ಜಿಲ್ಲೆ

ಸರ್ಕಾರಿ ನೌಕರ ಸಂದ ನೂತನ ಜಿಲ್ಲಾಧ್ಯಕ್ಷರಾಗಿ ಬಸವರಾಜ ಬಳ್ಳಾರಿ ಅಧಿಕಾರ ಸ್ವೀಕಾರ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ಸಂಟನೆಯು ಆಡಳಿತಾತ್ಮಕ ಮತ್ತು ಆಥಿರ್ಕ ಶಿಸ್ತು ಹೊಂದಿದಾಗ ಮಾತ್ರ ಸಂಟನೆ ಬೆಳೆಯಲು ಸಾಧ್ಯ. ಸಂಟನೆಯು ಶಕ್ತಿಯುತವಾಗಿ ಇದ್ದರೆ ನಿಭಿರ್ತಿಯಿಂದ ಸೇವೆ ಸಲ್ಲಿಸಲು ಅನುಕೂಲ ಎಂದು ಸರ್ಕಾರಿ ನೌಕರ ಸಂದ ರಾಜಾಧ್ಯಕ್ಷ ಸಿ.ಎಸ್​. ಷಡಾಕ್ಷರಿ ಹೇಳಿದರು.

ನಗರದ ಭೀಮಸೇನ ಜೋಶಿ ರಂಗಮಂದಿರದಲ್ಲಿ ಶನಿವಾರ ನಡೆದ ಸರ್ಕಾರಿ ನೌಕರ ಸಂದ ನೂತನ ಅಧ್ಯಕ್ಷ, ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕಾಯಕ ತತ್ಪರತೆ, ಸೇವಾ ಮನೋಭಾವ ಇದ್ದವರು ಮಾತ್ರ ನಾಯಕರಾಗಲು ಸಾಧ್ಯ. ಸಂಟನೆ ಮತ್ತು ನೌಕರರ ಆಶೀರ್ವಾದದಿಂದ ಇಂದು ಅಧ್ಯಕ್ಷ ಮತ್ತು ಪದಾಧಿಕಾರಿಗಳು ಪದಗ್ರಹಣ ಮಾಡಿದ್ದಾರೆ. ನೌಕರರ ಮನಸ್ಥಿತಿ ಅರ್ಥ ಮಾಡಿಕೊಂಡು ಸಂದ ಸದಸ್ಯರು ಕಾರ್ಯ ಮಾಡಬೇಕು. ಕೇವಲ ಅಧ್ಯಕ್ಷರು ಪದಾಧಿಕಾರಿಗಳಿಂದ ಸಂಟನೆ ಕಟ್ಟಲು ಸಾಧ್ಯವಿಲ್ಲ ಎಂದರು.

ಕಡಿಮೆ ನೌಕರ ಸಂಖ್ಯೆಯಲ್ಲಿ ಹೆಚ್ಚಿನ ಸೇವೆ ಪಡೆಯಲು ಸರ್ಕಾರ ಚಿಂತಿಸುತ್ತದೆ. ಈ ನಡುವೆಯೂ ನೌಕರರು ಒತ್ತಡದಿಂದ ಹೊರಬಂದು ಉತ್ತಮ ಸೇವೆ ನೀಡಬೇಕಾಗಿದೆ. ಈ ಹಿನ್ನೆಲೆ ನೂತನ ಅಧ್ಯಕ್ಷ ಬಸವರಾಜ ಬಳ್ಳಾರಿ, ಪದಾಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಸಿ.ಎಸ್​. ಷಡಾಕ್ಷರಿ ಹೇಳಿದರು.

