ಜಿಲ್ಲೆ

ಗಜಮುಖನೆ, ಗಣಪತಿಯೇ ನಿನಗೆ ವಂಧನೆ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ಮುದ್ರಣಕಾಶಿಯಲ್ಲಿ ಗಣೇಶೋತ್ಸವದ ಸಂಭ್ರಮ ಕಳೆಗಟ್ಟಿದೆ. ಗಲ್ಲಿ ಗಲ್ಲಿಯಲ್ಲೂ ವಿಗ್ನೇಶ್ವರ ಪ್ರತಿಷ್ಠಾಪನೆಗೆ ಪೆಂಡಾಲ್​ಗಳು ತಲೆಯೆತ್ತಿವೆ. ಬೀದಿ ಬೀದಿಗೂ ವಿದ್ಯುತ್​ ದೀಪಾಲಂಕಾರ ಮಾಡಲಾಗಿದೆ. ವಿವಿಧ ಸ್ಥಳದಲ್ಲಿ ಕೇಸರಿ ಬಟ್ಟೆಯ ಕಮಾನು, ಮಹಾದ್ವಾರಗಳು ಕಣ್ಮನ ಸೆಳೆಯುತ್ತಿವೆ. ಜತೆಗೆ ಮನೆಮನೆಗಳಲ್ಲೂ ಕಡುಬಿನ ಸುವಾಸನೆ ಬೀರಿದೆ.

ಗದಗ ಜಿಲ್ಲೆ ಮುದ್ರಣಕ್ಕೆ ಹೆಸರು ವಾಸಿ ಆಗಿತ್ತು. ಇತ್ತೀಚಿನ ದಿನಗಳಲ್ಲಿ ಗಣೇಶ ಪ್ರತಿಷ್ಠಾಪನೆಗೂ ಹೆಸರು ವಾಸಿಯಾಗಿದೆ. ನಾಲ್ಕೆದು ದಶಕಗಳಿಗಿಂತಲೂ ಅಧಿಕ ಅವಧೀಗೆ ಸಾರ್ವಜನಿಕ ಗಣೇಶ ಪ್ರತಿಷ್ಠಾಪಿಸುತ್ತ ಬಂದಿರುವ ಅನೇಕ ಸಾರ್ವಜನಿಕ ಸಂಸ್ಥೆಗಳು ಜಿಲ್ಲೆಯಲ್ಲಿವೆ. ಹಾಗಾಗಿ ಮುದ್ರಣ ನಗರಿಯ ಗಣೇಶೋತ್ಸವ ಆಚರಣೆಗಳಿಗೆ ದಶಕಗಳ ಇತಿಹಾಸವಿದೆ ಎಂಬುದು ವಿಶೇಷ. ಬುಧವಾರ ಪ್ರತಿಷ್ಠಾಪಿಸಲ್ಪಡುವ ವಿನಾಯಕನ ಆಗಮನಕ್ಕೆ ಪ್ರತಿ ಮನೆಗಳಲ್ಲಿ ಆಡಂಭರದ ಸಿದ್ಧತೆ ನಡೆದಿದೆ.

