ಜಿಲ್ಲೆ

ಬುದ್ಧಿ ಮಾಂದ್ಯ ಮಕ್ಕಳ ಶಾಲೆಯಲ್ಲಿ ಮಕ್ಕಳ ವಿಶೇಷ ಕಾರ್ಯಾಗಾರ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ಜಿಮ್ಸ್​ ವತಿಯಿಂದ ನಗರದ ಮಂಜು ಶಿಣ ಸಂಸ್ಥೆಯ ಬುದ್ಧಿ ಮಾಂದ್ಯ ಮಕ್ಕಳ ವಸತಿಯುತ ವಿಶೇಷ ಶಾಲೆಯಲ್ಲಿ ಶುಕ್ರವಾರ ಆಟಿಸ್​ಂ ಮಕ್ಕಳ ಕುರಿತು ಅರಿವು ಮೂಡಿಸುವ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ವೈದ್ಯಕಿಯ ಅಧಿಕ್ಷಕ ಈರಣ್ಣ ಬಸಪ್ಪ ಹಳೇಮನಿ ಮಾತನಾಡಿ, ಆಟಿಸಂ ಮಕ್ಕಳು ಎದುರಿಸುವ ಸಮಸ್ಯೆಗಳ ಕುರಿತು ಪಾಲಕರ ಅರ್ಥ ಮಾಡಿಕೊಳ್ಳಬೇಕು. ಆಟಿಸಂ ನ್ಯೂನ್ಯತೆ ನಿವಾರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಪಾಲಕರೊಂದಿಗೆ ವಿಶೇಷ ಮಕ್ಕಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಶಾಲೆಯಲ್ಲಿ ಸ್ವಚ್ಛತೆ, ಶಿಸ್ತು, ಮಕ್ಕಳಿಗೆ ಇರುವ ವ್ಯವಸ್ಥೆ ಉತ್ತಮವಾಗಿದೆ. ಇಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲರಿಗೂ ಅಭಿನಂದನೆ. ಇಂತಹ ದೇವರ ಸಮಾನ ಮಕ್ಕಳನ್ನು ಪೋಷಿಸುವುದು ದೇವರ ಕಾರ್ಯ ಮಾಡಿದಂತೆ ಎಂದು ಹೇಳಿದರು.
ಸಂಸ್ಥೆಯ ಅಧ್ಯ ಶಂಕರಸಿಂಗ್​ ರಜಪೂತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿನಾಯಕಸಿಂಗ್​ ರಜಪೂತ, ಎನ್​. ಆರ್​. ಸಿನ್ನೂರ, ಆರ್​. ಆರ್​. ಹಿರೇಮಠ, ಎಚ್​. ಟಿ. ಕೊಪ್ಪದ, ಐ. ಸಿ. ಪಲ್ಲೇದ, ಎಂ. ಎಚ್​. ಹೊಸೂರ ಹಲವರು ಇದ್ದರು.