ಗದಗ: ಗದಗ ಜಿಲ್ಲಾ ಸಜ್ಜನ ಗಾಣಿಗ ಸಮಾಜ ಸುಧಾರಣಾ ಸಂಘದಲ್ಲಿ ಜರುಗಿದ ದಿವಂಗತ ಶ್ರೀ ಚನ್ನಬಸಪ್ಪ ಗು. ಕೊರವನವರ (ಬಡ್ನಿ) ಸಾ. ಹೊಂಬಳ ಇವರ ಸ್ಮರಣಾರ್ಥ ನಿರ್ಮಿಸಿದ ಸಂಘದ ನೂತನ ಕಾರ್ಯಾಲಯದ ಉದ್ಘಾಟನೆ ಕಾರ್ಯಕ್ರಮ, ಸನ್ 2024-25 ನೇ ಸಾಲಿನ ಎಸ್.ಎಸ್.ಎಲ್.ಸಿ., ಪಿಯುಸಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಮತ್ತು 20ನೇ ವರ್ಷದ ವಾರ್ಷಿಕ ಸರ್ವ ಸಾಧಾರಣ ಸಭೆಯು ಮುಳಗುಂದ ರಸ್ತೆಯಲ್ಲಿರುವ ಚನ್ನಮ್ಮ ಭವನದಲ್ಲಿ ಬಹಳ ವಿಜೃಂಭಣೆಯಿAದ ಜರುಗಿತು.
ಗದಗ ಜಿಲ್ಲಾ ಸಜ್ಜನ ಗಾಣಿಗ ಸಮಾಜದ ಕಾರ್ಯಾಲಯದ ಜಾಗದಲ್ಲಿ ನಿರ್ಮಿಸಿದ ದಿವಂಗತ ಶ್ರೀ ಚನ್ನಬಸಪ್ಪ ಗು. ಕೊರವನವರ (ಬಡ್ನಿ) ಸಾ. ಹೊಂಬಳ ಇವರ ಸ್ಮರಣಾರ್ಥ ನಿರ್ಮಿಸಿದ ಕಾರ್ಯಾಲಯದ ಕಟ್ಟಡದ ಉದ್ಘಾಟನೆಯನ್ನು ಸನ್ಮಾನ್ಯ ಶ್ರೀ ಡಾ. ಎಚ್. ಕೆ. ಪಾಟೀಲ ಮಾನ್ಯ ಕಾನೂನು, ನ್ಯಾಯ, ಮಾನವ ಹಕ್ಕುಗಳ, ಸಂಸದೀಯ ವ್ಯವಹಾರಗಳ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟನೆಯನ್ನು ಮಾಡಿ ಸಜ್ಜನ ಗಾಣಿಗ ಸಮಾಜ ತನ್ನದೇ ಆದ ಇತಿಹಾಸವನ್ನು ಒಳಗೊಂಡಿದ್ದು, ಗಾಣದಿಂದ ಎಣ್ಣೆಯನ್ನು ತೆಗೆದು ಸಮಾಜವನ್ನು ಬೆಳಗಿದವರು. ಸಜ್ಜನ ಸಮಾಜದವರು ಸಮಾಜಕ್ಕಾಗಿ ಹಗಲಿರುಳು ದುಡಿಯುವಂತಹವರು. ದಿವಂಗತ ಚನ್ನಬಸಪ್ಪ ಮತ್ತು ತಮ್ಮ ಮನೆತನದ ನಡುವೆ ಇರುವ ಅವಿನಾಭಾವ ಸಂಬAಧದ ಬಗೆಗೆ ಹೇಳುತ್ತಾ ಅವರು ನಮ್ಮ ಕುಟುಂಬದ ಹಿರಿಯ ಸಹೋದರರಂತೆ ಇದ್ದರು ಎಂದು ಸ್ಮರಿಸಿದರು. ಮೊಬೈಲ್ ಗಾಣದ ಮುಖಾಂತರ ಹೊಸ ವ್ಯಾಪಾರದ ಕಡೆ ದಾಪುಗಾಲು ಹಾಕಬೇಕು ಎಂದು ಹೇಳುತ್ತಾ ಗಾಣಿಗ ಸಮಾಜದವರಿಗೆ ಶನಿಕಾಟವಿಲ್ಲವೆಂದು ಓದಿ ತಿಳಿದುಕೊಂಡಿದ್ದೇನೆ. ಆದ್ದರಿಂದ ಸಜ್ಜನ ಸಮಾಜದವರು ನಮ್ಮ ಜೊತೆಗೆ ಒಬ್ಬರಿದ್ದರೆ ಸಾಕು ನಮಗೂ ಶನಿ ಕಾಟವಿರುವುದಿಲ್ಲವೆಂದು ಹೇಳಿ ಸಭೆಯನ್ನು ನಗೆಗಡುವಿನಲ್ಲಿ ತೇಲಿಸಿ ನಿಮ್ಮ ಸಮಾಜದ ಏಳ್ಗೆಗಾಗಿ ಸದಾ ಬೆನ್ನೆಲುಬಾಗಿ ನಿಂತಿರುತ್ತೇವೆ ಎಂದು ಹೇಳಿದರು.