ನಗರ ಸೇರಿದಂತೆ ಜಿಲ್ಲೆಯ ಪಟ್ಟಣ ಪ್ರದೇಶಗಳ ಮಾರುಕಟ್ಟೆಗಳಲ್ಲಿ ಗಣೇಶೋತ್ಸವಕ್ಕಾಗಿ ಅಲಂಕಾರಿಕ ಹಾಗೂ ಪೂಜಾ ಸಾಮಗ್ರಿಗಳ ಖರೀದಿ ಜೋರಾಗಿದೆ. ಬೆಲೆ ಏರಿಕೆ ಬಿಸಿ ನಡುವೆಯೂ ಗಣೇಶೋತ್ಸವದ ಅಗತ್ಯ ಸಾಮಗ್ರಿ ಖರೀದಿಯಲ್ಲಿ ಜನರು ಮಗ್ನರಾಗಿದ್ದಾರೆ. ಲೆ$್ಮಶ್ವರ, ಶಿರಹಟ್ಟಿ, ನರಗುಂದ ಮಾರುಕಟ್ಟೆಗಳು ಹುಬ್ಬಳ್ಳಿಯ ಮುಖ್ಯ ಮಾರುಕಟ್ಟೆ ಅವಲಂಭಿಸಿವೆ. ಹೀಗಾಗಿ ಹುಬ್ಬಳ್ಳಿಯಿಂದ ಅಧಿಕ ಸಾಮಗ್ರಿಗಳು ಲೆ$್ಮಶ್ವರ ಶಿರಹಟ್ಟಿ ಮತ್ತು ನರಗುಂದ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅದೇ ರೀತಿ ಮುಂಡರಗಿ, ರೋಣ ಗಜೇಂದ್ರಗಡ ಮಾರುಕಟ್ಟೆಗಳು ಗದಗ ಮುಖ್ಯ ಮಾರುಕಟ್ಟೆಯನ್ನು ಅವಲಂಭಿಸಿದ್ದು, ಖರೀದಿ ಭರಾಟೆ ಅಧಿಕವಾಗಿದೆ.

ಕಳೆದೆರಡು ದಿನಗಳಿಂದ ಜಿಲ್ಲೆಯ ಮಾರುಕಟ್ಟೆಯಲ್ಲಿ ಜನದಟ್ಟಣೆ ಅಧಿಕವಾಗಿದೆ. ಮನೆ, ಸಾರ್ವತ್ರಿಕವಾಗಿ ಗಣೇಶನನ್ನು ಪ್ರತಿಷ್ಠಾಪಿಸಲ್ಪಡುವ ಹಿನ್ನೆಲೆ ಅಗತ್ಯ ವಸ್ತುಗಳ ಖರೀದಿಗಾಗಿ ಮನೆ ಯಜಮಾನರು, ಸಂ ಸಂಸ್ಥೆಯ ಮುಖ್ಯಸ್ಥರು, ಗಜಾನನ ಮಂಡಳದವರು ಮಾರುಕಟ್ಟೆಯಲ್ಲಿ ಅನೇಕಾನೇಕ ವಸ್ತುಗಳ ಖರೀದಿ ಮಾಡುತ್ತಿದ್ದಾರೆ. ನಗರದ ಗ್ರೇನ್​ ಮಾರುಕಟ್ಟೆ, ಬ್ಯಾಂಕ್​ ರಸ್ತೆ, ಟಾಂಗಾ ಕೂಟ, ಸ್ಟೇಷನ್​ ರಸ್ತೆ, ಮಹೇಂದ್ರಕರ ವೃತ್ತಗಳಲ್ಲಿ ಗಣೇಶ ಪೂಜೆ, ವೇದಿಕೆ ಅಲಂಕಾರಕ್ಕೆ ಅಗತ್ಯವಾದ ಬಾಳೆ ದಿಂಡುಗಳು, ಕಬ್ಬು, ಸೇವಂತಿಗೆ, ಮಲ್ಲಿಗೆ, ಚೆಂಡು ಹೂವು, ನಾನಾ ತರದ ಹಣ್ಣುಗಳು, ಮಾವಿನ ತಳಿರು-ತೋರಣಗಳನ್ನು ಖರೀದಿಸುತ್ತಿದ್ದಾರೆ.

