Q 
ಜಿಲ್ಲೆ

ವಿಶೇಷಚೇತನ ವ್ಯಕ್ತಿಗಳೊಂದಿಗೆ ಸಂವಹನ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ಅಂಗವಿಕಲತೆ ಬಗ್ಗೆ ತಿರಸ್ಕಾರ ಬೇಡ. ಪುರಸ್ಕಾರವಿರಲಿ. ಸಮಾಜದಲ್ಲಿ ಈ ಕುರಿತು ತಿಳುವಳಿಕೆ ಮೂಡಿಸಿ ಪರಿವರ್ತನೆಗಾಗಿ ಪ್ರಯತ್ನಿಸೋಣ. ಅಂಗವಿಕಲತೆಯು ಸಾಧನೆಗೆ ಸಮಸ್ಯೆಯಲ್ಲ. ಇಂತಹ ಸಾಧಕರನ್ನು ಸನ್ಮಾನಿಸಿ ಅವರ ಪ್ರತಿಭೆಗೆ ಪ್ರೋತ್ಸಾಹ ನೀಡುವುದು ನಮ್ಮ ಕರ್ತವ್ಯ ಎಂದು ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಹೇಳಿದರು.

ಶನಿವಾರ ಗದುಗಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.3ರಲ್ಲಿ ಜರುಗಿದ ವಿಶೇಷಚೇತನ ವ್ಯಕ್ತಿಗಳೊಂದಿಗೆ ಸಂಭ್ರಮ ಶನಿವಾರ ಬ್ಯಾಗ್​ ರಹಿತ ದಿನ ಸಂವಹನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಾಲೆಯ ಎಲ್ಲ ಮಕ್ಕಳು ತರಗತಿಯ ಕೋಣೆಗಳಲ್ಲಿ ಅಂಗವೈಕಲ್ಯತೆಯುಳ್ಳ ವಿದ್ಯಾಥಿರ್ಗಳೊಂದಿಗೆ ಆರೋಗ್ಯಕರ ಹಾಗೂ ಅರ್ಥರ್ಪೂಣ ಸಂಬಂಧವನ್ನು ಬೆಳೆಸಿಕೊಂಡು ಶೈಣಿಕ ಹಾಗೂ ಸಾಮಾಜಿಕವಾಗಿ ಪರಸ್ಪರ ತೊಡಗಿಸಿಕೊಳ್ಳುವಂತೆ ಮಾಡಲು ನಾವು ಮುಂದಾಗಬೇಕಿದೆ. ಮಕ್ಕಳು ಬೆಳೆಯುತ್ತಲೇ ಮಾನವೀಯ ಮೌಲ್ಯಗಳನ್ನು ಬದುಕಿನಲ್ಲಿ ರೂಢಿಸಿಕೊಂಡು ಆದರ್ಶ ವ್ಯಕ್ತಿಗಳಾಗಬೇಕು. ವಿದ್ಯಾಥಿರ್ಗಳನ್ನು ಭವಿಷ್ಯದಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಮಹತ್ವದ ಕಾರ್ಯಕ್ರಮ "ಬ್ಯಾಗಲೆಸ್​ ಡೇ' ದಿನದ ಆಚರಣೆ ಅರ್ಥರ್ಪೂಣವಾಗಲು ಎಲ್ಲ ಮಕ್ಕಳು ಪಾಲ್ಗೊಳ್ಳಬೇಕು ಎಂದರು.

ಅಧ್ಯತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳಾ ಮಣ್ಣೂರ ಮಾತನಾಡಿ ಅರಿವು, ಅನುಭವ, ಅಂಶಗಳನ್ನು ಅಳವಡಿಸಿಕೊಂಡು ಪ್ರತಿ ತಿಂಗಳ 3ನೇ ಶನಿವಾರ ಎಲ್ಲ ಶಾಲೆಗಳಲ್ಲಿ ಸರ್ಕಾರದ ಆದೇಶದ ಅನ್ವಯ "ಬ್ಯಾಗ್​ ಲೆಸ್​ ಡೇ' ಆಚರಿಸಲಾಗುತ್ತಿದೆ. ಅಂದು ಮಕ್ಕಳು ವಿಷಯ ಅನುಸಾರ ಎಲ್ಲವನ್ನು ತಾವೇ ನಿರ್ವಹಿಸುವುದರ ಜೊತೆಗೆ ವಿಷಯವನ್ನು ಮನನ ಮಾಡಿಕೊಳ್ಳಬೇಕು ಎಂದರು.

ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಜ್ಯಮಟ್ಟದಲ್ಲಿ ಪ್ರಶಸ್ತಿ ಪಡೆದ ವಿಶೇಷ ಶಿಕಿ ಪರಿಮಳಾ ಮಣ್ಣೂರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಲಾ ಮಕ್ಕಳಿಂದ ವಿಶೇಷ ಚೇತನರ ಅರಿವು ಜಾಗೃತಿ ಕುರಿತು ಕಿರು ನಾಟಕ ಪ್ರದರ್ಶನಗೊಂಡಿತು.

ಎಸ್​. ಎಸ್​. ಹಿರೇಮಠ, ಎಸ್​. ಬಿ. ಬಾಗೂರ, ಸಿ. ಕೆ. ಕಾಳೆ, ಮಂಜುಳಾ ಅನಂತಪೂರ, ರೇಣುಕಾ ಉಮಚಗಿ, ಶೇಖಮ್ಮ ಕಮತರ, ಮೀರಾಬಾಯಿ ಭಾವಿಕಟ್ಟಿ, ಬಸಮ್ಮ ಗಡ್ಡೆಪ್ಪನವರ, ಲಕ್ಷ$್ಮವ್ವ ಹಿರೇಮಠ, ಗಿರಿಜಾ ಪಲ್ಲೇದ, ಶಾಂತಾ ತೆಲಗಾಂವಿ, ಲಕ್ಷಿ$್ಮ ಹಂಜಗಿಮಠ, ಟಿ.ಎಂ.ಪುರುಷನ್​, ಜ್ಯೋತಿ ಭಾವಿಕಟ್ಟಿ, ಗೀತಾ ನಲವಡೆ, ಅಮೀನಾ ನದಾ, ಯೋಗೇಶ್ವರಿ ಭಾವಿಕಟ್ಟಿ, ನಿರ್ಮಲಾ ಹುಣಸಿ ಇತರರು ಇದ್ದರು.