ಜಿಲ್ಲೆ

ಕುಶಲ ಕಾರ್ಮಿಕರಿಗೆ ಮತದಾನ ಜಾಗೃತಿ ಮತದಾನ ಮಾಡಲು ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಡಿ ಮೋಹನ್ ಮನವಿ

Gadag - Shivanand Hiremath

ಗಜೇಂದ್ರಗಡ: ಮೇ 7ರಂದು ನಡೆಯುವ ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ತಪ್ಪದೇ ಮತದಾನ ಮಾಡುವ ಮೂಲಕ ಮತದಾನ ಪ್ರಮಾಣ ಹೆಚ್ಚಿಸಬೇಕು ಎಂದು ನೀತಿ ಸಂಹಿತೆ ನೋಡಲ್ ಅಧಿಕಾರಿಗಳು ಹಾಗೂ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಡಿ ಮೋಹನ್ ಅವರು ಹೇಳಿದರು.

ಗಜೇಂದ್ರಗಡ ತಾಲೂಕಿನ ಶಾಂತಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೊಮ್ಮಸಾಗರ ಗ್ರಾಮದಲ್ಲಿ ಇಂದು ನಡೆದ ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.

ವರ್ಷದಿಂದ ವರ್ಷಕ್ಕೆ  ಗ್ರಾಮೀಣ ಪ್ರದೇಶದಲ್ಲಿ ಮತದಾನ ಪ್ರಮಾಣ ಕಡಿಮೆಯಾಗುತ್ತಿದ್ದು, ಕೂಲಿಕಾರರು ಗ್ರಾಮೀಣ ಪ್ರದೇಶದ ಜನರು ಕಡ್ಡಾಯವಾಗಿ ಮತದಾನ ಮಾಡಬೇಕು. 18 ವರ್ಷ ಮೇಲ್ಪಟ್ಟ ಯುವಕ ಯುವತಿಯರು ತಪ್ಪದೇ ಮತದಾನ ಮಾಡುವಂತೆ ತಿಳಿಸಿದರು.

ಮತದಾನ ನಮ್ಮೆಲ್ಲರ ಹಕ್ಕಾಗಿದೆ. ಆದರಿಂದ ಮತದಾನದಿಂದ ಯಾರು ಹೊರಗುಳಿಯದೆ ಕಡ್ಡಾಯವಾಗಿ ಮತದಾನ ಮಾಡಿ ಗ್ರಾಮೀಣ ಪ್ರದೇಶದಲ್ಲಿ ಮತದಾನ ಪ್ರಮಾಣ ಹೆಚ್ಚಿಸಬೇಕು ಎಂದು ಮನವಿ ಮಾಡಿದರು. ಈ ವೇಳೆ ಮತದಾನ ಕುರಿತು ಪ್ಲೆ ಕಾರ್ಡ್ ಹಿಡಿದು ವಿಶೇಷವಾಗಿ ಜಾಗತಿ ಮೂಡಿಸಲಾಯಿತು.