ಬೆಟಗೇರಿ ಟೆಂಗಿನಕಾಯಿ ಬಜಾರಿನ ಸಾರ್ವಜನಿಕ ಗಣೇಶೋತ್ಸವ, ದಾಸರ ಒಣಿ, ಕಿಲ್ಲಾ ನಗರಿ, ನಾಲವಾಡ ಗಲ್ಲಿ, ಒಕ್ಕಲಗೇರಿ ಗಣೇಶೋತ್ಸವ, ಹನುಮಾನ ಗರಡಿ ಹತ್ತಿರ ಮದ್ಲಿ ಓಣಿ, ಶಾಹರಪೂರ ಪೇಟೆ ಬಸವೇಶ್ವರ ನಗರ, ಆದರ್ಶ ಗಜಾನನೋತ್ಸವ ಜತೆಗೆ ಖಾನತೋಟದ ಹಿಂದೂ ಮಹಾಗಣಪತಿ, ಸುದರ್ಶನ ಯುವಕ ಮಂಡಳದಿಂದ ಸ್ಥಾಪಿಸುವ ಹಿಂದೂ ಗಣಪತಿ ಸೇರಿದಂತೆ ಜಿಲ್ಲೆಯಾದ್ಯಂತ ಇಂತಹ ಸಾವಿರಕ್ಕೂ ಅಧಿಕ ಸಂಸ್ಥೆಗಳು ಸ್ಥಾಪಿಸುವ ಸಾರ್ವಜನಿಕ ಗಣೇಶೋತ್ಸವ ಹೆಸರಾಗಿವೆ. ಪ್ರಮುಖವಾಗಿ 5 ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಹಲವಡೆ ಸಂಗೀತ ಕಾರ್ಯಕ್ರಮ, ಅನ್ನಸಂತರ್ಪಣೆ, ಬೃಹತ್​ ಮೆರವಣಿಗೆ ನೆರವೇರಲಿವೆ.

ಜಿಲ್ಲೆಯಲ್ಲಿ ಪ್ರತಿಷ್ಠಾಪನೆ:

ಜಿಲ್ಲಾದ್ಯಂತ ಈ ಬಾರಿ ಗಲ್ಲಿ-ಗಲ್ಲಿಗಳಲ್ಲಿ 1500ಕ್ಕೂ ಅಧಿಕ ಗಣೇಶ ಮೂತಿರ್ಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಈ ಪೈಕಿ ಗದಗ, ಲೆ$್ಮಶ್ವರ ಮತ್ತು ಮುಂಡರಗಿಯಲ್ಲಿ ಅಧಿಕ ಮೂತಿರ್ಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಪೊಲೀಸ್​ ಇಲಾಖೆಯಿಂದ ಸಾರ್ವಜನಿಕ ಪ್ರತಿಷ್ಠಾಪನೆ ಸ್ಥಳಗಳನ್ನು ಸೂಕ್ಷ$್ಮ, ಅತೀ ಸೂಕ್ಷ$್ಮ ಮತ್ತು ಸಾಧಾರಣ ಸ್ಥಳ ಎಂದು ಗುರುತಿಸಲಾಗಿದ್ದು, ಸೂಕ್ತ ಪೊಲೀಸ್​ ಬಂದೂಬಸ್ತ ಮಾಡಲಾಗಿದೆ. ಪ್ರಮುಖ ಗಣೇಶೋತ್ಸವ ಮಂಡಳಿಗಳು ಅನುಮತಿ ಪಡೆದಿದ್ದು, ಇನ್ನೂಳಿದಂತೆ ಸಾಮಾನ್ಯವಾಗಿ ಪ್ರತಿಷ್ಠಾಪಿಸುವ ಸಾರ್ವಜನಿಕ ಉತ್ಸವ ಮಂಡಳಿಗಳು ಅನುಮತಿ ಪಡೆದಿಲ್ಲ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ನಗರದಲ್ಲಿ ಪ್ರತಿಷ್ಠಾಪನೆ

