ಜಿಲ್ಲೆ

ಸ್ವಾಮಿ ವಿವೇಕಾನಂದ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿ ಯು ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ.

Gadag - Shivanand Hiremath
 ಹುಲಕೋಟಿ:ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ, ಸಂಘಟನಾ ಭಾವನೆ, ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಹಲವಾರು ನಿರ್ದಶನಗಳ ಮನವರಿಕೆ ಮಾಡಿಕೊಡುವುದರ ಮೂಲಕ ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಛಲ ಇರಬೇಕೆಂದು” ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ದಿನಾಂಕ ೧೮- ೭ -೨೦೨೫ ರಂದು ನಡೆದ ಪ್ರಥಮ ಪಿ.ಯು. ಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಪ್ರಿಯಾ ಎಮ್ ಪಾಟೀಲರು ಹೇಳಿದರು .
          ಕಾರ್ಯಕ್ರಮವು ಕುಮಾರಿ ಶ್ರೇಯಾ ಹಿರೇಮಠಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಕುಮಾರಿ ಭುವನೇಶ್ವರಿ ಚವರಡ್ಡಿ ಎಲ್ಲರನ್ನು ಸ್ವಾಗತಿಸಿದಳು. ದ್ವಿತೀಯ. ಪಿ.ಯು.ಸಿ ವಿದ್ಯಾರ್ಥಿಗಳು ಬ್ಯಾಡ್ಜ್ ಗಳನ್ನು ನೀಡಿ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಹಲವು ಮನರಂಜನಾ ಕಾರ್ಯಕ್ರಮಗಳು ಜರುಗಿದವು. ಪ್ರಥಮ ಪಿ ಯು ಸಿ ವಿದ್ಯಾರ್ಥಿಗಳಿಗೆ ಆಟೋಟಗಳ ಮುಖಾಂತರ ರಂಜಿಸಿ, ಗೆದ್ದಂತಹ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿದರು.
       ಕಾರ್ಯಕ್ರಮವು ಕುಮಾರಿ ಉಜ್ಮಾ ನೂರೈನಳ ವಂದನಾರ್ಪಣೆಯೊಂದಿಗೆ ಮುಕ್ತಾಯವಾಯಿತು. ಕುಮಾರ ಪ್ರಶಾಂತ ಮುಂಡಾಸದ ಹಾಗೂ ಕುಮಾರಿ ಸುಷ್ಮಾ ಪೂಜಾರ ಕಾರ್ಯಕ್ರಮವನ್ನು ನಿರೂಪಿಸಿದರು. ಕುಮಾರಿ ಸೃಷ್ಟಿ ಮುಂಡಾಸದ, ವರ್ಷಾ ಕೋಡಿಕೊಪ್ಪ, ಪ್ರಗತಿ ಮಾಡಳ್ಳಿ, ಅಭಿಷೇಕ ಹಿರೇಮಠ, ಹಾಗೂ ಅಪೂರ್ವ ಹುದ್ದಾರ ಎಲ್ಲಮನರಂಜನಾತ್ಮಕ ಆಟೋಟ ಗಳ ಕಾರ್ಯಕ್ರಮ ನಡೆಸಿಕೊಟ್ಟರು.
        ಸಮಾರಂಭದಲ್ಲಿ ಕಾಲೇಜಿನ ಪ್ರಾಚಾಯರು. ಎಲ್ಲ ಉಪನ್ಯಾಸಕರು, ಉಪನ್ಯಾಸಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು‍ ಭಾಗವಹಿಸಿದ್ದರು.