ಜಿಲ್ಲೆ

ರಾಜೇಶ್ವರಿ ವಿದ್ಯಾನಿಕೇತನದ ಮಕ್ಕಳಿಗೆ ಹೃದಯ ಪುನಶ್ಚೇತನ ತರಬೇತಿ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ಇತ್ತೀಚಿನ ದಿನಗಳಲ್ಲಿ ಹೃದಯಾಘಾತಗಳು ಹಾಗೂ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿವೆ. ಇವುಗಳಿಗೆ ಯುವಕರು ಮತ್ತು ಮಕ್ಕಳು ಬಲಿಯಾಗುತ್ತಿರುವುದು ದುಷ್ಟಕರ ವಿಷಯ. ಹೃದಯಾಘಾತಗಳಿಗೆ ಬದಲಾದ ಜೀವನ ಶೈಲಿ ಎಂದು ಡಾ. ಎನ್​. ಗುರುಪ್ರಸಾದ ಹೇಳಿದರು.

ತಾಲೂಕಿನ ಹುಲಕೊಟಿ ಗ್ರಾಮದ ರಾಜೇಶ್ವರಿ ವಿದ್ಯಾನಿಕೇತನ ಮಕ್ಕಳಿಗೆ ಏರ್ಪಡಿಸಿದ್ದ ಸಿಪಿಆರ್​ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹೃದಯಾಘಾತ ಮತ್ತು ಅಪಘಾತಕ್ಕೆ ಒಳಗಾದ ವ್ಯಕ್ತಿಯನ್ನು ಪ್ರಾಣಾಪಾಯದಿಂದ ಹೇಗೆ ರಣೆ ಮಾಡಬೇಕು ಎಂಬುದನ್ನು ತರಬೇತಿ ಮೂಲಕ ತಿಳಿಸಲಾಗುವುದು. ಈ ಹೃದಯಾಘಾತಗಳು, ಅಪಘಾತಗಳು ಸಂಭವಿಸಿದಾಗ ಕೆಲವು ಮುನ್ನೆಚ್ಚರಿಕೆಯ ಕಾಳಜಿ ಹಾಗೂ ಕ್ರಮಗಳನ್ನು ತೆಗೆದುಕೊಂಡರೆ ಅಪಘಾತಕ್ಕೆ ಈಡಾದ ವ್ಯಕ್ತಿಗಳನ್ನು ಪ್ರಾಣಾಪಾಯದಿಂದ ಕಾಪಾಡಬಹುದು. ತುರ್ತು ಸ್ಥಿತಿಯಲ್ಲಿ ಉಸಿರಾಟ ನಿಂತಾಗ ಅಥವಾ ಹೃದಯ ಬಡಿತ ನಿಂತಾಗ ಆ ಜೀವವನ್ನು ಉಳಿಸಲು ಏನು ಮಾಡಬೇಕು ಎಂಬುದೇ ಈ ತರಬೇತಿಯ ಉದ್ದೇಶವಾಗಿದೆ ಎಂದು ಹೇಳಿದರು.

ಅಪಘಾಕ್ಕೆ ಈಡಾದ ವ್ಯಕ್ತಿಯನ್ನು ಕಂಡೊಡನೆ ತಣ ನೆರವಿಗೆ ಧಾವಿಸಬೇಕು. ವ್ಯಕ್ತಿಯ ಉಸಿರಾಟವನ್ನು ಪರೀಸಬೇಕು. ಆ ವ್ಯಕ್ತಿಗೆ ನೀರು ಕುಡಿಸಬಾರದು. ನೆರವಿಗಾಗಿ ಹತ್ತಿರದಲ್ಲಿ ಇದ್ದವರನ್ನು ಕರೆಯಬೇಕು. ಆ ವ್ಯಕ್ತಿಯನ್ನು ಸರಿಯಾಗಿ ಉಸಿರಾಡಲು ಸಹಾಯವಾಗುವ ಸ್ಥಿತಿಯಲ್ಲಿ ಮಲಗಿಸಬೇಕು, ತಣ 108 ಆಂಬ್ಯುಲನ್ಸ್​ಗೆ ಕರೆ ಮಾಡಿ ಸಂರ್ಪೂಣ ಮಾಹಿತಿ ನೀಡಬೇಕು. ಹತ್ತಿರದ ಆಸ್ಪತ್ರೆಗೆ ದಾಖಲಿಸಬೇಕು ಎಂದರು.

ಎಚ್​. ಸಿ. ಓಲೇಕಾರ, ಡಿ. ಬಿ. ಓದುಗೌಡರ, ಡಾ. ಸತೀಶ ಹೊಂಬಾಳೆ, ವೈ. ಆರ್​. ಶೆಟ್ಟಿ, ವಿ. ಎ. ರಾಯಭಟ್ಟನವರ ಇತರರು ಇದ್ದರು.