ವಿಜಯವಾಣಿ ಸುದ್ದಿಜಾಲ ಗದಗ
ಸರ್ಕಾರಿ ಶಾಲೆಗಳಲ್ಲಿ ಎಲ್ಲ ವರ್ಗದ ಮಕ್ಕಳು ಅಧ್ಯಯನ ಮಾಡುತ್ತಿರುವುದರಿಂದ ಜೀವನದ ಪರಿರ್ಪೂಣ ಪಾಠವನ್ನು ವಿದ್ಯಾಥಿರ್ಗಳು ಅರಿತುಕೊಳ್ಳುತ್ತಾರೆ ಎಂದು ಶಾಲಾ ಶಿಣ ಇಲಾಖೆ ಉಪನಿರ್ದೇಶಕಿ ಮಂಗಳಾ ತಾಪಸ್ಕರ ಹೇಳಿದರು.
ಸಿದ್ಧಲಿಂಗ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸರ್ಕಾರಿ ಶಾಲೆಗಳ ಮಕ್ಕಳಿಗೆ ವಿಶೇಷ ಕಾಳಜಿ ವಹಿಸಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಹೀಗಾಗಿ ವಿದ್ಯಾಥಿರ್ಗಳ ಸರ್ವಾಂಗೀಣ ಅಭಿವೃದ್ಧಿ ಸರ್ಕಾರಿ ಶಾಲೆಯಿಂದ ಮಾತ್ರ ಸಾಧ್ಯ. ಸರ್ಕಾರ ಪ್ರಾಥಮಿಕ ಹಂತದಿಂದ ವಿಶ್ವವಿದ್ಯಾಲಯದ ವರೆಗಿನ ವಿದ್ಯಾಥಿರ್ಗಳಿಗಾಗಿ 60 ಸಾವಿರಕ್ಕೂ ಹೆಚ್ಚು ಕೋಟಿ ರೂ. ಗಳನ್ನು ವಿನಿಯೋಗ ಮಾಡುತ್ತಿದೆ. ಇದರ ಸದುಪಯೋಗವನ್ನು ವಿದ್ಯಾಥಿರ್ಗಳು ಪಡೆದುಕೊಳ್ಳಬೇಕು. ವಿಶೇಷವಾಗಿ ಪ್ರಾಥಮಿಕ, ಪ್ರೌಢಶಾಲೆಗಳ ವಿದ್ಯಾಥಿರ್ಗಳಿಗಾಗಿ ಹಲವಾರು ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿ ಅವರ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಕಳೆದ ದಶಕದಿಂದ ಇತ್ತೀಚೆಗೆ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಣ ಸಿಗುತ್ತಿದೆ. ಖಾಸಗಿ ಶಾಲೆಗಳನ್ನು ಮೀರಿ ಹಲವಾರು ಸರ್ಕಾರಿ ಶಾಲೆಗಳು ಉತ್ತಮ ಲಿತಾಂಶವನ್ನು ನೀಡುವ ಮೂಲಕ ಅಭಿವೃದ್ಧಿಯನ್ನು ಹೊಂದಿವೆ ಎಂದರು.
ಮುಖ್ಯೋಪಾಧ್ಯಾಯಿನಿ ಜಯಲಕ್ಷಿ$್ಮ ಅಣ್ಣಿಗೇರಿ ಮಾತನಾಡಿ, ಮಂಗಳಾ ತಾಪಸ್ಕರ ಅವರ ಶಿಣಪರ ಕಾಳಜಿ, ಶಿಕರ ಹಾಗೂ ಮಕ್ಕಳ ಬಗ್ಗೆ ಅವರಲ್ಲಿರುವ ಪ್ರೀತಿ ವಿಶೇಷವಾಗಿದ್ದು. ಅವರ ಅಧಿಕಾರ ಅವಧಿಯಲ್ಲಿ ಜಿಲ್ಲೆಯು ಶೈಣಿಕವಾಗಿ ಇನ್ನಷ್ಟು ಪ್ರಗತಿ ಹೊಂದಲಿ ಎಂದರು.
ಕಾರ್ಯಕ್ರಮದಲ್ಲಿ ಮಂಗಳಾ ತಾಪಸ್ಕರ ಅವರನ್ನು ಸನ್ಮಾನಿಸಲಾಯಿತು. ಶಂಕ್ರಮ್ಮ ಹನಮಗೌಡ್ರು, ಮಂಜುಳಾ ಸಾಮ್ರಾಣಿ, ಸುಮಂಗಲ ಪತ್ತಾರ, ಶಾರದಾ ಬಾಣದ, ಎಂ. ಐ. ಶಿವನಗೌಡ್ರು, ಶೋಭಾ ಗಾಳಿ, ರಮೇಶ್ ಬಸರಿ, ಸಾವಿತ್ರಿ ಗದ್ದನಕೇರಿ, ಎನ್. ಆರ್. ಶಿರೋಳ, ಸಬಿಯಾ ಕುಷ್ಟಗಿ, ಗಂಗಾ ಅಳವಂಡಿ, ಮಂಜುಳಾ ಟಿ, ಶಶಿಕಲಾ ಗುಳೇದವರ, ಪದ್ಮಾ ದಾಸರ ಇತರರು ಇದ್ದರು.