ಶಿವಾನಂದ ಹಿರೇಮಠ ಗದಗ
ಎಐಸಿಸಿ ಬಿಡುಗಡೆ ಮಾಡಿದ ಲೋಕಸಭೆ ಟಿಕೆಟ್ ಮೊದಲ ಪಟ್ಟಿಯಲ್ಲಿ ಗದಗ - ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ವೀರಶೈವ ಲಿಂಗಾಯತ ಸಮುದಾಯದ ಅಬ್ಯಥಿರ್ಗೆ ಟಿಕೆಟ್ ನೀಡುವುದರ ಮೂಲಕ ಜಾತಿ ಸಮೀಕರಣದ ಗಾಳ ಊರುಳಿಸಿದೆ. ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡುತ್ತಿದ್ದಂತೆ ಅಳೆದು ತೂಗಿ ಟಿಕೆಟ್ ನೀಡುವ ಅನಿವಾರ್ಯತೆ ಬಿಜೆಪಿ ಪಾಳಯದಲ್ಲಿ ಸೃಷ್ಟಿಯಾಗಿದೆ. ಕ್ಷೇತ್ರದ ಅರಳಿಕಟ್ಟೆಗಳಲ್ಲಿ ಈಗಾಗಲೇ ಜಾತಿ ಸಮೀಕರಣದ ಲೆಕ್ಕಾಚಾರ ಶುರುವಾಗಿದೆ.
ಪೈಪೋಟಿ ನಡುವೆಯೂ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಟಿಕೆಟ್ ಸಿಗಲು ತಂದೆ ಜಿ.ಎಸ್. ಗಡ್ಡದೇವರಮಠ ಮತ್ತು ಸಚಿವ ಎಚ್.ಕೆ. ಪಾಟೀಲ ಪ್ರಭಾವವು ಮುಖ್ಯ ಕಾರಣ ಎಂಬುದು ಸತ್ಯ.
2008ರಲ್ಲಿ ಲೋಕಸಭಾ ಕ್ಷೇತ್ರ ಮರು ವಿಂಗಡಣೆ ನಂತರ ಬಿಜೆಪಿಯು ವೀರಶೈವ ಲಿಂಗಾಯತ ಸಮುದಾಯದ ಶಿವಕುಮಾರ ಉದಾಸಿ ಅವರಿಗೆ ಟಿಕೆಟ್ ನೀಡಿತ್ತು ಮತ್ತು ನಿರಂತರ ಕ್ಷೇತ್ರವನ್ನು ತನ್ನ ತೆಕ್ಕೆಗೆ ಬಾಚಿಕೊಂಡಿತ್ತು. ಕಾಂಗ್ರೆಸ್ ಪಕ್ಷವು 2009, 2014 ರಂದು ಮುಸ್ಲಿಂ ಸಮುದಾಯ ಮುಖಂಡ ಎರಡು ಬಾರಿ ಸಲೀಂ ಅಹಮ್ಮದ ಮತ್ತು 2019ರ ಚುನಾವಣೆಗೆ ರೆಡ್ಡಿ ಸಮುದಾಯದ(ವೇಮನ ರೆಡ್ಡಿ) ಮಾಜಿ ಶಾಸಕ ಡಿ.ಆರ್. ಪಾಟೀಲರಿಗೆ ಟಿಕೆಟ್ ನೀಡಿತ್ತು.
ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡುತ್ತಿದ್ದಂತೆ ಕ್ಷೇತ್ರದಲ್ಲಿ ಜಾತಿ ಮತ್ತು ಗೆಲುವಿನ ಸಮೀಕರಣ ಪುನರ್ ಮಿಲನವಾಗುತ್ತಿದೆ. ಕ್ಷೇತ್ರದಲ್ಲಿ ಅಹಿಂದ್ ಮತ್ತು ಲಿಂಗಾಯತ ಸಮುದಾಯ ಪ್ರಮುಖ ಒಳಪಂಗಡ ಜಂಗಮ ಸಮುದಾಯದ ಮತಬ್ಯಾಂಕ್ ಲೆಕ್ಕಚಾರಗಳನ್ನು ಒಟ್ಟೊಟ್ಟಿಗೆ ತಾಳೆ ಹಾಕಲಾಗುತ್ತಿದೆ. ಈ ಸಮೀಕರಣ ಚುನಾವಣೆ ಸಂದರ್ಭದಲ್ಲಿ ಎಷ್ಟು ಲ ನೀಡುತ್ತದೆ ಎಂಬುದು ಮತದಾರನೇ ಬಲ್ಲ.
ಟಿಕೆಟ್ ಸಿಕ್ಕಿದ್ದು ಹೇಗೆ?
