ಜಿಲ್ಲೆ

ಎಂ.ಬಿ.ಎಚ್. ಹುಯಿಲಗೋಳ ಶಿಕ್ಷಣ ವಿದ್ಯಾಲಯದಲ್ಲಿ ಬ್ಲ್ಯಾಕ್ and ಬ್ಲ್ಯೂ ಡೇ ಆಚರಣೆ.

Gadag - Shivanand Hiremath
ಗದಗ: ನಗರದ ಶತಮಾನ ಪೂರೈಸಿದ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿಯ ಶ್ರೀಮತಿ ಎಂ. ಬಿ. ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜನೆ ಮಾಡಿರುವ "ಫನ್ ವೀಕ್" ನ ಐದನೇಯ ದಿನವಾದ ವಿಶೇಷ ಬ್ಲಾಕ್ ಮತ್ತು ಬ್ಲ್ಯೂ (ಕಪ್ಪು ಮತ್ತು ನೀಲಿ) ಡೇ ಆಚರಣೆ ಮಾಡಲಾಯಿತು. ಎಲ್ಲಾ ಪ್ರಶಿಕ್ಷಣಾರ್ಥಿಗಳು ಕಪ್ಪು ಮತ್ತು ನೀಲಿ ಬಣ್ಣದ ಉಡುಗೆಗಳನ್ನು ಧರಿಸಿದ್ದು ತುಂಬಾ ಆಕರ್ಷಣಿಯವಾಗಿತ್ತು ಹಾಗೂ ನಗರದ ಮೇಕಪ್ ಎಕ್ಸ್ ಪರ್ಟ್ ಮಾಲಕರಾದ ಶ್ರೀಮತಿ ಶೋಭಾ ಕೊಂಡಗೋಳಿ ಅವರು  ಅತಿಥಿಗಳಾಗಿ ವಿದ್ಯಾಲಯಕ್ಕೆ ಆಗಮಿಸಿ, ಮದುವೆ, ಸಮಾರಂಭ, ಮತ್ತು ಉತ್ಸವಗಳಿಗೆ ಸೂಕ್ತವಾದ ಮೇಕಪ್ ಹೇಗಿರಬೇಕು ಮತ್ತು ಸರಿಯಾದ ಮೇಕಪ್ ಮಾಡುವುದು ಹೇಗೆ ಎಂಬುದನ್ನು ಅವರು ಪ್ರಾಯೋಗಿಕವಾಗಿ ತೋರಿಸಿದರು ಜೊತೆಗೆ ಪ್ರಶಿಕ್ಷಣಾರ್ಥಿಗಳಿಗೆ ಸೌಂದರ್ಯದ ಮಹತ್ವ ಹಾಗೂ ಅದನ್ನು ಸ್ವಾಭಾವಿಕವಾಗಿ ಕಾಪಾಡಿಕೊಳ್ಳುವ ವಿಧಾನಗಳನ್ನು ವಿವರಿಸಿದರು.
ಮೇಕಪ್ ಕುರಿತು ಪ್ರಶಿಕ್ಷಣಾರ್ಥಿಗಳು ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡು, ಹಲವು ಪ್ರಶ್ನೆಗಳನ್ನು ಕೇಳುವ ಮೂಲಕ ಮಾಹಿತಿಯನ್ನು ಸಂಪಾದಿಸಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿದ್ಯಾದಾನ ಸಮಿತಿಯ ಕ್ರಿಯಾಶೀಲ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ಹುಯಿಲಗೊಳ ರವರು, ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಗಂಗೂಬಾಯಿ ಪವಾರ ರವರು ಹಾಗೂ ಮಹಾವಿದ್ಯಾಲಯದ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ  ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.