ಗದಗ ಸಿದ್ಧಲಿಂಗ ನಗರದ ಸರ್ಕಾರಿ ಪ್ರೌಢಶಾಲೆಗೆ ಇತ್ತೀಚೆಗೆ ಭೇಟಿ ನೀಡಿದ್ದ ಬಸವರಾಜ ಹೊರಟ್ಟಿ ದಂಪತಿಗಳನ್ನು ಸನ್ಮಾನಿಸಲಾಯಿತು. ಬಸವರಾಜ ದಾರವಾಡ, ಆರ್​. ಎಸ್​. ಬುರಡಿ, ಜಯಲಕ್ಷಿ$್ಮ ಅಣ್ಣಿಗೇರಿ, ಹೇಮಲತಾ ಹೊರಟ್ಟಿ, ರವೀಂದ್ರ ಶೆಟ್ಟೆಪ್ಪನವರ, ಮುರಳಿ ಸೊಲ್ಲಾಪುರ, ಶಂಕ್ರಮ್ಮ ಹಣಮಗೌಡ್ರು, ಎಂ. ಐ. ಶಿವನಗೌಡ್ರು ಇತರರು ಇದ್ದರು. 
ಜಿಲ್ಲೆ

ಮೌಲ್ಯಾಧಾರಿತ ಹಾಗೂ ಸಂಸ್ಕಾರ ಇಂದು ಅತ್ಯವಶ್ಯ: ಸಭಾಪತಿ ಬಸವರಾಜ ಹೊರಟ್ಟಿ.

Gadag - Shivanand Hiremath

ವಿಜಯವಾಣಿ ಸುದಿಜಾಲ ಗದಗ

ಆಧುನಿಕ ಯುಗದಲ್ಲಿ ಕೇವಲ ಅಂಕ ಆಧಾರಿತ ಶಿಣದತ್ತ ಎಲ್ಲರ ಗಮನ ಕೇಂದ್ರೀಕೃತವಾಗಿದೆ. ಅಂಕಗಳು ವಿದ್ಯಾಥಿರ್ಗಳಿಗೆ ಪದವಿ, ಉದ್ಯೋಗಗಳನ್ನು ಒದಗಿಸಿದರೆ ಅವರ ಸುಂದರ ಭವಿಷ್ಯವನ್ನು ಕಟ್ಟಿಕೊಳ್ಳಲು ಮೌಲ್ಯಾಧಾರಿತ ಹಾಗೂ ಸಂಸ್ಕಾರಯುತ ಶಿಣ ಅತ್ಯವಶ್ಯವಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿಯವರು ಹೇಳಿದರು.

ಸಿದ್ಧಲಿಂಗ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಆರಂಭಗೊಂಡ ವಿವಿಧ ಕಾಮಗಾರಿಗಳನ್ನು ವೀಣೆ ಮಾಡಿದ ನಂತರ ಸಿಬ್ಬಂದಿಯವರು ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ಇತ್ತೀಚೆಗೆ ಸರ್ಕಾರಿ ಶಾಲೆಗಳು ಮಕ್ಕಳ ಸಂಖ್ಯೆಯ ಕೊರತೆಯಿಂದ ಮುಚ್ಚುವ ಸ್ಥಿತಿಯನ್ನು ತಲುಪಿವೆ. ಆದರೆ ಅದಕ್ಕೆ ಅಪವಾದ ಎನ್ನುವಂತೆ ನಾನು ದತ್ತುಪಡೆದ ಸಿದ್ಧಲಿಂಗ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ 450ಕ್ಕೂ ಹೆಚ್ಚು ಮಕ್ಕಳು ಅಧ್ಯಯನ ಮಾಡುತ್ತಿರುವುದು ಸಾಕಷ್ಟು ಖುಷಿಯಾಗಿದೆ. ನಮ್ಮ ಶ್ರಮ ಸಾರ್ಥಕವಾಗಿದೆ ಎಂದು ಹೇಳಿದರು. ಇಲ್ಲಿನ ಮಕ್ಕಳಿಗೆ ಅಭ್ಯಾಸದ ಜೊತೆಗೆ ಮೌಲ್ಯಾಧಾರಿತ ಶಿಣ, ಸಂಸ್ಕಾರ, ತಂದೆ ತಾಯಿಗಳಿಗೆ ಗೌರವಿಸುವ ಪರಿಪಾಠವನ್ನು ಹೆಚ್ಚೆಚ್ಚು ಹೇಳಿಕೊಡಬೇಕು. ಬದುಕನ್ನು ಕಟ್ಟಿಕೊಳ್ಳಲು ಶಿಣದಿಂದ ಸಾಧ್ಯವಾದರೆ ಸುಂದರ ಜೀವನವನ್ನು ಸಾಗಿಸಲು ಸಂಸ್ಕಾರ ಅತ್ಯವಶ್ಯವಾಗಿದೆ ಎಂದು ಹೇಳಿದರು.

ಶಾಲಾ ದತ್ತು ಉಸ್ತುವಾರಿಯ ಮಾರ್ಗದರ್ಶಕ ಡಾ.ಬಸವರಾಜ ಧಾರವಾಡ ಮಾತನಾಡಿ, ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ವಿವಿಧ ಜನಪ್ರತಿನಿಧಿಗಳ ಮತ್ತು ಹಲವಾರು ದಾನಿಗಳ ಸಹಕಾರದಿಂದ ಈ ಶಾಲೆಯನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಅಭಿವೃದ್ಧಿಪಡಿಸಲು ಸಾಧ್ಯವಾಗಿದೆ. ಅವರ ಎಲ್ಲ ಸಹಕಾರವನ್ನು ನೆನೆಯುವುದಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಬಸವರಾಜ ಹೊರಟ್ಟಿ ದಂಪತಿಗಳನ್ನು ಸನ್ಮಾನಿಸಲಾಯಿತು.

ಡಿಡಿಪಿಐ ಆರ್​. ಎಸ್​. ಬುರಡಿ, ಜಯಲಕ್ಷಿ$್ಮ ಅಣ್ಣಿಗೇರಿ, ಹೇಮಲತಾ ಹೊರಟ್ಟಿ, ರವೀಂದ್ರ ಶೆಟ್ಟೆಪ್ಪನವರ, ಮುರಳಿ ಸೊಲ್ಲಾಪುರ, ಶಂಕ್ರಮ್ಮ ಹಣಮಗೌಡ್ರು, ಎಂ. ಐ. ಶಿವನಗೌಡ್ರು, ಮಂಜುಳಾ ಸಾಮ್ರಾಣಿ, ಸುಮಂಗಲ ಪತ್ತಾರ, ಶಾರದಾ ಬಾಣದ, ಶೋಭಾ ಗಾಳಿ, ರಮೇಶ್​ ಬಸರಿ, ಸಾವಿತ್ರಿ ಗದ್ದನಕೇರಿ, ಎನ್​. ಆರ್​. ಶಿರೋಳ ಇತರರು ಇದ್ದರು.