oplus_2 
ಜಿಲ್ಲೆ

ಹೈವೆ ಡಕಾಯಿತಿ ಪ್ರಕರಣ! ರಾಜ್ಯದ್ಯಾಂತ 18 ಕಡೆ FIR, ಇಬ್ಬರ ಬಂಧನ ! ಇನ್ನೂಳಿದ ಐವರಿಗೆ ಹುಡಕಾಟ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ಮನೆ ಕಳ್ಳತನ, ಸರಳ ಕಳ್ಳತನ, ಬೈಕ್​ ಕಳ್ಳತನ ಮತ್ತು ಹೈವೆ ರಾಬರಿ ಸೇರಿದಂತೆ ವಿವಿಧ ಪ್ರಕರಣದಲ್ಲಿ ರಾಜ್ಯದ ಯದಾರು ಜಿಲ್ಲೆಗೆ ಬೇಕಾಗಿದ್ದ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿ, ಚಿನ್ನಾಭರಣ ಒಶಪಡಿಸಿಕೊಳ್ಳಲಾಗಿದೆ. ಇನ್ನೂ ಐವರು ಆರೋಪಿಗಳ ಹುಡಾಕಟಕ್ಕೆ ತನಿಖಾ ತಂಡ ಪ್ರಯತ್ನಿಸುತ್ತಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಬಿ. ಎಸ್​. ನೇಮಗೌಡ ಹೇಳಿದರು.

ಜಿಲ್ಲಾ ಪೊಲೀಸ್​ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದ ಬಸವರಾಜ ಮೋಡಿಕೇರ(21) ಮತ್ತು ಕೊಂಚಿಗೇರಿಯ ಬಾಂಡೆ ವ್ಯಾಪಾರಸ್ಥ ಚಿರಂಜೀವಿ ಮೋಡಿಕೇರ(22) ಬಂಧಿತ ಆರೋಪಿಳಾಗಿದ್ದಾರೆ. ಇನ್ನೂ 5 ಆರೋಪಿಗಳ ಬಂಧನಕ್ಕೆ ತನಿಖಾ ತಂಡ ನೇಮಿಸಲಾಗಿದೆ ಎಂದರು.

ಕಳೆದ ಡಿಸೆಂಬರ್​ ತಿಂಗಳಲ್ಲಿ ಮುಂಡರಗಿ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಹೈವೆ ರಾಬರಿ, ಬೈಕ್​ ಕಳ್ಳತನ ಪ್ರಕರಣ ದಾಖಲಾಗಿದ್ದವು. ಈ ಪ್ರಕರಣ ಬೆನ್ನು ಹತ್ತಿದಾಗ ಪ್ರಕರಣ ಹಿಂದೆ ರಾಬರಿ ಗ್ಯಾಂಗ್​ ಇರುವುದು ಪತ್ತೆ ಆಗಿದೆ. ಮುಂಡರಗಿ ಠಾಣಾ ವ್ಯಾಪ್ತಿಯಲ್ಲಿ ಕಳ್ಳತವಾದ 7 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ. ತನಿಖೆ ವೇಳೆ ಸೇರಿದಂತೆ, ತುಮಕೂರು, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಶಿರಾ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಇವರ ಮೇಲೆ ಇಂತಹ ರಾಬರಿ ಪ್ರಕರಣಗಳು ದಾಖಲಾಗಿರುವ ಮಾಹಿತಿ ಇದೆ. ಒಟ್ಟು 18 FIR​ ಆರೋಪಿತರ ಮೇಲೆ ದಾಖಲಾಗಿದ್ದು, ಇತರೆ ಜಿಲ್ಲಾ ಪೊಲೀಸರೊಂದಿಗೆ ಮಾಹಿತಿ ಹಂಚಿಕೊಳ್ಳಲಾಗುವುದು. ಪೊಲೀಸ್​ ತನಿಖಾಂ ತಂಡಕ್ಕೆ ಇಲಾಖೆಯಿಂದ ಬಹುಮಾನ ನೀಡಲಾಗುವುದು ಎಂದರು.

ಜಾಮೀನು ರದ್ದತಿಗೆ ಮನವಿ:

ಬಂಧಿತ ಆರೋಪಿಗಳು ಇದಕ್ಕೂ ಮೊದಲು ಹಲವು ಪ್ರಕರಣದಲ್ಲಿ ಬೇರೆ ಜಿಲ್ಲೆಗಳಲ್ಲಿ ಬಂಧಿತರಾಗಿದ್ದರು. ಜಾಮೀನು ಪಡೆದು ಹೊರಗಿದ್ದರು. ಹಾಗಾಗಿ ಆರೋಪಿಗಳ ಜಾಮೀನು ರದ್ದತಿಗೆ ನ್ಯಾಯಾಲಯಕ್ಕೆ ಅಜಿರ್ ಸಲ್ಲಿಸಲಾಗುವುದು ಎಂದು ಎಸ್ಪಿ ಬಿ.ಎಸ್​. ನೇಮಗೌಡ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ಎಸ್​.ಬಿ. ಸಂಕದ, ಡಿಎಸ್​ಪಿ, ಪ್ರಭುಗೌಡ ಕಿರೇದಳ್ಳಿ, ಪಿ.ಎಸ್​. ವಿ.ಜಿ. ಪವಾರ, ಬಿ.ಎನ್​. ಯಳವತ್ತಿ, ಎಸ್​. ಎಂ. ಹಡಪದ, ಎಸ್​.ಡಿ. ನತಿರ್, ಎನ್​. ಐ. ಮೌಲ್ವಿ ಜೆ. ಐ. ಬಚ್ಚೇರಿ, ಲಕ್ಷ$್ಮಣ ಲಮಾಣಿ, ಆನಂದ್​ ಸಿಂಗ್​, ಮಹೇಶ ಗೊಳಗೊಳಕಿ, ಮಲ್ಲಿಕಾರ್ಜುನ ಬನ್ನಿಕೊಪ್ಪ ಇತರರು ಇದ್ದರು.

22 ಲಕ್ಷದ ಮೊಬೈಲ್​ ವಶ:

ಜಿಲ್ಲೆಯಲ್ಲಿ 126 ಮೊಬೈಲ್​ ಕಳ್ಳತನ ಪ್ರಕರಣ ಬೇಧಿಸಿರುವ ಕುರಿತು ಮಾಹಿತಿ ನೀಡಿದ ಬಿ.ಎಸ್​. ನೇಮಗೌಡ ಅವರು, ಒಟ್ಟು 22 ಲಕ್ಷ ಮೌಲ್ಯದ ಮೊಬೈಲ್​ ಪತ್ತೆ ಹಚ್ಚಿ ಮಾಲೀಕರಿಗೆ ವಿತರಿಸಲಾಗುತ್ತಿದೆ. ರಾಜ್ಯದಲ್ಲಿ ಮೊಬೈಲ್​ ಕಳ್ಳತನ ಪ್ರಕರಣ ಪತ್ತೆ ಹಚ್ಚುವಲ್ಲಿ ಗದಗ ಜಿಲ್ಲೆ ಮೊದಲ ಸ್ಥಾನದಲ್ಲಿ ಇದೆ ಎಂದು ತಿಳಿಸಿದರು