ಗದಗನಲ್ಲಿ ಸಂಸದ ಗೋವಿಂದ ಕಾರಜೊಳ ಸುದ್ದಿಗೋಷ್ಠಿ ನಡೆಸಿದರು. ರಾಜು ಕುರಡಗಿ, ಲಿಂಗರಾಜ ಪಾಟೀಲ, ಮಂಜುನಾಥ ಮುಳಗುಂದ, ಉಷಾ ದಾಸರ, ಎಂ. ಎಂ. ಹಿರೇಮಠ ಇತರರು ಇದ್ದರು. 
ಜಿಲ್ಲೆ

ಒಡೆದಾಳುವ ನೀತಿಯಲ್ಲಿ ಸಿಎಂ ನಿಸ್ಸೀಮರು: ಗೋವಿಂದ ಕಾರಜೋಳ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ದಿನ ನಿತ್ಯ ಧರ್ಮಗಳ, ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸವನ್ನು ಕಾಂಗ್ರೆಸ್​ ಮಾಡುತ್ತಿದೆ. ಹಿಂದೂ ಧರ್ಮಗಳ ಹಬ್ಬದ ಸಂದರ್ಭದಲ್ಲಿ ಕೋಮು ಗಲಭೆ ಸೃಷ್ಟಿಸಿ ಪೊಲೀಸರ ಸರ್ವಗಾವಲು ಹಾಕುವ ಮೂಲಕ ಹಬ್ಬಗಳನ್ನು ನೆಮ್ಮದಿಯಾಗಿ ಆಚರಿಸಲು ತಡೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂರ್ಪೂಣ ಹದಗೆಟ್ಟಿದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗಣೇಶ ಮೂತಿರ್ಗೆ ಕಲ್ಲು ಎಸೆದ ಪ್ರಕರಣ ಸರ್ಕಾರದ ಆಡಳಿತದ ವೈಲ್ಯವಾಗಿದೆ. ಮುಸಲ್ಮಾನರು ಇಲ್ಲದ ಊರಲ್ಲಿ ಹಿಂದೂಗಳು ಮೊಹರಂ ಆಚರಿಸಿಕೊಂಡು ಬರಲಾಗುತ್ತಿದೆ, ಆದರೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೋಮುಸೌಹಾರ್ದತೆ ಹಾಳು ಮಾಡುತ್ತಿದೆ. ಗಣೇಶ ಹಬ್ಬದ ಸಂದರ್ಭದಲ್ಲಿ ಅಲಂಕಾರ ಮಾಡಬೇಡಿ, ವಾದ್ಯಗಳನ್ನು ಹಚ್ಚಬೇಡಿ, ಗಣೇಶನನ್ನು ಪ್ರತಿಷ್ಠಾಪಿಸಬೇಡಿ ಎಂಬ ನಿರ್ಬಂಧ ಹೇರುವುದು ಎಷ್ಟು ಸರಿ ಎಂದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ಆಡಳಿತಕ್ಕೆ ಬಂದು ಎರಡು ವರ್ಷಗಳಾದರೂ ಒಂದೇ ಒಂದು ಅಭಿವೃದ್ಧಿ ಕೆಲಸ ನಡೆದಿಲ್ಲ. ನೀರಾವರಿ, ರಸ್ತೆ ಕೆಲಸಗಳ ಅಭಿವೃದ್ಧಿ ಶೂನ್ಯವಾಗಿವೆ. ಬೆಲೆಗಳು ಗಗನಕ್ಕೆ ಏರಿವೆ. ಮದ್ಯ ಶೇ. 400ರಷ್ಟು ಹೆಚ್ಚಳ, ಮನೆ, ನೀರು ಟ್ಯಾಕ್ಸ್​ ಹೆಚ್ಚಳ, ವಿದ್ಯುತ್​ ದರ ಹೆಚ್ಚಳ ಮೂಲಕ ಜನಸಾಮಾನ್ಯರ ಬದುಕಿನ ಮೇಲೆ ಹೊರೆ ಹಾಕುತ್ತಿದೆ. ಎರಡು ವರ್ಷದ ಬಜೆಟ್​ 38 ಸಾವಿರ ಕೋಟಿ ಎಸ್ಸಿಪಿ-ಟಿಎಸ್ಸಿ ಹಣವನ್ನು ಕಾಂಗ್ರೆಸ್​ ಸರ್ಕಾರ ದುರುಪಯೋಗ ಮಾಡಿಕೊಂಡಿದೆ ಎಂದರು.

