ವಿಜಯವಾಣಿ ಸುದ್ದಿಜಾಲ ಗಜೇಂದ್ರಗಡ
ಶ್ರಾವಣ ಮಾಸದಲ್ಲಿ ಮಹಿಯರಿಗೆ ಉಡಿ ತುಂಬುವ ಮೂಲಕ ನಮ್ಮ ಹಳೆಯ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗಲು ಹಾಗೂ ಉಡಿ ತುಂಬುವ ಮಹತ್ವದ ಬಗ್ಗೆ ಮಹಿಳೆಯರಿಗೆ ಅರಿವು ಹಾಗೂ ಜಾಗೃತಿ ಮೂಡಿಸುವ ಕೆಲಸ ಉತ್ತಮವಾಗಿದೆ ಎಂದು ಮೈಸೂರ ಮಠದ ವಿಜಯಮಹಾಂತ ಸ್ವಾಮೀಜಿ ಅಭಿಪ್ರಾಯ ಪಟ್ಟರು.
ಪಟ್ಟಣದ ಮೈಸೂರ ಮಠದಲ್ಲಿ ಮಂಗಳವಾರ ಶ್ರಾವಣ ಮಾಸದ ಅಂಗವಾಗಿ ವೀರಶೈವ ಲಿಂಗಾಯತ ಸಮಾಜ ಗಜೇಂದ್ರಗಡ ವತಿಯಿಂದ ಶ್ರೀ ಗುಡ್ಡಾಪುರ ದಾನಮ್ಮದೇವಿ ಪುರಾಣದಲ್ಲಿ ಉಡಿ ತುಂಬುವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮಹಿಳೆಯರನ್ನು ಒಗ್ಗೂಡಿಸುವುದರ ಜತೆ ಅವರು ಪಾಲಿಸಬೇಕಾದ ಸಂಪ್ರದಾಯಗಳನ್ನು ತಿಳಿ ಹೇಳುವ ಕೆಲಸ ಮಾಡುತ್ತಿರುವುದು. ದೇವರ ಧ್ಯಾನ ಹಾಗೂ ಬದುಕಿನ ಜಂಜಾಟದ ನಡುವೆ ಎಲ್ಲಾ ಮಹಿಳೆಯರೂ ಒಟ್ಟಿಗೆ ಸೇರಿ ಆಚರಿಸುವ ಉಡಿ ತುಂಬುವ ಕೆಲಸ ಅತ್ಯಂತ ಪುಣ್ಯದ ಕಾಯಕವಾಗಿದೆ ಎಂದರು.
ಸಮಾಜದ ಅಧ್ಯಕ್ಷ ಸಿದ್ದಣ್ಣ ಬಂಡಿ ಮಾತನಾಡಿ, ಶ್ರಾವಣ ಮಾಸ ಮಾಸದಲ್ಲಿ ಮಹಿಳೆಯರ ಪೂಜಾ ಭಾವನೆಗಳು ಹೆಚ್ಚಾಗಿರುತ್ತವೆ. ಇದರಿಂದ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ.ಹೀಗಾಗಿ ಸಮಾಜದ ವತಿಯಿಂದ 1 ಸಾವಿರಕ್ಕೂ ಅಧಿಕ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪುರಾಣ ಕಮಿಟಿ ಅಧ್ಯಕ್ಷ ಟಿ.ಎಸ್.ರಾಜೂರು, ಎ.ಪಿ.ಗಾಣಿಗೆರ, ಪ್ರಭು ಚವಡಿ, ವಿದ್ಯಾ ಬಂಡಿ, ಶ್ವೇತಾ ಕಾರಡಗಿಮಠ, ಮಂಜುಳಾ ಕೊರಧಾನಮಠ, ಸವಿತಾ ಹಿರೇಮಠ, ಶಿವಗೀತಾ ಸೂಗಿರಯ್ಯನಮಠ, ಸಂಗೀತಾ ಗೌರಿಮಠ, ಜ್ಯೋತಿ ವಾಲಿ, ಸುಮನ್ ನಂದಿಹಾಳ, ಶಿವಲೀಲಾ ಸಿಂಹಾಸನ, ಕಸ್ತೂರಿ ಶಾಂತಗೇರಿಮಠ, ವಿದ್ಯಾ ಸಾಲಿಮಠ, ಅಕ್ಕಮ್ಮ ಗುರುಸ್ಥಳಮಠ, ಲಕ್ಷ್ಮಿ ಬಾರಿಮನಿ, ಲಕ್ಷ್ಮೀ ಮೆಣಸಿನಕಾಯಿ, ಅನಸೂಯಾ ವಾಲಿ, ಲಲಿತಾ ಚವಡಿ ಸೇರಿದಂತೆ ಇತರರು ಇದ್ದರು.