ಜಿಲ್ಲೆ

ಶಾಲೆಗೆ ಹೊರಟ್ಟಿ ಅವರ ಕೊಡುಗೆ ಅಪಾರ: ವಿದ್ಯಾವತಿ ಗಡಗಿ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ಕಳೆದ ನಾಲ್ಕು ದಶಕಗಳಿಂದ ಸಾರ್ವಜನಿಕ ಜೀವನದಲ್ಲಿರುವ ಸಭಾಪತಿ ಬಸವರಾಜ ಹೊರಟ್ಟಿಯವರು ನಾಡಿಗೆ ಸಾಕಷ್ಟು ಜನಪರ ಸೇವೆಯನ್ನು ಸಲ್ಲಿಸಿದ್ದಾರೆ. ವಿಶೇಷವಾಗಿ ಗದಗ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು ನೀಡುವ ಮೂಲಕ ತಮ್ಮ ಶಾಸಕರ ಪ್ರದೇಶಾಭಿವೃದ್ಧಿ ಅನುದಾನವನ್ನು ಗದಗ ಜಿಲ್ಲೆಗೆ ಸಾಕಷ್ಟು ನೀಡಿದ್ದಾರೆ. ಹೀಗಾಗಿ ಅವರ ಸೇವೆಯನ್ನು ಗದಗ ಜನತೆ ಸದಾ ಸ್ಮರಿಸುತ್ತಾರೆ ಎಂದು ನಗರಸಭೆ ಸದಸ್ಯೆ ವಿದ್ಯಾವತಿ ಗಡಗಿ ಹೇಳಿದರು.
ಸಭಾಪತಿ ಬಸವರಾಜ ಹೊರಟ್ಟಿ ದಂಪತಿಗಳು ದತ್ತುಪಡೆದ ಸ್ಥಳಿಯ ಸಿದ್ಧಲಿಂಗ ನಗರದ ಸರಕಾರಿ ಪ್ರೌಢಶಾಲೆಯಲ್ಲಿ ನಗರಸಭೆಯ ಅನುದಾನದ ಅಡಿಯಲ್ಲಿ ನಿರ್ಮಾಣ ಗೊಳ್ಳುತ್ತಿರುವ ಹೈಮಾಸ್ಟ ಲೈಟ್​ ಮತ್ತು ್ಲೇವರ್ಸ ಜೋಡಣೆ ಭೂಮಿ ಪೂಜೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿ, ಸಿದ್ಧಲಿಂಗ ನಗರ ಸರ್ಕಾರಿ ಪ್ರೌಢಶಾಲೆ ರಾಜ್ಯದಲ್ಲಿಯೇ ಒಂದು ಮಾದರಿ ಶಾಲೆ ಆಗುವತ್ತ ದಾಪುಗಾಲು ಇಡುತ್ತಿದೆ. ದಿನದಿಂದ ದಿನಕ್ಕೆ ತನ್ನ ಕಳೆಯನ್ನು ಹೆಚ್ಚಿಸಿಕೊಂಡು ವಿದ್ಯಾಥಿರ್ಗಳನ್ನು ಕೈ ಮಾಡಿ ಕರೆಯುತ್ತಿದೆ. ಇದು ಗದಗ ಜಿಲ್ಲೆಯ ಜನತೆಗೆ ಒಂದು ಹೆಮ್ಮೆಯ ವಿಷಯ ಎಂದರು.
ಬಸವರಾಜ ಧಾರವಾಡ ಮಾತನಾಡಿ, ಶಾಲೆಯಲ್ಲಿದ್ದ ಎಲ್ಲ ಕೊರತೆಗಳನ್ನು ನೀಗಿಸಿ ಒಂದು ಮಾದರಿ ಶಾಲೆಯನ್ನಾಗಿ ನಿಮಿರ್ಸುವಲ್ಲಿ ಬಸವರಾಜ ಹೊರಟ್ಟಿಯವರ ಸಹಕಾರದ ಜೊತೆಗೆ ವಿವಿಧ ಜನಪ್ರತಿನಿಧಿಗಳು, ದಾನಿಗಳು, ಜಿಲ್ಲಾಡಳಿತ, ನಗರಸಭೆಯವರು ಕೈ ಜೋಡಿಸಿದ್ದಾರೆ. ಹೀಗಾಗಿ ಅವರ ಸೇವೆಯನ್ನು ಎಂದೂ ಮರೆಯಲಾರರು. ಈ ಶಾಲೆ ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿಯೇ ಒಂದು ಮಾದರಿ ಶಾಲೆಯಾಗಿ ನಿರ್ಮಾಣಗೊಳ್ಳುತ್ತದೆ. ಈ ಶಾಲೆ ಅಭಿವೃದ್ಧಿಗೆ ವಿಶೇಷವಾಗಿ ಕೈಜೋಡಿಸಿದ ಹಿಂದಿನ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್​. ಅವರ ಸೇವೆಯನ್ನು ಮರೆಯಲು ಸಾಧ್ಯವಿಲ್ಲ ಇಲ್ಲ ಎಂದರು.
ತೋಟೋಸಾ ಬಾಂಡಗೆ, ಎಂ. ಆರ್​. ರಾಜೋಳಿ, ಪಿ. ಆರ್​. ಇನಾಮದಾರ, ಆರ್​. ಎಂ. ಕುಬೇರ, ಎಸ್​. ಎಂ. ಅಗಡಿ, ಅಮರನಾಥ ಗಡಗಿ, ರವಿ ನರೇಗಲ್ಲ, ವಂದನಾ ವೆರ್ಣೇಕರ, ಜಯಲಕ್ಷಿ$್ಮ ಅಣ್ಣಿಗೇರಿ, ಶಂಕ್ರಮ್ಮ ಹಣಮಗೌಡ್ರು ಇತರರು ಇದ್ದರು.