ವಿಧಾನ ಪರಿಷತ್​ ಶಾಸಕ ಎಸ್​. ವಿ. ಸಂಕನೂರು ಮಾತನಾಡಿ, ಸರ್ಕಾರಿ ನೌಕರರು ತಮ್ಮ ಬೇಡಿಕೆಗಳನ್ನು ಪಡೆಯಲು ಸರ್ಕಾರಿ ನೌಕರ ಸಂ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತದೆ. ಸಂವು ಸರ್ಕಾರಿ ನೌಕರರ ಪ್ರತಿಭಾನ್ವಿತ ಮಕ್ಕಳಿಗೆ ಪ್ರೋತ್ಸಾಹ, ಸನ್ಮಾನ ನೀಡುವ ಕಾರ್ಯ ಮಾಡುತ್ತಿದೆ. ಇದಕ್ಕೆಲ್ಲ ರಾಜಾಧ್ಯಕ್ಷ ಷಡಕ್ಷರಿ ಮೂಲ ಕಾರಣರಾಗಿದ್ದಾರೆ. 7ನೇ ವೇತನ ಜಾರಿ, ಓಪಿಎಸ್​ ಮರುಜಾರಿ, ಕೇಂದ್ರ ಮಾದರಿ ವೇತನ ಶ್ರೇಣಿ ಜಾರಿ ಅವರ ಗುರಿಯಾಗಿದ್ದವು. ಇವುಗಳಲ್ಲಿ 7ನೇ ವೇತನ ಜಾರಿ ಕಾರ್ಯ ಜಾರಿಯಾಗಿದೆ. ಇನ್ನೆರಡು ಬೇಡಿಕೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಷಡಾಕ್ಷರಿ ಅವರು ಸಂದ ಜತೆಗೂಡಿ ನಿರಂತರ ಶ್ರಮೀಸುತ್ತಿದ್ದಾರೆ ಎಂದರು.

ಖಾಲಿ ಹುದ್ದೆಗಳಿಂದ ಸರ್ಕಾರಿ ನೌಕರರ ಮೇಲೆ ಕೆಲಸದ ಒತ್ತಡ ದಿನೇ ದಿನೆ ಹೆಚ್ಚಾಗುತ್ತಿದೆ. ಇಂತಹ ವ್ಯತಿರಿಕ್ತ ಕಾರ್ಯದೊತ್ತಡದ ನಡುವೆ ಸರ್ಕಾರಿ ನೌಕರರು ಬೇಸತ್ತಿದ್ದಾರೆ. ಹಣಕಾಸು ವಿಭಾಗದಿಂದ ಅನುಮತಿ ಪಡೆದು ನೇಮಕಾತಿ ಮಾಡಿಕೊಳ್ಳಬೇಕಾದ ಸಾವಿರಾರು ಖಾಲಿ ಹುದ್ದೆ ಇವೆ. ಈ ಹುದ್ದೆಗಳನ್ನು ತುಂಬಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಸಂವು ಒತ್ತಡ ತರಬೇಕು. ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ನೂತನ ಜಿಲ್ಲಾಧ್ಯಕ್ಷ ಬಸವರಾಜ ಬಳ್ಳಾರಿ ಕೆಲಸ ಮಾಡಬೇಕು. ಅಧ್ಯಕ್ಷ ಮತ್ತು ಪದಾಧಿಕಾರಿಗಳು ನೌಕರರ ಪ್ರೀತಿ ಮತ್ತು ವಿಶ್ವಾಸ ಗಳಿಸಿಕೊಳ್ಳಬೇಕು ಎಂದರು.

ಅಭಿನವ ಮೃತ್ಯುಂಜಯ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿದರು. ನೂತನ ಜಿಲ್ಲಾಧ್ಯಕ್ಷ ಬಸವರಾಜ ಬಳ್ಳಾರಿ, ಗಿರಿಗೌಡ ಎಚ್​, ಬಸವರಾಜ ಎಸ್​, ಮಲ್ಲಿಕಾರ್ಜುನ ಬಳ್ಳಾರಿ, ಸುರೇಶ ಶಡಶ್ಯಾಳ, ರವಿ ಗುಂಜೀಕರ, ಮೋಹನ ಕುಮಾರ, ಎಸ್​. ಎಫ್​. ಸಿದ್ದನಗೌಡರ, ಬಿ.ಎ. ಕುಂಬಾರ, ಪ್ರೇಮನಾಥ ಗರಗ, ಮಲ್ಲೇಶ ಕರಿಗಾರ, ಬಿ.ಎಫ್​. ಪೂಜಾರ, ನಂದಾ ಎಚ್​., ಪ್ರಹ್ಲಾದ ಗೆಜ್ಜಿ, ವಿ. ಎಂ. ಹಿರೇಮಠ, ಡಿ.ಪಿ. ವಾಲ್ಮೀಕಿ ಇತರರು ಇದ್ದರು.

