇಶನಗಳಿಗೆ (134 ನಿವೇಶನ) ಇನ್ನೂ ಕೆಐಡಿಬಿ ಇಲಾಖೆಯು ಸೇಲ್​ ಡೀಡ್​ ಮಾಡಿಕೊಟ್ಟಿಲ್ಲ. ನಿವೇಶನ ಹಂಚಿಕೆ ಆರಂಭದಲ್ಲಿ ಲಿಸ್​ ಕಮ್​ ಸೇಲ್​ ಡೀಡ್​ ಮಾಡಿಕೊಳ್ಳಲು ಎಕರೆಗೆ 2 ಲಕ್ಷ, 3 ಲಕ್ಷ, 4 ಲಕ್ಷ ರೂ. ಕೆಐಡಿಬಿಯಿಂದ ನಿಗದಿ ಪಡಿಸಲಾಗಿತ್ತು. ಉದ್ಯಮಿಗಳು ಈ ಹಣವನ್ನು ಪಾವತಿಸಿ ನಿವೇಶನ ಪಡೆದು ಉದ್ಯಮ ಆರಂಭಿಸಿದರು. ಕೈಗಾರಿಕಾ ನಿಯಮದ ಪ್ರಕಾರ ಶೇ.50 ರಷ್ಟು ಭೂ ಬಳಕೆ ಮತ್ತು ಉತ್ಪಾದನೆ ಆರಂಭಿಸಿ, 10 ವರ್ಷ ಪೂರೈಸಿದ ಕೈಗಾರಿಕಾ ನಿವೇಶನಗಳಲ್ಲ ಉದ್ಯಮಿಗಳಿಗೆ ಸೇಲ್​ ಡೀಡ್​ ಮಾಡಿಕೊಡಬೇಕೆಂಬ ನಿಯಮವಿದೆ. ಆದರೆ. ಸೇಲ್​ ಡೀಡ್​ ಮಾಡಿಕೊಡುವ ಸಂದರ್ಭದಲ್ಲಿ ಇಲಾಖೆಯು ಕನಿಷ್ಠ 40 ಲಕ್ಷ ರೂ. ಪಾವತಿಸಿ ಸೇಲ್​ ಡೀಡ್​ ಪಡೆಯಿರಿ ಎಮದು ಉದ್ಯಮಿಗಳಿಗೆ ನೋಟೀಸ್​ ನೀಡಿದೆ. ಈ ಹಣ ಪಾವತಿಸಲು ಉದ್ಯಮಿಗಳಿಂದ ವಿರೋಧ ವ್ಯಕ್ತವಾಗಿದೆ ಆಥಿರ್ಕ ಹೊರೆ ನಿಭಾಯಿಸಲು ಸಾಧ್ಯವಾಗದ ಉದ್ಯಮಿಗಳು ಸಮಸ್ಯೆ ಬಗೆಹರಿಸಲು ಸಚಿವರು, ಜಿಲ್ಲಾಧಿಕಾರಿಗಳ ಮುಂದೆ ದೂರು ನೀಡಿದ್ದಾರೆ.

ಅಧಿಕ ಬೆಲೆ ನಿಗದಿ?:
ಗದಗ ನಗರದ ಮಧ್ಯಮ ವರ್ಗದ ಜನರ ಜಿವನಾಡಿ ಆಗಿರುವ ನರಸಾಪು ಕೈಗಾರಿ ವಲಯದ ಅಭಿವೃದ್ಧಿಯು ನಗರದ ಬೆಳವಣಿಗೆಯ ಆಧಾರವಾಗಿದೆ. ್ಯಾಬ್ರಿಕೇಷನ್​, ಸಿಂಟ್ಯಾಕ್ಸ್​, ಪೈಪ್​ ಇಂಡಸ್ಟ್ರಿ, ಬೇಳೆ ಕಡಲೆ ಪಾಲಿಷ್​, ಆಗ್ರೋ ಕೈಗಅರಿಕೆಗಳು ಇಲ್ಲಿವೆ. ಕಪು$್ಪ ಮಣ್ಣಿನಲ್ಲಿ ಕಟ್ಟಡ ನಿಮಿರ್ಸಿ ಉದ್ಯಮ ಆರಂಭಿಸಲು ಅಧಿಕ ವೆಚ್ಚ ಭರಿಸಬೇಕಾಗುತ್ತದೆ. ಈ ನ್ಯೂನ್ಯತೆಗಳನ್ನು ಅರಿಯದೇ ಇಲ್ಲಿನ ಉದ್ಯಮಿಗಳಿಗೆ ಇಲಾಖೆ ಅಧಿಕ ಮೊತ್ತ ಪಾವತಿಸಿ ಸೇಲ್​ ಡೀಡ್​ ಪಡೆಯಲು ನೋಟೀಸ್​ ನೀಡಿದೆ. 2000ನೇ ಇಸ್ವಿಯಲ್ಲಿ ಕೆಐಡಿಬಿ ಮಂಡಳಿಯಿಂದ ಎಕರೆಗೆ 2 ಲಕ್ಷ ಪಾವತಿಸಿ ಪಡೆದ ನಿವೇಶನಕ್ಕೆ ಈಗ 20 ಲಕ್ಷ ಪಾವತಿಸಿ ಖರೀದಿ ಪಡೆಯಬೇಕು. 3 ಲಕ್ಷ ಪಾವತಿಸಿ ನಿವೇಶನ ಪಡೆದವರಿಗೆ 30 ಲಕ್ಷ ಹಾಗೂ 10 ಲಕ್ಷ ಪಾವತಿಸಿ ನಿವೇಶನ ಪಡೆದವರು 42 ಲಕ್ಷ ಕಟ್ಟಬೇಕು ಎಂದು ಕೆಐಡಿಬಿ ಮಂಡಳಿ ಆದೇಶ ನೀಡಿದೆ. ಈ ಆದೇಶ ಉದ್ಯಮಿಗಳಿಗೆ ಆಥಿರ್ಕ ಹೊರೆ ಆಗಿದೆ.
