ಗದಗ: ಪಹಲ್ಗಾಮ್ದಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರವಾದಿಗಳ ದಾಳಿಗೆ ಪ್ರತಿಕಾರವಾಗಿ ಭಾರತೀಯ ಯೋಧರು ಉಗ್ರರ ಒಂಭತ್ತು ನೆಲೆಗಳ ಮೇಲೆ ದಾಳಿ ನಡೆಸಿ ಉಗ್ರರನ್ನು ಕೊಚ್ಚಿ ಹಾಕಿರುವುದು ಅಭಿನಂದನೀಯ ಸಂಗತಿ. ಭಾರತವು ಶಾಂತಿಪ್ರೀಯ ದೇಶವಾಗಿದ್ದರೂ ಈ ದೇಶದ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕದಡುವ ಉಗ್ರರ ಹೀನ ಕೃತ್ಯಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಆಪರೇಶನ್ ಸಿಂಧೂರ ಮೂಲಕ ಉಗ್ರರ ನೆಲೆಗಳನ್ನು ಪತ್ತೆ ಹಚ್ಚಿ ದಾಳಿ ನಡೆಸಿ ತಕ್ಕ ಉತ್ತರ ನೀಡಿದ್ದಾರೆ. ಸಮಸ್ತ ಭಾರತೀಯರು ಜಾತಿ, ಧರ್ಮ, ಪ ಮತ್ತು ಪ್ರದೇಶಗಳ ಭೇದ ಮರೆತು ಭಾರತೀಯ ಸೇನೆಗೆ ಬೆಂಬಲ ವ್ಯಕ್ತಪಡಿಸಿರುವುದು ಈ ದೇಶದ ಐಕ್ಯತೆ ಹಾಗೂ ಸಮಗ್ರತೆಗೆ ಸಾಯಾಗಿದೆ. ಇದು ನಮ್ಮ ಯೋಧರ ಬಲವನ್ನು ಹೆಚ್ಚಿಸಿದೆ ಎಂದು ತೊಂಟದ ಸಿದ್ಧರಾಮ ಶ್ರೀಗಳು ಪ್ರಕಟಣೆ ತಿಳಿಸಿದ್ದಾರೆ.