ಜಿಲ್ಲೆ

ನರೇಗಾ ಕೂಲಿಕಾರರಿಗೆ ಮತದಾನ ಜಾಗೃತಿ/ ಪ್ರತಿಜ್ಞಾವಿಧಿ ಬೋಧನೆ

ಗದಗ: ಗಜೇಂದ್ರಗಡ ತಾಲೂಕಿನ ಮಾರನಬಸರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂದಿಹಾಳ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಲೋಕಸಭೆ ಚುನಾವಣೆ ಕುರಿತು ಕೂಲಿಕಾರರಿಗೆ ಮತದಾನ ಜಾಗೃತಿ ಮೂಡಿಸಲಾಯಿತು.

ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಬಡಿಗೇರ್ ಅವರು ಮಾತನಾಡಿ, ಮತದಾನ ಎಂಬುದು ಭಾರತ ಸಂವಿಧಾನ ನಮಗೆ ನೀಡಿರುವ ಹಕ್ಕು ಪ್ರಜಾಪ್ರಭುತ್ವದ ಏಳಿಗೆಗಾಗಿ ಉತ್ತಮ ಪ್ರಜೆಯನ್ನು ಆ0iÉ್ಕು ಮಾಡಿಕೊಳ್ಳುವುದಕೋಸ್ಕರ ನಾವೆಲ್ಲರೂ ನಮ್ಮ ಎಲ್ಲ ಕೆಲಸಗಳನ್ನೂ ಬದಿಗಿಟ್ಟು  ಮೇ 7ರಂದು ತಪ್ಪದೇ  ಮತದಾನ ಮಾಡೋಣ ಎಂದು ಕರೆ ನೀಡಿದ ಅವರು, ಭಾರತದ ಪ್ರತಿ ಒಬ್ಬ ಪ್ರಜೆಯೂ ಮತದಾನದಲ್ಲಿ ಭಾಗಿಯಾಗಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಶ್ರಮಿಸೋಣ ಎಂದರು.

ಎಲ್ಲಾ ಮತದಾರರು ತಮ್ಮ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೇ 7 ರಂದು ನಡೆಯುವ ಮತದಾನದ ದಿನ ತಪ್ಪದೆ ನಿಮ್ಮ ಹಕ್ಕು ಚಲಾಯಿಸಿ ಎಂದರು, ಅಲ್ಲದೇ ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದ ದೂರುಗಳನ್ನು ನೀಡಬೇಕು ಹಾಗೂ ಸುಲಲಿತ ಹಾಗೂ ನ್ಯಾಯಬದ್ಧ ಚುನಾವಣೆಗಾಗಿ ಚುನಾವಣಾ ಆಯೋಗ ನೀಡಿರುವ ಓಟರ್ ಹೆಲ್ಪ್ ಲೈನ್,ಸಕ್ಷಾಮ್ ಆ್ಯಪ್, ಸಿವಿಜಿಲ್ ಆ್ಯಪ್ ಗಳನ್ನು ಬಳಸಿ ನೈತಿಕ ಮತದಾನಕ್ಕೆ ಸಹಕರಿಸಬೇಕು ಎಂದರು.

ಮೇ 7 ರಂದು ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರೇಪಣೆ ದಾಕ್ಷಿಣ್ಯಗಳಿಗೆ ಪ್ರಭಾವಿತರಾಗದೆ ವಿವೇಚನೆ ಯಿಂದ ಮತ ಚಲಾಯಿಸಿ ಎಂದರು. ಆ ಮುಖಾಂತರ ಪ್ರಜಾಪ್ರಭುತ್ವವನ್ನು ಗೆಲ್ಲಿಸೋಣ. ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಕಡ್ಡಾಯವಾಗಿ ಮತದಾನ ಮಾಡಿ ಎಂದರು.

ಸಾರ್ವಜನಿಕರು, ಕೂಲಿಕಾರರು  ಎಲ್ಲರೂ ಕಡ್ಡಾಯವಾಗಿ ಮೇ-07 ರಂದು ಮತದಾನ ಮಾಡಬೇಕು. ಮತದಾನ ನಮ್ಮಗೆ ಸಂವಿದಾನ ನೀಡಿರುವ ಒಂದು ವರ. ಹಾಗಾಗಿ ಯಾರು ಮತದಾನದಿಂದ ವಂಚಿತರಾಗದೇ ಶೇ.% 100 ರಷ್ಟು ಮತದಾನಕ್ಕೆ ಶ್ರಮೀಸೋಣ ಎಂದು ಹೇಳಿದರು. ನಂತರ ಎಲ್ಲಾ ಕೂಲಿಕಾರರಿಗೆ ಮತದಾನ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.

ಈ ಸಂದರ್ಭದಲ್ಲಿ ಪಿಡಿಒ ಎಸ್.ಬಿ. ಸಂಕನೂರು, ಎಂಐಎಸ್ ಸಂಯೋಜಕರಾದ ವಸಂತ ಅನ್ವರಿ, ಐಇಸಿ ಸಂಯೋಜಕರಾದ ಮಂಜುನಾಥ ಹಳ್ಳದ, ತಾಂತ್ರಿಕ ಸಹಾಯಕರಾದ ಪ್ರವೀಣ ದೂಳಣ್ಣನವರ, ಬಿ.ಎಫ್.ಟಿ ಚಂದ್ರಕಾಂತ ಲಮಾಣಿ, ಕರ ವಸೂಲಿಗಾರ ಚನ್ನಬಸಪ್ಪ ಹೂಗಾರ, ಪಂಚಾಯತಿ ಸಿಬ್ಬಂದಿಗಳು, ಕಾಯಕ ಬಂಧುಗಳು, ಕೂಲಿಕಾರರು ಹಾಜರಿದ್ದರು.