ಮಳೆ ಬರುವವರೆಗೂ ಉದ್ಯೋಗ ಖಾತರಿ ಕೆಲಸ:
ಬೇಸಿಗೆಯಲ್ಲಿ ಯಾರು ಗುಳೇ ಹೋಗದಂತೆ ಸ್ಥಳೀಯವಾಗಿ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡಲಾಗುತ್ತದೆ. ಮಳೆಯಾಗುವವರೆಗೂ ನಿಮಗೆ ನಿರಂತರ ಕೆಲಸ ನೀಡಲಾಗುವುದು. ನೀವು ಸರಿಯಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಕೂಲಿಕಾರರು ಎನ್‍ಎಂಆರ್ ನಲ್ಲಿ ಹೆಸರು ಇದೇ ಇಲ್ಲ ಮೊದಲು ಪರಿಶಿಲಿಸಿ ನಂತರ ಕೆಲಸಕ್ಕೆ ಬರಬೇಕು. ಒಂದು ವೇಳೆ ಹೆಸರು ಇಲ್ಲದೆ ಕೆಲಸಕ್ಕೆ ಬಂದರೆ ಹಣ ಬರುವುದಿಲ್ಲ. ಜತೆ ಕೂಲಿಕಾರರು ಎರಡು ಬಾರಿ ಕಡ್ಡಾಯವಾಗಿ ಹಾಜರಿ ಹಾಕಿಸಬೇಕು. ಅದರಲ್ಲಿ ಒಂದು ಹಾಜರಿ ಹಾಕಿಸದಿದ್ದರೂ ಹಣ ಬರುವುದಿಲ್ಲ. ಕೂಲಿಕಾರರು ಅಳತೆಗೆ ತಕ್ಕಂತೆ ಪಡ ಕಡಿಯಬೇಕು. ನೀವು ಕಡಿಯದಿದ್ದರೆ ಕೂಲಿ ಅಳತೆ ಎಷ್ಟು ಇರುತ್ತದೆ ಅಷ್ಟೇ ಹಣ ಜಮಾ ಮಾಡುತ್ತಾರೆ ಸರಿಯಾಗಿ ಕೆಲಸಮಾಡಬೇಕು ಎಂದು ತಿಳಿಸಿದರು.

ಈ ವೇಳೆ ತಾ.ಪಂ. ಸಹಾಯಕ ನಿರ್ದೇಶಕರಾದ ಬಸವರಾಜ ಬಡಿಗೇರ್ ಮಾತನಾಡಿ, ವಲಸೆ ಯಾಕ್‍ಋಈ ನಿಮ್ಮೂರಲ್ಲಿ0iÉುೀ ಉದ್ಯೋಗ ಖಾತ್ರಿ ಅಭಿಯಾನ ಮೂಲಕ ಏಪ್ರಿಲ್ 1 ರಿಂದ ಮೇ ಅಂತ್ಯದವರೆಗೂ 2 ತಿಂಗಳ ನಿರಂತ ಕೆಲಸ ನೀಡಲಾಗುತ್ತದೆ. ಕೂಲಿಕಾರರು ಹೇಗೆ ಕೆಲಸ ಮಾಡುತ್ತಿರೀ ಎಂಬುದರ ಮೇಲೆ ನಿಮಗೆ ಮುಂದಿನ ಕೆಲಸ ನೀಡಲಾಗುತ್ತದೆ. ಆ ನಿಟ್ಟಿನಲ್ಲಿ ಕೂಲಿಕಾರರು ಚನ್ನಾಗಿ ಕೆಲಸ ಮಾಡಿ ಪಂಚಾಯತಿಗೆ ಸಹಕಾರ ಕೊಟ್ಟರೆ ಎರಡು ತಿಂಗಳ ನಿರಂತರ ಕೆಲಸ ನೀಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಿಡಿಒ ಎಸ್.ಕೆ ಕವಡೇಲಿ, ಐಇಸಿ ಸಂಯೋಜಕರಾದ ಮಂಜುನಾಥ ಹಳ್ಳದ, ಟಿಎಂಐಎಸ್ ಸಂಯೋಜಕರಾದ ವಸಂತ ಅನ್ವರಿ, ತಾಂತ್ರಿಕ ಸಂಯೋಜಕರಾದ ಪ್ರಿಯಾಂಕ ಅಂಗಡಿ, ಎಸ್.ಡಿ.ಎ ಪವಾಡಿಗೌಡ್ರ, ಟಿಎಎ ಸಿದ್ದು ಗುಡಿಮನಿ, ಬಿಎಪ್.ಟಿ ಜ್ಯೋತಿ ವಡ್ಡರ, ಡಿಇಒ ಪ್ರಕಾಶ, ಜಿಕೆಎಂ ಶಿವಗಂಗಾ ಹುಲ್ಲಣ್ಣವರ, ಗ್ರಾ.ಪಂ. ಸಿಬ್ಬಂದಿಗಳು, ಕಾಯಕ ಬಂಧುಗಳು, ಕೂಲಿಕಾರರು ಹಾಜರಿದ್ದರು.