ಬೂಬ್ಯಾಂಕ್​ ಹೊಂದಿಲ್ಲ:
ಒಂದೆಡೆ ಕೈಗಾರಿಕೆಗಳಿಗೆ ಬೆಂಬಲ ನೀಡದೇ ಕೆಐಡಿಬಿ ತೊಂದರೆ ಕೊಡುತ್ತಿದೆ. ಇನ್ನೊಂದೆಡೆ ಹೊಸ ಕೈಗಾರಿಕೆಗಳ ಸ್ಥಾಪನೆಗೆ ಜಿಲ್ಲೆಯಲ್ಲಿ ಕೈಗಾರಿಕೆ ಇಲಾಖೆ ಭೂಬ್ಯಾಂಕ್​ ಹೊಂದಿಲ್ಲ ಎನ್ನುವುದು ಖೇಧಕರ ಮತ್ತು ಮೂಲಭೂತ ಸೌಕರ್ಯಗಳಿಲ್ಲ ಹಿನ್ನೆಲೆ ಕಿರು ಮತ್ತು ಮಧ್ಯಮ ಕೈಗಾರಿಕೆ ಉತ್ತೇಜನಕ್ಕೆ ನಿವೇಶನ ನೀಡಿದರೂ ಸಹ ಉದ್ಯಮಿಗಳು ನಿರುತ್ಸಾಹ ತೋರುತ್ತಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಕೈಗಾರಿಕೋದ್ಯಮ ನಿರೀಸಿದಷ್ಟು ಪ್ರಗತಿ ಕಂಡಿಲ್ಲ. ಮಾನವ ಸಂಪನ್ಮೂಲ ಹಾಗೂ ಕೈಗಾರಿಕೆಗೆ ಅಗತ್ಯವಿರುವ ಮೂಲಭೂತ ಸೌಕರ್ಯ ಕೊರತೆಯಿಂದ ಬೃಹತ್​ ಕೈಗಾರಿಕೆಗಳು ಜಿಲ್ಲೆಗೆ ಕಾಲಿಡುತ್ತಿಲ್ಲ. ಹಾಗಾಗಿ ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿಯ ಕೊರತೆ ಕಾಡುತ್ತಿದ್ದು, ದಿನೇ ದಿನೆ ನಿರುದ್ಯೋಗ ಸೃಷ್ಟಿಯಾಗುತ್ತಿದೆ.

ಕೆಎಸ್​ಎಸ್​ಐಡಿಸಿ:
ಜಿಲ್ಲೆಯಲ್ಲಿ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ(ಕೆಎಸ್​ಎಸ್​ಐಡಿಸಿ) ಗಜೇಂದ್ರಗಡ, ರೋಣ, ಗದಗ, ಮುಂಡರಗಿ, ಲಕ್ಷ$್ಮಶ್ವರ ಹಾಗೂ ಬೆಟಗೇರಿಯಲ್ಲಿ 6 ಎಸ್ಟೇಟ್​ಗಳನ್ನು ಸ್ಥಾಪಿಸಲಾಗಿದೆ. ರೋಣ ಮತ್ತು ಲೆ$್ಮಶ್ವರ ಎಸ್ಟೇಟ್​ಗಳು ಅಭಿವೃದ್ಧಿಗೊಳ್ಳದ ಹಿನ್ನೆಲೆ ಸ್ಥಳಿಯ ಸಂಸ್ಥೆಗೆ ಇನ್ನೂ ಹಸ್ತಾಂತರಗೊಂಡಿಲ್ಲ. ಜಿಲ್ಲೆಯಲ್ಲೇ ಗಜೇಂದ್ರಗಡ ಕಿರು ಉದ್ಯಮದ ಎಸ್ಟೇಟ್​ ಉತ್ತಮ ಕಾರ್ಯನಿರ್ವಹಿಸುತ್ತಿದ್ದು, ರೋಣ ಪಟ್ಟಣದ ಕೆಎಸ್​ಎಸ್​ಐಡಿಸಿ ನಿವೇಶನಗಳಲ್ಲಿ ಕಿರು ಉದ್ಯಮ ಆರಂಭವೇ ಆಗಿಲ್ಲ. ಈ ಎರಡೂ ಪಟ್ಟಣದ ಕೆಎಸ್​ಎಸ್​ಐಡಿಸಿ ಗೆ ಸಂಬಂಧಿಸಿದಂತೆ ಒಳರಾಜಕಾರಣವೇ ಕಾರಣ ಎಂದು ತಿಳಿಸುಬಂದಿದೆ. 293 ನಿವೇಶನ ಪೈಕಿ 152 ಕಾರ್ಯ ನಿರ್ವಹಿಸುತ್ತಿದ್ದು, ಇನ್ನೂಳಿದವು ನಾನಾ ಕಾರಣದಿಂದ ಅನಿಷ್ಠಾನಗೊಂಡಿಲ್ಲ. ಗಜೇಂದ್ರಗಡದಲ್ಲಿನ ಎಸ್ಟೇಟ್​ನಲ್ಲಿರುವ ಎಲ್ಲ 43 ನಿವೇಶನದಲ್ಲಿ ಕಿರು ಉದ್ಯಮ ಆಂಭಗೊಂಡಿವೆ. ರೋಣದಲ್ಲಿ 43 ನಿವೇಶನದಲ್ಲಿ ಕೇವಲ 8 ಶೆಡ್​ಗಳು ನಿರ್ಮಾಣವಾಗಿದ್ದು, ಉತ್ಪಾದನೆ ಶೂನ್ಯ.
