ಜಿಲ್ಲೆ

ನೈಸಗಿರ್ಕ ಕೃಷಿ ಕುರಿತು ತರಬೇತಿ ಸಭೆ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ತಾಲೂಕಿನ ಹುಲಕೋಟಿ ಗ್ರಾಮದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ರಾಷ್ಟ್ರೀಯ ಮಿಷನ್​ ಯೋಜನೆಯ ನೈಸಗಿರ್ಕ ಕೃಷಿಯಲ್ಲಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ ಶಿಬಿರ ನಡೆಯಿತು.

ಉಪ ಕೃಷಿ ನಿರ್ದೇಶಕ ಸ್ಪೂತಿರ್ ಜಿ.ಎಸ್​. ಮಾತನಾಡಿ, ರೈತರಿಗೆ ನೈಸಗಿರ್ಕ ಕೃಷಿ ತಾಂತ್ರಕತೆಗಳನ್ನು ವರ್ಗಾವಣೆ ಮಾಡುವ ಪ್ರಕ್ರಿಯೆಯಲ್ಲಿ ಕೃಷಿ ಸಖಿಯರ ಪಾತ್ರ ಮುಖ್ಯವಾಗಿದೆ. ರೈತರು ನೈಸಗಿರ್ಕ ಕೃಷಿಯನ್ನು ಮಾಡಿ ಮಣ್ಣಿನ ಆರೋಗ್ಯವನ್ನು ಕಾಪಾಡಿ ಜನಸಾಮಾನ್ಯರಿಗೆ ವಿಷಮುಕ್ತ ಆಹಾರವನ್ನು ನೀಡಬೇಕು. ಕೃಷಿ ವಿಸ್ತರಣಾ ಕಾರ್ಯಕರ್ತರಾಗಿ ತಮ್ಮ ಗ್ರಾಮದಲ್ಲಿ ರೈತರಿಗೆ ನೈಸಗಿರ್ಕ ಕೃಷಿಯ ಕುರಿತು ಮಾಹಿತಿ ನೀಡಬೇಕು. ರೈತರು ನೈಸಗಿರ್ಕ ಕೃಷಿಯನ್ನು ಮಾಡಲು ಪ್ರೇರಣೆ ನೀಡಬೇಕು ಎಂದರು.

ಹಿರಿಯ ವಿಜ್ಞಾನಿ ಡಾ. ಸುಧಾ ಮಂಕಣಿ ಮಾತನಾಡಿ, ನೈಸಗಿರ್ಕ ಕೃಷಿ ತರಬೇತಿಯು ಒಂದು ವಿಶೇಷ ತರಬೇತಿಯಾಗಿದೆ. ಈ ನಿಟ್ಟಿನಲ್ಲಿ ಕೃಷಿ ಸಖಿಯರು ರೈತರನ್ನು ನೈಸಗಿರ್ಕ ಕೃಷಿ ಅಳವಡಿಸಿಕೊಳ್ಳಲು ಪ್ರೋತ್ಸಾಹ ನೀಡಬೇಕು. ರೈತರಿಗೆ ನೈಸಗಿರ್ಕ ಕೃಷಿಯ ಮಹತ್ವ ತಿಳಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ನೈಸಗಿರ್ಕ ಕೃಷಿ ತರಬೇತಿ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ನೈಸಗಿರ್ಕ ಕೃಷಿಯ ಪರಿಕರಗಳ ತಯಾರಿಕೆಯ ಪ್ರಾತ್ಯಕೆ ಹಾಗೂ ಅವುಗಳ ಮಹತ್ವ, ಮಣ್ಣಿನಲ್ಲಿರುವ ಪೋಷಕಾಂಶಗಳು, ಸಾವಯವ ಪರಿಕರಗಳು, ಹೈನು ದನಗಳ ಪೋಷಣೆ, ನೈಸಗಿರ್ಕ ಕೃಷಿಯಲ್ಲಿ ತೋಟಗಾರಿಕೆ ಕುರಿತು ವಿಶೇಷ ಉಪನ್ಯಾಸ ನೀಡಲಾಯಿತು. ಪ್ರಗತಿಪರ ರೈತರು ತಮ್ಮ ನೈಸಗಿರ್ಕ ಕೃಷಿ ವಿಧಾನ ಹಂಚಿಕೊಂಡರು.

ನಾರಾಯಣ ಭಂಡಿ, ಡಾ. ಚೇತನ ಬಾಬು, ಹೇಮಾವತಿ ಹಿರೇಗೌಡರ ಇತರರು ಇದ್ದರು.