ಮೀಸಲಾತಿ ಹೆಚ್ಚಿಸಿದ್ದ ಬಿಜೆಪಿ:

ಈ ಹಿಂದೆ ಸಾಮಾಜಿಕ ಶೈಕ್ಷಣಿಕ ಒಳ ಮೀಸಲಾತಿ ಸಮರ್ಪಕ ನಡೆದಿಲ್ಲ. ಎಸ್ಸಿ ಶೇ.15, ಎಸ್ಸಿ ಶೇ. 3ರಷ್ಟು ಮೀಸಲಾತಿ ಇತ್ತು. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಎಸ್ಸಿಗೆ ಶೇ. 17, ಎಸ್ಟಿ ಶೇ. 7 ರಷ್ಟು ಮೀಸಲು ಹೆಚ್ಚಿಸಿದ್ದರು. ಆದರೆ ಕಾಂಗ್ರೆಸ್​ ಶಾಸಕರು ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿಲ್ಲ ಎಂದು ಸದನದಲ್ಲಿ ಚರ್ಚೆ ಮಾಡಿ ಸುಳ್ಳು ಹೇಳಿದ್ದರು. ಈಗ ಶೇ. 17ರಷ್ಟು ಮೀಸಲಾತಿಯಲ್ಲಿ ಎಡ, ಬಲ, ತೃತೀಯ ಎಂದು ಕಾಂಗ್ರೆಸ್​ ಹಂಚಿಕೆ ಮಾಡಿದೆ. ಹಾಗಿದ್ದರೆ ಶೇ. 17ರಷ್ಟು ಮಿಸಲು ಎಲ್ಲಿಂದ ಬಂತು ಎಂದು ಕಾಂಗ್ರೆಸ್​ ಪಕ್ಷವನ್ನು ಪ್ರಶ್ನಿಸಿದರು.

ಆದಿ ಆಂಧ್ರ ಜಾತಿಯನ್ನು ಮೂಲ ಜಾತಿಗೆ ಸೇರಿಸಬೇಕು ಎಂದು ಒತ್ತಾಯಿಸಿದ ಗೋವಿಂದ ಕಾರಜೊಳ ಈಗಾಗಲೇ ವೈಜ್ಞಾನಿಕ ಜಾತಿಗಣತಿ ಆಗಿದೆ. ನಾಗಮೋಹನದಾಸ ಹಾಗೂ ಮಾಧುಸ್ವಾಮಿ ಅವರ ವರದಿ ವೈಜ್ಞಾನಿಕವಾಗಿದ್ದು ಸಂರ್ಪೂಣ ವರದಿಯನ್ನು ಜಾರಿಗೊಳಿಸಬೇಕಿತ್ತು. ಜಿ. ಪರಮೇಶ್ವರ ಶಿವಾನಂದ ತಂಗಡಗಿ, ಮಹದೇವಪ್ಪ ಅವರು ಯಾವ ಜನಾಂಗಕ್ಕೂ ಉಪಯೋಗವಾಗದಂತಹ ಒಳಮೀಸಲಾತಿ ಜಾರಿಗೆ ತರಲು ತಿಪ್ಪೆಸಾರಿಸುವ ಕೆಲಸ ಮಾಡಿದ್ದಾರೆ. ಸರ್ಕಾರಕ್ಕೆ ಈಗಲೂ ತಿದ್ದುಪಡಿ ಮಾಡಲು ಅವಕಾಶವಿದೆ. ತಿದ್ದುಪಡಿಗೆ ಮುಂದಾಗದಿದ್ದರೆ ಸರ್ಕಾರ ಬಗ್ಗಿಸಲು ಹೋರಾಟ ಮಾಡಲಾಗುವುದು ಸೆ. 22ರಂದು ಆರಂಭವಾಗುವ ಜಾತಿಗಣತಿಗೆ ನಮ್ಮ ಸಂರ್ಪೂಣ ವಿರೋಧವಿದೆ. ಮತ್ತೊಮ್ಮೆ ಗಣತಿ ಮಾಡುವುದು ಸರಿಯಲ್ಲ ಎಂದು ಕಾರಜೋಳ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಲಿಂಗರಾಜ ಪಾಟೀಲ, ಮಂಜುನಾಥ ಮುಳಗುಂದ, ಉಷಾ ದಾಸರ, ಎಂ. ಎಂ. ಹಿರೇಮಠ ಇತರರು ಇದ್ದರು.