ಸನ್ಮಾನ್ಯ ಶ್ರೀ ಡಿ. ಆರ್. ಪಾಟೀಲ ಕಾರ್ಯಾಲಯದ ಕಟ್ಟಡಕ್ಕೆ ಭೇಟಿ ಕೊಟ್ಟು ಸಮಾಜಕ್ಕೆ ಶುಭ ಹಾರೈಸಿದರು. ಗದಗ ಜಿಲ್ಲಾ ಸಜ್ಜನ ಸಮಾಜದ ಮೊಬೈಲ್ ನಂಬರ ಹೊಂದಿದ ಪುಸ್ತಕ ಲೋಕಾರ್ಪಣೆ ಮತ್ತು 2024-25ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ವಿದ್ಯಾರ್ಥಿ/ನಿಯರಿಗೆ ಪ್ರತಿಭಾ ಪುರಸ್ಕಾರವನ್ನು ಬ್ಯಾಗ್ ನೋಟಬುಕ್ ಕಿಟ್, ಕ್ಯಾಲ್ಕುಲೇಟರ್, ಪೆನ್ನುಸ್ಟಾö್ಯಂಡ್, ನೆನಪಿನ ಕಾಣಿಕೆ ನೀಡಿ ಗೌರವಿಸಿ ಶಿಕ್ಷಣ ಹೊಂದಿದ್ದರೆ ಸಮಾಜ ಇನ್ನೂ ಎತ್ತರಕ್ಕೆ ಬೆಳೆಯಲು ಸಾಧ್ಯವಿದೆ. ಸಜ್ಜನ ಗಾಣಿಗ ಸಮಾಜದವರು ಯಾರ ತಂಟೆಗೆ ಹೋಗದವರಲ್ಲ ತಮ್ಮ ಪಾಡಿಗೆ ತಾವು ಇರುವವರು ಎಂದು ಸನ್ಮಾನ್ಯ ಶ್ರೀ ಎಸ್. ವ್ಹಿ. ಸಂಕನೂರ ಅವರು ಹೇಳಿದರು.
