ಗದಗ: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿ ಶ್ರೀಮತಿ ಎಂ. ಬಿ. ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದಲ್ಲಿ 78 ನೇ ಸ್ವಾತಂತ್ರೋತ್ಸವದ , ಸ್ವಾತಂತ್ರ್ಯ ಹೋರಾಟಗಾರರಾದ ವಿ. ಡಿ. ಸಾವರ್ಕರ್ ಅವರ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಹಾಗೂ ಸಾವರ್ಕರ್ ಅವರ ಜೀವನದ ಕುರಿತು ಪ್ರಶಿಕ್ಷಣಾರ್ಥಿಗಳಿಗೆ ಮಾಹಿತಿಯನ್ನು ನೀಡಲಾಯಿತು.
ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಗಂಗೂಬಾಯಿ ಪವಾರ ರವರು ವಿನಾಯಕ ದಾಮೋದರ ಸಾವರ್ಕರ್ ತಮ್ಮ ಸಂಪೂರ್ಣ ಜೀವನವನ್ನೇ ಭಾರತದ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟ ಮಹಾನ್ ವಾಗ್ಮಿ, ವಿವಿಧ ವಿಷಯಗಳ ಬಗ್ಗೆ ನಿರರ್ಗಳವಾಗಿ ಬರೆಯಬಲ್ಲ ಲೇಖಕ, ಇತಿಹಾಸಕಾರ, ಕವಿ, ತತ್ವಶಾಸ್ತ್ರಜ್ಞ ಮತ್ತು ಸಮಾಜಸೇವಕ. ಅವರನ್ನು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಅತಿ ದೊಡ್ಡ ಕ್ರಾಂತಿಕಾರಿ ಎಂದು ಪರಿಗಣಿಸಲಾಗುತ್ತದೆ ಎಂದು ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.
ಉಪನ್ಯಾಸಕರಾದ ಎನ್. ಜಿ. ಚನ್ನಪ್ಪಗೌಡ್ರ ರವರು ಸಾವರ್ಕರ್ ಅವರ ಜೀವನ ಮತ್ತು ಅವರ ಅಂಡಮಾನ್ ನ ಕಾಲಾ ಪಾನಿ ಜೈಲು ಶಿಕ್ಷೆಯ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ಪ್ರಶಿಕ್ಷಣಾರ್ಥಿಗಳಾದ ಬಸವರಾಜ, ಸುನೀಲಗೌಡ, ವಿಠ್ಠಲ, ಬೃಂದಾ, ಮೇಘಾ, ಅಂಬಿಕಾ ಮತ್ತು ರೇಷ್ಮಾ ರವರು ಸಾವರ್ಕರ್ ಅವರ ಕುರಿತು ಭಾಷಣವನ್ನು ಮತ್ತು ಅಕ್ಷತಾ, ರವಿಚಂದ್ರ ರವರು ಕವನ ವಾಚನ ಮಾಡಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕರಾದ ಶ್ರೀ ವಿ. ಪಿ. ಪಾಟೀಲ, ಶ್ರೀ ಎನ್. ಜಿ. ಚನ್ನಪ್ಪಗೌಡ್ರ, ಶ್ರೀ ಬಸವರಾಜ ಕರಬಿಷ್ಠಿ, ಶ್ರೀ ಶಶಿಧರ ಹೊಸಳ್ಳಿ ಮತ್ತು ವಿದ್ಯಾಲಯದ ಎಲ್ಲಾ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿಯಾದ ನೇತ್ರಾವತಿ ಕಾರ್ಯಕ್ರಮವನ್ನು ನಿರೂಪಿಸಿದರು, ಜ್ಯೋತಿ ಪ್ರಾರ್ಥನಾಗೀತೆ ಹಾಡಿದರು, ಮರಿದೇವಿ ಸ್ವಾಗತಿಸಿದರು ಮತ್ತು ರಾಜೇಶ್ವರಿ ವಂದಿಸಿದರು.