ಗದಗ- ಬೆಟಗೇರಿಯಲ್ಲಿ 200 ಕ್ಕೂ ಅಧಿಕ ಸಾರ್ವಜನಿಕ ಗಣೇಶ ಸೇರಿದಂತೆ ಜಿಲ್ಲೆಯಾದ್ಯಂತ ಂದಾಜು 1500 ಕ್ಕೂ ಅಧಿಕ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆೆಗೆ ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ. ಗಣೇಶನಿಗೆ ವಿಶೇಷ ಮಂಟಪ, ದೀಪಾಲಂಕಾರ, ಮ್ಯೂಸಿಕ್​ ಸಿಸ್ಟಮ್​, ಬೃಹತ್​ ಶ್ಯಾಮಿಯಾನ ಸೇರಿದಂತೆ ವಿವಿಧ ಅಲಂಕಾರಕ ವಸ್ತುಗಳಿಂದ ಸಿಂಗಾರ ಮಾಡಲಾಗಿದೆ. ಗಣೇಶ ಮೂತಿರ್ ತಯಾರಕರಿಗೆ ಉತ್ಸವ ಮಂಡಳಿಗಳು ಮುಂಗಡ ಬುಕ್ಕಿಂಗ್​ ಮಾಡಿದ್ದಾರೆ.

ಮಾರಾಟ ಮಳಿಗೆಗಳು:

ಗಣೇಶನ ಮೂತಿರ್ ಖರೀದಿಗಾಗಿ ಅವಳಿ ನಗರ ಸೇರಿದಂತೆ ಜಿಲ್ಲೆಯ ಜನತೆ ತಮಗೆ ಬೇಕಾದ ಗಾತ್ರದ, ವಿನ್ಯಾಸದ ಪರಿಸರ ಸ್ನೇಹಿ ಗಣೇಶ ಮೂತಿರ್ಗಳು ಜನತೆಗೆ ಸುಲಭವಾಗಿ ದೊರೆಯಲಿ ಎಂಬ ಉದ್ದೇಶದಿಂದ ಒಂದೇ ಜಾಗದಲ್ಲಿ ಮೂತಿರ್ಗಳ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದೆ. ಮಾರಾಟಗಾರರಿಗೆ, ಖರೀದಿದಾರರಿಗೆ ಅನುಕೂಲ ಕಲ್ಪಿಸಲು ನಗರದ ಎಪಿಎಂಸಿ ಆವರಣದಲ್ಲಿರುವ ವಿವೇಕಾನಂದ ಸಭಾಂಗಣದಲ್ಲಿ ಗಣೇಶ ಮೂತಿರ್ ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆ. ಪಟಾಕಿ ಖರೀದಿಗೆ ನಗರದ ವಿಡಿಎಸ್​ ಮೈದಾನದಲ್ಲಿ ಮಳಿಗೆ ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಪರಿಸರಕ್ಕೆ ಮಾರಕವಾಗುವ ಪ್ಲಾಸ್ಟರ್​ ಆಫ್​ ಪ್ಯಾರಿಸ್​ ಗಣೇಶ ಮೂತಿರ್ಗಳ ಮಾರಾಟವನ್ನು ಜಿಲ್ಲಾಡಳಿತ ಕಟ್ಟುನಿಟ್ಟಾಗಿ ನಿಷೇದಿಸಿದೆ. ಹೀಗಾಗಿ ಸಂರ್ಪೂಣವಾಗಿ ಮಣ್ಣಿನಿಂದ ಮಾಡಿರುವ ಗಣೇಶ ಮೂತಿರ್ ಮಾರಾಟ ಮಾಡಲಾಗುತ್ತದೆ. ಪಾರ್ವತಿ- ಪರಮೇಶ್ವರ, ಗೌರಿ-ಗಣೇಶ, ಸಾಯಿಬಾಬಾ, ಬಾಲಗಣೇಶ, ಕೃಷ್ಣ ಸೇರಿದಂತೆ ನಾನಾ ರೂಪದಲ್ಲಿ ಅರಳಿರುವ ಮೂತಿರ್ಗಳು ಇಲ್ಲಿ ಮಾರಾಟ ಮಾಡಲಾಗುತ್ತಿದೆ.