ಜಿಲ್ಲೆ

ಸತ್ಯನಾರಾಯಣ ಪುರಾಣ ಪಾರಾಯಣ

Gadag - Shivanand Hiremath

ಗದಗ: ನಗರದ ಶ್ರೀ ಪಂ.ಪಂಚಾಕ್ಷರಿ ಗವಾಯಿಗಳ ಮಾರುಕಟ್ಟೆ ಯಲ್ಲಿ  ದಲಾಲ ವರ್ತಕರ ಸಂಘ, ಖರೀದಿದಾರರ ಸಂಘದ ಶ್ರೀ ಗಜಾನನೋತ್ಸವ ಟ್ರಸ್ಟ್ ಕಮೀಟಿ ವತಿಯಿಂದ ಗಣೇಶನ  ಪ್ರತಿಷ್ಟಾಪನೆ ಮಾಡಲಾಗಿದ್ದು. ಶುಕ್ರವಾರ ಬೆಳಿಗ್ಗೆ ಸತ್ಯನಾರಾಯಣ ಪೂಜೆ ಸಲ್ಲಿಸಿದ ಶಂಭುಲಿಂಗ ಶಾಸ್ತ್ರೀಗಳು ಶ್ರೀ ಸತ್ಯನಾರಾಯಣ ಪುರಾಣ ಪಾರಾಯಣ ಮಾಡಿದರು. 

ಪೂಜೆ ಮಾಡುವದರಿಂದ ಬಡತನ ದೂರವಾಗಿ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸುವದರ ಜೊತೆಗೆ ಸಂತಾನ ಪ್ರಾಪ್ತಿ ಲಭಿಸುವುದು. ನಿಮ್ಮ ಇಷ್ಟಾರ್ಥಗಳು ಸಿದ್ಧಿಯಾಗುವದರ ಜೊತೆಗೆ ಕಷ್ಣ ಕಾರ್ಪಣ್ಯಗಳು ದೂರವಾಗಿ ಎಲ್ಲರ ವ್ಯಾಪಾರ, ಉದ್ಯೋಗ ನಿರ್ವಿಘ್ನವಾಗಿ ನಡೆಯಲಿವೆ ಎಂದು ಭಕ್ತರಿ ಹೇಳಿದರು. ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜನವರು ಶ್ರೀ ಸತ್ಯನಾರಾಯಣ ಪುಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅನ್ನ ಸಂತರ್ಪಣೆಗೆ ಚಾಲನೆ ನೀಡಿ ಆಶೀರ್ವದಿಸಿದರು. ಶ್ರೀ ಸತ್ಯನಾರಾಯಣ ಪೂಜೆಯಲ್ಲಿ         

ಶ್ರೀ ಗಜಾನನೋತ್ಸವ ಟ್ರಸ್ಟ್ ಕಮೀಟಿ ಅಧ್ಯಕ್ಷ ತಿಮ್ಮಣ್ಣ ಕೋನರೆಡ್ಡಿ, ಗೌರವ ಅಧ್ಯಕ್ಷ ಪ್ರಮೋದ ವಾರಕರ, ಕಾರ್ಯದರ್ಶಿ ರಾಜಶೇಖರ ಮುಧೋಳ, ಉಪಾಧ್ಯಕ್ಷ ರಾಜು ಮೂಲಿಮನಿ, ಸಹ ಕಾರ್ಯದರ್ಶಿ ಚಂದ್ರಕಾಂತ ಸವದತ್ತಿ, ಖಜಾಂಚಿ ಮಹೇಶ ಗಾಣಗೇರ, ಸಹ ಖಜಾಂಚಿ ನೀತಿಶ ವಾಲಿ, ವಿನಾಯಕ ವಜ್ರೇಶ್ವರಿ, ವಿವೇಕಾನಂದ ಗುಡಿಮನಿ, ಕೊಟ್ರೇಶ ಬಾಳಿಕಾಯಿ, ಗಿರೀಶ ಅಳವಂಡಿ, ದಯಾನಂದ ಗುಂಡಪ್ಪನವರ, ವಿನಯ ಕಾಡಪ್ಪನವರ, ಸಾಗರ ವಜ್ರೇಶ್ವರಿ, ಮುತ್ತಣ್ಣ ಅಂಗಡಿ, ಅಜೀತ ಪುಣೇಕರ, ಶರಣಬಸಪ್ಪ ಗುಡಿಮನಿ, ಶಾಮದಾಸ ಪುಣೇಕರ, ತಾತನಗೌಡ ಪಾಟೀಲ, ಚನ್ನವೀರೇಶ ಹುಣಸಿಕಟ್ಟಿ, ಅಶೋಕ ಸಂಕಣ್ಣವರ, ಶೇಖಣ್ಣ ಗದ್ದಿಕೇರಿ, ಪ್ರಮೋದ ಬಳಗಾನೂರ, ಜಯಣ್ಣ ಬಾಳಿಹಳ್ಳಿಮಠ, ರಾಘವೇಂದ್ರ ಕಾಲವಾಡ 

ಮಂಜುನಾಥ ಕವಲೂರ, ಬಸವರಾಜ ಅಂಗಡಿ, ಉಮೇಶ ಹುಬ್ಬಳ್ಳಿ ಮಂಜುನಾಥ ಬೇಲೆರಿ, ಹಾಗೂ ದಲಾಲ ವರ್ತಕರ ಸಂಘದ ಹಾಗೂ ಖರೀದಿದಾರರ ಸಂಘದ ಸದಸ್ಯರು  ಶ್ರೀ ಸತ್ಯನಾರಾಯಣ ಪೂಜೆಯಲ್ಲಿ  ಕುಟುಂಬ ಸಮೇತರಾಗಿ ಭಾಗಿಗಳಾಗಿ   ಪುರಾಣ ಶ್ರವಣ ಮಾಡಿದರು. ನಂತರ ಮಹಾ ಅನ್ನಸಂತರ್ಪಣೆ ಜರುಗಿತು