ಬಾಕ್ಸ್​:

ಸರ್ಕಾರಿ ನೌಕರರು ಮತ್ತು ಕುಟುಂಬಸ್ಥರಿಗೆ ಉಚಿತ ಚಿಕಿತ್ಸೆ ನೀಡುವ ಯೋಜನೆ ಈ ತಿಂಗಳಲ್ಲಿ ಜಾರಿ ಬರಲಿದೆ. ರಾಜ್ಯ ಸರ್ಕಾರದ ಸದ್ಯದಲ್ಲೇ ಆದೇಶ ಹೊರಡಿಸಲಿದೆ. ನೌಕರರು ಪ್ರತಿ ತಿಂಗಳು ವಂತಿಗೆ ತುಂಬಿ ಈ ಯೋಜನೆಯಲ್ಲಿ ಒಳಗೊಳ್ಳಬಹುದು ಎಂದು ಷಡಾಕ್ಷರಿ ಹೇಳಿದರು.

ಕೋಟ್​:

ಶಿಕ್ಷಕರು ಸೇವೆ ಸೇರಿದ ನಂತರ ಐದು ವರ್ಷಕ್ಕೊಮ್ಮೆ ಮತ್ತೇ ಪರೀಕ್ಷೆ ಎದುರಿಸಿ ಸೇವೆಗೆ ಸೇರಬೇಕು ಎಂಬ ನಿಯಮ ಜಾರಿ ತರುವ ನಿಟ್ಟಿನಲ್ಲಿ ಸರ್ಕಾರ ನಿರ್ಧಾರ ಮಾಡಿದೆ. ಇದು ಸುಧಾರಣೆಯ ಭಾಗ ಎಂದೆನಿಸುತ್ತಿಲ್ಲ. ಶಿಕ್ಷಕರಿಗೆ ಇದರಿಂದ ತೊಂದರೆ ಆಗುತ್ತದೆ. ಬದಲಾಗಿ ಶಿಕ್ಷಕರ ಕೌಶಲ್ಯ ಹೆಚ್ಚಾಗಲು ಸರ್ಕಾರದಿಂದ ತರಬೇತಿ, ಕಾರ್ಯಾಗಾರ ನಡೆಸಬೇಕು.

- ಸಿ.ಎಸ್​. ಷಡಾಕ್ಷರಿ,

ಕಾರ್ಯಕ್ರಮದ ಹೈಲೆಟ್ಸ್​:

* ಕೇಂದ್ರ ಮಾದರಿ ವೇತನವು ರಾಜ್ಯ ಸರ್ಕಾರಿ ನೌಕರರಿಗೆ ಸಿಗಬೇಕು.

* ಓಪಿಎಸ್​ ಜಾರಿಗೆ ದೃಢ ನಿರ್ಧಾರ.

* ನೌಕರರ ಮತ್ತು ಕುಟುಂಬಸ್ಥರಿಗೆ ಉಚಿತ ಚಿಕಿತ್ಸೆ.

* ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಬದಲಾವಣೆ ಚರ್ಚೆ.

* ಶಿಕ್ಷಕರ ಒತ್ತಡ ನಿರ್ವಹಣೆ ಕುರಿತು ಚರ್ಚೆ.

* ಶಿಕ್ಷಕರಿಗೆ ತರಬೇತಿ ಮತ್ತು ಕಾರ್ಯಾಗಾರ ಅಗತ್ಯ.