Gadag: ನಗರದ ಆದರ್ಶ ಶಿಕ್ಷಣ ಸಂಸ್ಥೆಗೆ ಪದವಿ ವಾಣಿಜ್ಯ ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕದಿಂದ 79ನೇ ಸ್ವತಂತ್ರೋತ್ಸವ ದಿನಾಚರಣೆ ನಿಮಿತ್ಯ ಹರ್ ಘರ್ ತಿರಂಗ ಅಭಿಯಾನ ಕಾರ್ಯಕ್ರಮಕ್ಕೆ ಗದಗ್ ಗ್ರಾಮೀಣ ವಲಯದ ಪಿ.ಎಸ್.ಐ ಶ್ರೀ ಸಿದ್ದರಾಮೇಶ ಗಡೆದ ಚಾಲನೆ ನೀಡಿ ಪ್ರತಿಯೊಬ್ಬ ನಾಗರಿಕನಲ್ಲಿ ಆಳವಾದ ದೇಶಭಕ್ತಿ ಪ್ರಜ್ಞೆಯನ್ನು ಹುಟ್ಟು ಹಾಕುವುದು ಮತ್ತು ರಾಷ್ಟ್ರದ ಮಹತ್ವದ ಬಗ್ಗೆ ಹೆಚ್ಚಿನ ತಿಳುವಳಿಕೆಯನ್ನು ಉತ್ತೇಜಿಸುವುದು ಇದರ ಗುರಿಯಾಗಿದೆ. ಬಹಳ ಸಂತಸದ ಸಂಗತಿ ಎಂದರೆ ಈ ವರ್ಷದ ಅಭಿಯಾನದಲ್ಲಿ 5 ಲಕ್ಷಕ್ಕೂ ಹೆಚ್ಚು ಯುವಕರು ಸ್ವಯಂಸೇವಕರಾಗಿ ನೋಂದಾಯಿಸಿಕೊಂಡಿದ್ದಾರೆ. ಭಾರತದ ಸ್ವತಂತ್ರ ದಿನಾಚರಣೆಯ ಆಚರಣೆಯಲ್ಲಿ ನಾಗರಿಕರು ತ್ರಿವರ್ಣ ಧ್ವಜವನ್ನು ಮನೆಗೆ ತಂದು ಹಾರಿಸಲು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ ದೇಶ ಮತ್ತು ದೇಶದ ಸಾರ್ವಭೌಮತೆ ಮತ್ತು ಸ್ವಾಭಿಮಾನ ಬಿಂಬಿಸುವ ರಾಷ್ಟ್ರ ಧ್ವಜ ಭಾವನಾತ್ಮಕ ಸಂಬಂಧ ಕಲ್ಪಿಸುತ್ತದೆ ದೇಶ ಮತ್ತು ರಾಷ್ಟ್ರಧ್ವಜವನ್ನು ನಾವು ತಾಯಿಯ ಸ್ಥಾನದಲ್ಲಿಟ್ಟು ಗೌರವಿಸಬೇಕು ಎಂದು ತಮ್ಮ ವಿಚಾರಗಳನ್ನ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಮಹಾವಿದ್ಯಾಲಯದ ಉಪ ಪ್ರಾಚಾರ್ಯರು ಹಾಗೂ ಐಕ್ಯೂ ಎ ಸಿ ಕೋ- ಆರ್ಡಿನೇಟರ್ ಡಾ.ವಿ.ಟಿ ನಾಯ್ಕರ್ ರವರು ಮಾತನಾಡಿ ಪ್ರತಿಯೊಬ್ಬ ಭಾರತೀಯ ನಾಗರಿಕರು ಮೊದಲು ನಾವು ರಾಷ್ಟ್ರ ರಾಷ್ಟ್ರ ಧ್ವಜವನ್ನ ಗೌರವಿಸಬೇಕು ಅದರೊಂದಿಗೆ ಕೇಸರಿ ಬಿಳಿ ಹಸಿರು, ಬಣ್ಣಗಳ ಅರ್ಥಗಳನ್ನ ಮಾಡಿಕೊಂಡು ಸೌಹಾರ್ದಯುತವಾಗಿ ಈ ದೇಶದಲ್ಲಿ ನಾವೆಲ್ಲರೂ ಬದುಕಬೇಕೆಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಕೆ. ಗಿರಿರಾಜಕುಮಾರ್, ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ ಬಿ.ಪಿ ಜೈನರ. ಮಹಾವಿದ್ಯಾಲಯದ ಶಿಕ್ಷಕ ಹಾಗೂ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳು ಈ ಒಂದು ಅಭಿಯಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.