ಮೂಲಗಳ ಪ್ರಕಾರ ಜಿಲ್ಲೆಯಲ್ಲಿ ಕೆಐಎಡಿಬಿ ಮತ್ತು ಕೆಎಸ್​ಎಸ್​ಐಡಿಸಿ ಯಿಂದ ವಿತರಿಸಿದ 440 ನಿವೇಶನಗಳ ಪೈಕಿ 234 ಕಾರ್ಯ ನಿರ್ವಹಿಸುತ್ತಿದ್ದು, 206 ನಿವೇಶನಗಳಲ್ಲಿ ಉತ್ಪಾದನೆ ಪ್ರಕ್ರಿಯೆ ಇನ್ನೂ ಆರಂಭಗೊಂಡಿಲ್ಲ ಎಂದು ತಿಳಿದು ಬಂದಿದೆ.
=====
ಮೂಲಭೂತ ಸಮಸ್ಯೆ:
& ನರಸಾಪುರ ಕೈಗಾರಿಕಾ ವಲಯ ಸ್ಥಾಪನೆಯಾಗಿ 25 ವರ್ಷ ಕಳೆದರೂ ಕೆಐಡಿಬಿ ವತಿಯಿಂದ ಕುಡಿಯುವ ನೀರಿನ ಸೌಲಭ್ಯ ಇಲ್ಲ
& ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದ ಬೃಹತ್​ ಲಾರಿಗಳು ಸಂಚರಿಸುವ ಸಂದರ್ಭದಲ್ಲಿ ಅವಡ
& ವಿದ್ಯುತ್​ ಬಿಲ್​ ಅಧಿಕವಾದ ಹಿನ್ನೆಲೆ ಕಡಿಮೆಗೊಳಿಸಲು ಮನವಿ
& ನಿವೇಶನಗಳು ಸೇಲ್​ ಡಿಡ್​ ಮಾಡಿಕೊಡದ ಹಿನ್ನೆಲೆ ನಿವೇಶನಗಳು ಸರ್ಕಾರದ ಹೆಸರಲ್ಲಿ ವರ್ಗಅವಣೆ. ವಿದ್ಯುತ್​ ದೀಪ ನಿರ್ವಹಣೆ ಇಲ್ಲದೇ ರಾತ್ರಿ ಹೊತ್ತು ಸಂಚಾರಕ್ಕೆ ತೊಂದರೆ.

ಕೋಟ್​:
ಮೂಲಭೂತ ಸಮಸ್ಯೆಗಳಿಂದ ಕಯಗಾರಿಕಾ ವಲಯ ಸೊರಗಿದೆ. ಮತ್ತೊಂದೆಡೆ ಅಧಿಕ ಮೊತ್ತ ಪಾವತಿಸಿ ಎಮದು ಮಂಡಳಿ ನೋಟೀಸಿ ನೀಡಿದ್ದರಿಂದ ಉದ್ಯಮಿಗಳಲ್ಲಿ ನಿರುತ್ಸಾಹ ಮೂಡಿದೆ. ಈ ಕುರಿತು ಜಿಲ್ಲಾ ಸಚಿವರಲ್ಲೂ ಹಲವು ಬಾರಿ ಮನವಿ ಮಾಡಿಕೊಂಡಿದ್ದೇವೆ. ಸಚಿವರು, ಜಿಲ್ಲಾಧಿಕಾರಿಗಳು ಮುತುವಜಿರ್ ವಹಿಸಿ ಖರೀದಿ ಮೊತ್ತವನ್ನು ಕಡಿಮೆಗೊಳಿಸಬೇಕು ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು
ಶಿವಕುಮಾರ ಪಾಟೀಲ, ಅಧ್ಯಕ್ಷರು ನರಸಾಪುರ ಕೈಗಾರಿಕಾ ವಲಯ