ಸಜ್ಜನ ಸಮಾಜದ ಜೊತೆಗಿನ ಸಂಬAಧ ಬಹಳ ಹಳೆಯ ಸಂಬAಧ ನನ್ನ ರಾಜಕೀಯ ಜೀವನದಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ಈ ಸಮಾಜ ನನ್ನ ಬೆನ್ನ ಹಿಂದೆ ಸದಾಕಾಲ ಇರುವುದನ್ನು ಬಿ. ಆರ್. ಯಾವಗಲ್ಲ ಅವರು ಸ್ಮರಿಸಿದರು. ಒಗ್ಗಟ್ಟಾಗಿ ತಾವೆಲ್ಲರೂ ಸಮಾಜವನ್ನು ಬೆಳೆಸಬೇಕೆಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಗದಗ ಜಿಲ್ಲಾ ಸಜ್ಜನ ಗಾಣಿಗ ಸುಧಾರಣಾ ಸಂಘದ ಅಧ್ಯಕ್ಷರಾದ ಡಾ. ನಾಗರಾಜ ಶಂ. ಸಜ್ಜನರ ಅವರು ಸಮಾಜದ ನಡೆದ ಬಂದ ಬಗೆಗೆ ಸಮಾಜದ ಕಾರ್ಯಕ್ರಮಗಳ ಬಗೆಗೆ ಮಾತನಾಡುತ್ತ ಸಹಾಯ, ಸಹಕಾರ ಮಾಡಿದ ಎಲ್ಲರನ್ನೂ ಸ್ಮರಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಗಾಣಿಗ ಸಮಾಜದ ಶ್ರೀ ಬಸವರಾಜ ಬಿಂಗಿ, ಪಂಚಗ್ಯಾರAಟಿ ಯೋಜನಾ ಅಧ್ಯಕ್ಷರಾದ ಶ್ರೀ ಬಿ. ಬಿ. ಅಸೂಟಿ, ಮಾಜಿ ಜಿ.ಪಂ. ಅಧ್ಯಕ್ಷರಾದ ಶ್ರೀ ಸಿದ್ದಲಿಂಗೇಶ ಪಾಟೀಲ, ಡಾ. ರಾಜೇಂದ್ರ ಚ. ಬಸರಿಗಿಡದ, ದಾನಿಗಳಾದ ಶ್ರೀಮತಿ ಅಕ್ಕಮಹಾದೇವಿ ಚ. ಕೊರವನವರ, ಶ್ರೀ ಗುರುಸಿದ್ದಪ್ಪ ಚ. ಕೊರವನವರ ಮತ್ತು ಅವರ ಕುಟುಂಬ ವರ್ಗ, ಅಖಿಲ ಭಾರತ ಸಜ್ಜನ ಗಾಣಿಗ ಸಮಾಜದ ಉಪಾಧ್ಯಕ್ಷರಾದ ಶ್ರೀ ಮಹಾಲಿಂಗೇಶ ಜಿಗಳೂರ, ಶ್ರೀ ವಿರುಪಾಕ್ಷಪ್ಪ ಹರ್ಲಾಪೂರ, ಶ್ರೀ ಸಂಗಮೇಶ ಸಜ್ಜನ ಉಪಸ್ಥಿತಿರಿದ್ದರು ಹಾಗೂ ಗದಗ ಜಿಲ್ಲೆಯ ತಾಲೂಕು, ಬೇರೆ ಬೇರೆ ಗ್ರಾಮದ ಸಮಾಜದ ಸರ್ವ ಸದಸ್ಯರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಗದಗ ಜಿಲ್ಲಾ ಸಜ್ಜನ ಗಾಣಿಗ ಸಮಾಜದ ಪದಾಧಿಕಾರಿಗಳು, ಮಹಿಳಾ ಪದಾಧಿಕಾರಿಗಳು, ಸಲಹಾ ಸಮಿತಿ ಸದಸ್ಯರುಗಳು ಗೌರವಾನ್ವಿತ ಸರ್ವ ಸದಸ್ಯರು ಭಾಗವಹಿಸಿದ್ದರು.
ಕಾರ್ಯಕ್ರಮದ ಪ್ರಾರ್ಥನೆಯನ್ನು ಶ್ರೀಮತಿ ರಾಜೇಶ್ವರಿ ಸಜ್ಜನರ ಮಾಡಿದರು. ಸ್ವಾಗತ ಮತ್ತು ಪರಿಚಯ ಭಾಷಣವನ್ನು ಪ್ರೊ. ಸಿದ್ದಲಿಂಗೇಶ ಉ. ಸಜ್ಜನಶೆಟ್ಟರ್ ನೆರವೇರಿಸಿದರು. ನಿರೂಪಣೆಯನ್ನು ಡಾ|| ಸಂಗಮೇಶ ಸಜ್ಜನರ ಹಾಗೂ ಇಂಜನೀಯರ ಉಮೇಶ ಶ. ಸಜ್ಜನರ ನಡೆಸಿಕೊಟ್ಟರು. ವಂದನಾರ್ಪಣೆಯನ್ನು ಶ್ರೀ ವಿಜಯಕುಮಾರ ಸಿ. ಸಜ್ಜನರ ಮಾಡಿದರು.