ಜಿಲ್ಲೆ

ಗುರುವಂದನಾ ಕಾರ್ಯಕ್ರಮ

Gadag - Shivanand Hiremath

ಗದಗ : ಹಿರಿಯ ವಿದ್ಯಾರ್ಥಿಗಳು ಇವತ್ತು ಗುರುವಂದನಾ ಕಾರ್ಯಕ್ರಮ ಹಮ್ಮಿಕೊಂಡು ವಿದ್ಯೆ ನೀಡಿದ  ಗುರು ಮತ್ತು ಶಿಷ್ಯರ ಶೈಕ್ಷಣಿಕ ಸಂಭಂದವು ಶಿಕ್ಷಣದ ಶಕ್ತಿಯನ್ನು ಹೆಚ್ಚಿಸಿದಂತೆ ಎಂದು  ಪ್ರಾಚಾರ್ಯ ಎಮ್.ಯು.ಹಿರೇಮಠ ಹೇಳಿದರು.
    ಗದಗ  ನಗರದ ಬಿ ಮಾನ್ಯತೆ ಪಡೆದಿರುವ ಪ್ರತಿಷ್ಠಿತ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ  ಇನ್ನರ್ ವೀಲ್ ಕ್ಲಬ್ ಆಫ್ ಗದಗ ಮಿಡ್‌ಟೌನ್ ವತಿಯಿಂದ ಡಾ.ಪ್ರಕಾಶ ದೇಶಪಾಂಡೆ ಅವರಿಗೆ ಗುರುವಂದನಾ ಸನ್ಮಾನ ಕಾರ್ಯಕ್ರಮದಲ್ಲಿ   ಮಾತನಾಡಿದ ಅವರು ವಿದ್ಯಾರ್ಥಿಗಳು ತಾವು ಓದಿದ ಶಾಲಾ-ಕಾಲೇಜು, ವಿದ್ಯೆ ಕಲಿತ ಮಂದಿರ ಮರೆಯಬಾರದು. ಇಂದಿನ ಕಾರ್ಯ ಅತ್ಯಂತ ಶ್ಲಾಘನೀಯ ಹಾಗೂ ಇತರರಿಗೂ ಮಾದರಿ ಎಂದು ತಿಳಿಸಿದರು.
ಡಾ.ಪ್ರಕಾಶ ದೇಶಪಾಂಡೆ  ಸನ್ಮಾನ ಸ್ವೀಕರಿಸಿ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಗುರುಗಳ ಸೇವೆ ನೆನಪಿಸಿಕೊಂಡು ವಂದನೆ ಸಲ್ಲಿಸುವ ಬಹು ಪವಿತ್ರ ಕಾರ್ಯ ಮಾಡುವುದು, ಕೇವಲ ಗುರುಗಳಿಗೆ ಕೃತಜ್ಞತೆ ಸಲ್ಲಿಸಿದ ಹಾಗೆ ಅಲ್ಲ  ಬದಲಿಗೆ ಎಲ್ಲಾ  ಗುರುಗಳ ಶಿಕ್ಷಣ ವೃತ್ತಿಗೆ ಮಹತ್ವ ಕೊಟ್ಟಂತೆ  ಎಂದು  ಹೇಳಿದರು.
     ಇನ್ನರ್ ವೀಲ್ ಕ್ಲಬ್ ಆಫ್ ಗದಗ ಮಿಡ್‌ಟೌನ್ ಅಧ್ಯಕ್ಷೆ ಪ್ರೀತಿ ಶಿವಪ್ಪಯನಮಠ ಮಾತನಾಡಿ
ಬದುಕಿನಲ್ಲಿ ಯಾವುದೇ ಸಾಧನೆಯ ಹಿಂದೆ ಗುರುಗಳ ಮಾರ್ಗದರ್ಶನ ಜೀವನುದುದ್ದಕ್ಕೂ ಅಗತ್ಯ, ಅದರಲ್ಲೂ ಬದುಕಿನ  ಮೆಟ್ಟಿಲುಗಳನ್ನು ಗಟ್ಟಿಗೊಳಿಸಲು ನಿರಂತರವಾಗಿ ಶ್ರಮಿಸುವ ಗುರುಗಳ ಕಾರ್ಯವನ್ನು ಎಂದಿಗೂ ಮರೆಯಲು ಅಸಾಧ್ಯ ಎಂದು ಹೇಳಿದರು.
  ಕಾರ್ಯಕ್ರಮದಲ್ಲಿ  ಉಪಾಧ್ಯಕ್ಷೆ ಸುಪ್ರೀಯ ನಲವತ್ತವಾಡ, ಕಾರ್ಯದರ್ಶಿ ರಾಣಿ ಚಂದಾವರಿ, ಮಂಗಲಾ ನಲವತ್ತವಾಡ, ಗೀತಾ ಭೀಕ್ಷಾವತಿಮಠ, ಕಾರ್ಯಕ್ರಮವನ್ನು ಪ್ರೋ ಎಸ್.ಯು. ಸಜ್ಜನಶೆಟ್ಟರ
ಪ್ರೋ ಎಸ್.ಎಚ್. ಬಡೇಖಾನ, ಪ್ರಕಾಶ ಕರಿಗಾರ, ಡಾ. ಎಸ್.ಕೆ. ಪೂಜಾರ, ಪ್ರೊ. ರೂಪಾ ಶ್ರೀನಿವಾಸ, ಪ್ರೊ. ಮಹಾಲಕ್ಷ್ಮಿ ಹುಟಗಿ, ವ್ಯವಸ್ಥಾಪಕ ಎಫ್.ಎಸ್.
ಕರಬುಡ್ಡಿ. ಪ್ರೊ. ಸತೀಶ ಸರ್ವಿ, ಡಾ. ದ್ಯಾಮನ್ನ ಮನಕಟ್ಟಿ, ಪ್ರೊ. ಕೃಷ್ಣಪ್ಪ ಬೆಂತೂರ, ಡಾ. ಸುಜಾತಾ ಬರದೂರ. ಪ್ರೊ.ರಶ್ಮಿ ಹೂಗಾರ, ಪ್ರೊ ವಹಿದಾ, ಪ್ರೊ.ಶ್ರೀದೇವಿ ದಾಸರ, ಪ್ರೊ.ರಿಯಾಜಅಹ್ಮದ ದೊಡ್ಡಮನಿ ಹಾಗೂ ಸಿಬ್ಬಂದಿ ವರ್ಗ, ವಿದ್ಯಾರ್ಥಿನಿಯರು ಇದ್ದರು.