ಜಿಲ್ಲೆ

ಸ್ವಾಮಿ ವಿವೇಕಾನಂದ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ಯವರ ಜಯಂತಿ ಆಚರಣೆ.

Gadag - Shivanand Hiremath

ಹುಲಕೋಟಿ : ಸ್ಥಳೀಯ ಸ್ವಾಮಿ ವಿವೇಕಾನಂದ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ  ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ  ಮಹಾತ್ಮಾ ಗಾಂಧೀಜಿಯವರ ಜಯಂತಿಯನ್ನು ಆಚರಿಸಲಾಯಿತು.

ಜಯಂತ್ಯೋತ್ಸವವನ್ನು ಅಧ್ಯಕ್ಷಸ್ಥಾನ ವಹಿಸಿದಂತಹ ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಪ್ರಿಯಾ ಎಮ್ ಪಾಟೀಲರು ಗಾಂಧೀಜಿ ಹಾಗೂ ಶಾಸ್ತ್ರೀಜಿ ಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪ್ರಷ್ಪಾರ್ಚನೆ ಮಾಡಿ ಗೌರವಿಸಿದರು.

ಕಾರ್ಯಕ್ರಮವನ್ನು ರಘುಪತಿ ರಾಘವ ರಾಜಾರಾಮ್ ಗೀತೆಯನ್ನು ಭಜಿಸಿ, ಮಹಾತ್ಮರಿಗೆ ಗೌರವಿಸುವುದರೊಂದಿಗೆ ಪ್ರಾರಂಭವಾಯಿತು. ನಂತರ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಾದ ಕುಮಾರಿ ಶ್ರೀತನು ಅಂಗಡಿ ಹಾಗೂ ಕುಮಾರಿ ಮೆಹರುನ್ನೀಸಾ ನದಾಫ ಕಾರ್ಯಕ್ರಮವನ್ನುದ್ದೇಶಿಸಿ ಮಹಾತ್ಮರ ಬಾಲ್ಯ , ಶಿಕ್ಷಣ ಹಾಗೂ ಸಾಧನೆ ಕುರಿತು ವಿಸ್ತಾರವಾಗಿ ಭಾಷಣ ಮಾಡಿದರು. ಕುಮಾರಿ ಕಾವೇರಿ ಭದ್ರಾಪುರ ಭಕ್ತಿಗೀತೆಯನ್ನು ಹಾಡಿದಳು. ಕಾಲೇಜಿನ ಉಪನ್ಯಾಸಕಿ ಯರಾದ ಶ್ರೀಮತಿ ಜಯಶ್ರೀ ಹೊಳೆಯಣ್ಣವರ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಲ್ಲದೆ ಎಲ್ಲರನ್ನು ವಂದಿಸುವುದರೊಂದಿಗೆ ಕಾರ್ಯಕ್ರಮವನ್ನುನಿರೂಪಣೆಗೈದರು. 

ಕಾರ್ಯಕ್ರಮದಲ್ಲಿ ಎಲ್ಲ ಉಪನ್ಯಾಸಕರು , ಉಪನ್ಯಾಸಕೇತರ ಸಿಬ್ಬಂಧಿಗಳು ಹಾಗೂ ಎಲ್ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.