ಜಿಲ್ಲೆ

ಹುನಗುಂಡಿ ಗ್ರಾಮದಲ್ಲಿ ಪ್ರವಚನ ಕೀರ್ತನ ಮುಕ್ತಾಯ ಸಮಾರಂಭ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ಜಿಲ್ಲೆಯ ರೋಣ ತಾಲೂಕ ಹುನಗುಂಡಿ ಗ್ರಾಮದ ಕೆಂಚಮ್ಮದೇವಿ ದೇವಸ್ಥಾನದಲ್ಲಿ ಬುಧವಾರ ರೇವಣಸಿದ್ದೇಶ್ವರ ಸ್ವಾಮಿಜೀಗಳ ಹಾಗೂ ಶಿವಾನಂದ ಸ್ವಾಮಿಜೀಗಳ ಪ್ರವಚನ ಕೀರ್ತನ ಮುಕ್ತಾಯ ಸಮಾರಂಭ ಜರುಗಿತು. ಗ್ರಾಮದಲ್ಲಿ ರೇವಣಸಿದ್ದೇಶ್ವರ ಭಾವಚಿತ್ರದ ಮೆರವಣೆಗೆ ಮಾಡಿ ಗ್ರಾಮದ ಎಲ್ಲ ದೇವಸ್ಥಾನಗಳಲ್ಲಿ ಪೂಜೆ ಮತ್ತು ಅನ್ನಸಂತಪ್ಣೆ ಸಲ್ಲಿಸಲಾಯಿತು.
ಸಂಜೆ ಜರುಗಿದ ಪುರಾಣ ಮುಕ್ತಾಯ ಸಮಾರಂಭದಲ್ಲಿ ಜಗದ್ಗುರು ಚಿದ್ರೂಪಾನಂದ ಶ್ರೀಗಳು ಆಶೀರ್ವಚನ ನೀಡಿ, ಗ್ರಾಮೀಣ ಪ್ರದೇಶದಲ್ಲಿ ಪುರಾಣ ಪುಣ್ಯಕಥೆಗಳು ಬಹಳ ನಶಿಸಿ ಹೋಗಿವೆ. ಪುರಾಣ, ಪುಣ್ಯಕಥೆಗಳ ಪುನಶ್ಚೇತನಕ್ಕೆ ಹುನಗುಂಡಿ ಗ್ರಾಮದಲ್ಲಿ 12 ವರ್ಷ ಸತತವಾಗಿ ರೇವಣಸಿದ್ದೇಶ್ವರ ಪ್ರವಚನ ಹಾಗೂ ಶಿವಾನಂದ ಪ್ರವಚನ ಕೀರ್ತನಗಳನ್ನು ನಡೆಸಿಕೊಂಡು ಬರಲಾಗಿದೆ. ಗ್ರಾಮದ ಹಿರಿಯರಿಗೆ, ಯುವಕರಿಗೆ, ಮಹಿಳೆಯರಿಗೆ ದೇವರು ಸಕಲ ಸಂಪತ್ತು ನೀಡಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇವೆ ಎಂದು ಆಶೀರ್ವಚನ ನೀಡಿದರು.
ಬಸವಂತಪ್ಪ ತಳವಾರ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಪುರಾಣ, ಪುಣ್ಯಕಥೆಗಳನ್ನು ಗ್ರಾಮಗಳಲ್ಲಿ ಆಗಾಗ ನಡೆಸುತ್ತಿರಬೇಕು. ರೇವಣಸಿದ್ದೇಶ್ವರ ತತ್ವಗಳು ಹಾಗೂ ಶಿವಾನಂದ ತತ್ವಗಳು ತಿಳಿದುಕೊಂಡು ಸಮಾಜದಲ್ಲಿ ಉತ್ತಮರಾಗಿ ಬೆಳೆಯಬೇಕು. ಟಿ.ವಿ. ಮಾಧ್ಯಮಗಳ ಹಾವಳಿಯಲ್ಲಿ, ಚಲನಚಿತ್ರದ ಅಬ್ಬರದಲ್ಲಿ ಗ್ರಾಮೀಣ ಪ್ರದೇಶದ ನಾಟಕಗಳು ಮತ್ತು ರಸಮಂಜರಿ ಕಾರ್ಯಕ್ರಮ ಅಬ್ಬರದಲ್ಲಿ ಪುರಾಣ ಪುಣ್ಯಕಥೆಗಳು ಮಾಯವಾಗಿವೆ. ಗ್ರಾಮದಲ್ಲಿ ಹಿರಿಯರು, ಯುವಕರು ಕೂಡಿಕೊಂಡು ಪುರಾಣ ಪುಣ್ಯಕಥೆಗಳನ್ನು ಪ್ರಾರಂಭಿಸಬೇಕು ಎಂದು ಕರೆ ನೀಡಿದರು.
ಬಿ. ವೈ. ಮಂಡಸೊಪ್ಪಿ, ಸಕ್ಕರಗೌಡ ಶಾಸ್ತ್ರೀಗಳು, ವಿನೋದ ಸಾಲಿಮಠ, ರಾಚಯ್ಯ ಹಿರೇಮಠ, ಬಿ. ಜಿ. ಮುಗಳಿ, ಜಿ. ಎಸ್​. ಮಂಡಸೊಪ್ಪಿ, ಎ. ಎಸ್​. ಗೌಡರ, ಆರ್​. ಬಿ. ಗೂಳಪ್ಪನವರ, ಎಸ್​. ಎಚ್​. ಮಂಡಸೊಪ್ಪಿ ಇತರರು ಇದ್ದರು.