ಕಳೆದ ಮೂರು ಚುನಾವಣೆಗಳಲ್ಲಿ ಕೈ ಸುಟ್ಟುಕೊಂಡಿದ್ದ ಕಾಂಗ್ರೆಸ್ ಈ ಬಾರಿ ಲಿಂಗಾಯತರಿಗೆ ಮಣೆ ಹಾಕಿದೆ. ಕಾಂಗ್ರೆಸ್ ಹೈಕಮಾಂಡ್ ವಲಯದಲ್ಲಿ ಸಚಿವ ಎಚ್.ಕೆ. ಪಾಟೀಲ ಅಭ್ಯಥಿರ್ ಆಗಿಸುವ ಆಸಕ್ತಿ ಹೊಂದಲಾಗಿತ್ತು. ಆದರೆ, ಪಕ್ಷದ ಮತಬ್ಯಾಂಕ್ ಜತೆಗೆ ಜಾತಿ ಲೆಕ್ಕಾಚಾರವನ್ನು ಅಲ್ಲಗಳೆಯುವಂತಿಲ್ಲ ಎಂಬ ಕಟು ಸತ್ಯ ಸ್ಥಳಿಯ ಕಾಂಗ್ರೆಸ್ ಮುಖಂಡರಿಗೆ ಅರಿವಿಗೆ ಬಂದಿದೆ. ಕಳೆದ ಮೂರು ಚುನಾವಣೆ ಲಿತಾಂಶವೇ ಈ ಲೆಕ್ಕಾಚಾರಕ್ಕೆ ಕೈಗನ್ನಡಿಯಾಗಿದೆ. ಜತೆಗೆ ಸರ್ಕಾರದಲ್ಲಿ ಪ್ರಬಲ ಸ್ಥಾನ ಹೊಂದಿರುವ ಎಚ್.ಕೆ. ಪಾಟೀಲ ಅವರು ಲೋಕಸಭೆ ಅಖಾಡವನ್ನು ಮೈಮೇಲೆ ಎಳೆದುಕೊಳ್ಳುವ ಅನಿವಾರ್ಯತೆಗೆ ಸಿಲುಕಲಿಲ್ಲ. ಐ.ಜಿ. ಸನದಿ ಪುತ್ರ ಶಾಕೀರ್ ಸನದಿ ಕೂಡ ಆಕಾಂಗಳಾಗಿದ್ದರು. ಆದರೆ, ಕಳೆದ ಎರಡೂ ಬಾರಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಿ ಕಾಂಗ್ರೆಸ್ ಪ್ರಯೋಗ ಮಾಡಿದ್ದು, ಯಶ ಕಾಣಲಿಲ್ಲ. ಇನ್ನೂ, ಮಾಜಿ ಸಂಸದ ಮಂಜುನಾಥ ಕೊನ್ನೂರು ಟಿಕೆಟ್ ಕೇಳಿದ್ದರು. ಯುವಕರಿಗೆ ಆಧ್ಯತೆ ಮತ್ತು ಹೈಕಮಾಂಡ್ ಮೇಲೆ ಸ್ಥಳಿಯ ಮುಖಂಡರ ಪ್ರಬಾವ ಮತ್ತು ಒಲವು ಆನಂದಸ್ವಾಮಿ ಗಡ್ಡದೇವರ ಮಠ ಅವರ ಕಡೆ ವಾಲಿತ್ತು. ಹೀಗಾಗಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಟಿಕೆಟ್ ಲಭಿಸಿದೆ.
ವರ್ಚಸ್ಸು ಏನು?
ಆನಂದಸ್ವಾಮಿ ಗಡ್ಡದೇವರಮಠ ಅವರು ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಅವರ ಪುತ್ರ. ಜಿ.ಎಸ್. ಗಡ್ಡದೇವರಮಠ ಅವರು ರಾಜಕೀಯ ಕ್ಷೇತ್ರದಲ್ಲಿ ಅಜಾತ ಶತೃ. ಕ್ಷೇತ್ರದಲ್ಲಿ ಎಲ್ಲ ಪಕ್ಷದ ಮುಖಂಡರ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅಭ್ಯಥಿರ್ ಆನಂದಸ್ವಾಮಿ ಮೂಲತಃ ಲೆ$್ಮಶ್ವರ ಪಟ್ಟಣದವರಾದರೂ ಬೆಳಗಾವಿಯಲ್ಲಿ ರಾಜಕೀಯ ನೆಲೆಕಂಡುಕೊಂಡಿದ್ದರು.
ಬಿಜೆಪಿಯಲ್ಲಿ ಯಾರು?
ಕಾಂಗ್ರೆಸ್ ಪಕ್ಷ ಲಿಂಗಾಯತ ಸಮುದಾಯಕ್ಕೆ ಮಣೆ ಹಾಕಿದ ನಂತರ ಬಿಜೆಪಿ ಕೂಡ ಪ್ರಬಲ ಅಭ್ಯಥಿರ್ ಕಣಕ್ಕಿಳಿಸಲು ಸಿದ್ಧತೆ ನಡೆಸಿದೆ. ಮೂಲಗಳ ಪ್ರಕಾರ ಮಾಜಿ ಸಿಎಂ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ಅವರಲ್ಲಿ ಒಬ್ಬರು ಬಿಜೆಪಿ ಅಭ್ಯಥಿರ್ ಆಗುವ ಲಕ್ಷಣ ಗೋಚರಿಸಿವೆ.