ಜಿಲ್ಲೆ

ಸಚಿವ ಎಚ್ ಕೆ ಪಾಟೀಲ ರಿಂದ ರಾಜಕಾಲುವೆ‌ ನಿರ್ಮಾಣಕ್ಕೆ ಚಾಲನೆ

Gadag - Shivanand Hiremath
ಗದಗ: ರಾಜ್ಯದ ಕಾನೂನು, ನ್ಯಾಯ,ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ. ಪಾಟೀಲ ಅವರು ರವಿವಾರ ಗದಗ ವಾರ್ಡ ನಂ. 30 ವಾಂಬೆ ಬಡಾವಣೆಯಲ್ಲಿ ರಾಜಕಾಲುವೆ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿದರು.
ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಲಾಗುತ್ತಿರುವ ಈ ರಾಜಕಾಲುವೆ ಅಂದಾಜು ಮೊತ್ತ 1.65 ಕೋಟಿ ಗಳಾಗಿದ್ದು, ತೋಂಟದಾರ್ಯ ಇಂಜಿನಿಯರಿಂಗ್ ಕಾಲೇಜುನಿಂದ ವಾಂಬೆ ಬಡಾವಣೆಗೆ ಮಳೆ ನೀರು ಪ್ರವೇಶಿಸುವುದನ್ನು ತಡೆಯಲು ಶಾಶ್ವತ ಪರಿಹಾರವಾಗಿ ಮಳೆನೀರು ಸರಾಗವಾಗಿ ಸಾಗಲು ಚರಂಡಿ‌ ನಿರ್ಮಾಣ ಮಾಡಲಾಗುತ್ತಿದೆ.
ಈ ವೇಳೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ ಬಿ ಅಸೂಟಿ, ಆಂಜನೇಯ ಕಟಗಿ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ ಆರ್ ಸೇರಿದಂತೆ ಸ್ಥಳೀಯ ಗಣ್ಯರು, ಸಾರ್ವಜನಿಕರು ಇದ್ದರು.