ಜಿಲ್ಲೆ

ಪ್ರತ್ಯಾಗ್ರ -2024 ವಾಣಿಜ್ಯ ಆಹಾರ ಮೇಳ ವಿದ್ಯಾರ್ಥಿಗಳಿಗೆ ದಾರಿದೀಪ ಡಾ. ಹಿರೇಗೌಡರ.

Gadag: ನಗರದ ಆದರ್ಶ ಶಿಕ್ಷಣ ಸಮಿತಿಯ ಶ್ರೀ .ವಿ.ಆರ್ ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ನ ಆಯ್ ಕ್ಯೂ ಎ ಸಿ ಅಡಿಯಲ್ಲಿ ವಾಣಿಜ್ಯ ವಿಭಾಗದಿಂದ ಪ್ರತ್ಯಾಗ್ರ -2024 ವಾಣಿಜ್ಯ ಆಹಾರ ಮೇಳ  ಹಬ್ಬಕ್ಕೆ ಹಿರಿಯ ವೈದ್ಯಾಧಿಕಾರಿಗಳಾದ ಡಾ. ಸಿ ಬಿ ಹಿರೇಗೌಡರ್ ಉದ್ಘಾಟಿಸಿ ಮಾತನಾಡಿ ಈ ಒಂದು ವಾಣಿಜ್ಯ ಹಬ್ಬವನ್ನು ಉದ್ಘಾಟಿಸಲು ನನಗೆ ಬಹಳಷ್ಟು ಸಂತೋಷವೆನಿಸುತ್ತದೆ ಕಾರಣ ಈ ಮೇಳಗಳು  ವಿದ್ಯಾರ್ಥಿಗಳಲ್ಲಿ ಮಾರುಕಟ್ಟೆಗಳ ಮಹತ್ವವನ್ನು ತಿಳಿಸುತ್ತದೆ ಅದರೊಂದಿಗೆ ಅಂದರೆ ಮಾರುಕಟ್ಟೆಯಲ್ಲಿ ಬರಿ ಅಂಗಡಿ ಇಟ್ಟರೆ ಸಾಲದು ಗ್ರಾಹಕರನ್ನ ಹೇಗೆ ಆಕರ್ಷಣೆ ಮಾಡಬೇಕು ಯಾವ ವಸ್ತುಗಳು ಯಾವ ಪ್ರದೇಶದಲ್ಲಿ ಇಟ್ಟರೆ ಮಾರಾಟ ಮಾಡಬಹುದು ಅಂಗಡಿಗೆ ಆಗಮಿಸುವ ಪ್ರತಿ ಗ್ರಾಹಕರೊಂದಿಗೆ ಮಾಲೀಕರು ಹೇಗೆ ವರ್ತಿಸಬೇಕು ಗ್ರಾಹಕ ಮತ್ತು ಮಾಲೀಕರ ಸಂಬಂಧಗಳು ಹೇಗೆ ಇರಬೇಕು ಎಂಬುದು ಈ ಒಂದು ವಾಣಿಜ್ಯ ಆಹಾರ ಮೇಳುಗಳ ಮೂಲಕ ವಿದ್ಯಾರ್ಥಿಗಳು ಕಲಿಯಬಹುದು ಇದರೊಂದಿಗೆ ಮಾತನಾಡುವ ಕಲೆ ವಸ್ತುಗಳ ಮಹತ್ವ ಸಮಯ ಪ್ರಜ್ಞೆ ಹೀಗೆ ಅನೇಕ ವಿಚಾರಗಳನ್ನು ತಿಳಿದುಕೊಳ್ಳಬಹುದು  ಹೀಗಾಗಿ ಈ ಆಹಾರ ಮೇಳ ಪ್ರತಿ ಕಾಲೇಜಿನ ವಿದ್ಯಾರ್ಥಿಗಳಿಗೂ ಮಾದರಿಯಾಗಿದೆ ಹೀಗಾಗಿ ಆದರ್ಶ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳಿಗೆ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯರಿಗೆ ಉಪ ಪ್ರಾಚಾರ್ಯರಿಗೆ ಶಿಕ್ಷಕರಿಗೆ ತಮ್ಮ ಉದ್ಘಾಟನಾ ನುಡಿಗಳಲ್ಲಿ ಅಭಿನಂದನೆಗಳನ್ನ ಸಲ್ಲಿಸಿದರು.
      ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿ  ಶ್ರೀ ಅಭಿಜಿತ್ ಆನಂದ ಪೋತ್ನಿಸ್ ರವರು ಮಾತನಾಡಿ ಇವತ್ತಿನ ವಿದ್ಯಾರ್ಥಿಗಳು ಮೊಬೈಲ್ ಸೋಶಿಯಲ್ ಮೀಡಿಯಾಗಳಲ್ಲಿ ತೊಡಗಿಕೊಂಡು ಬಹಳಷ್ಟು ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ ಆ ಸೋಶಿಯಲ್ ಮೀಡಿಯಾಗಳನ್ನ ಹೇಗೆ ಬಳಕೆ ಮಾಡಿಕೊಳ್ಳಬೇಕೆಂಬುದು ವಿದ್ಯಾರ್ಥಿಗಳು ತಿಳಿಯದೆ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ವಾಣಿಜ್ಯ ಆಹಾರಗಳ ಈ ಒಂದು ಹಬ್ಬದಲ್ಲಿ ವಿದ್ಯಾರ್ಥಿಗಳು ತಾವೇ ಮಾರುಕಟ್ಟೆಗೆ ಹೋಗಿ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಖರೀದಿ ಮಾಡುವುದು ಅವುಗಳನ್ನು ಸ್ಟಾಲ್ ನಲ್ಲಿಯೇ ಸಿದ್ಧಪಡಿಸಿ ಮಾರುವುದು ಫೋನ್ ಪೇ ಗೂಗಲ್ ಪೇ ಗಳ ಬಳಕೆ ಹೀಗೆ ಅನೇಕ ವಿಚಾರಗಳನ್ನು ಈ ಒಂದು ಮೇಳಗಳಲ್ಲಿ ವಿದ್ಯಾರ್ಥಿಗಳಿಗೆ ತಿಳಿಸುತ್ತಿರುವುದು ಬಹಳಷ್ಟು ಸಂತಸ ತಂದಿದೆ ಆಯೋಜಿಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
   ಸ್ಪರ್ಧೆಯ ನಿರ್ಣಾಯಕ ರಾಗಿ ಮುಂಡರಗಿಯ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಹಿರಿಯ ಉಪನ್ಯಾಸಕರಾದ ಡಾ. ಜಿ ಬಿ ಹುಲ್ಲೂರು ಹಾಗೆ ಅವರೊಂದಿಗೆ ನೆರೆಗಲ್ ಶ್ರೀ ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯದ ಹಿರಿಯ ಉಪನ್ಯಾಸಕರಾದ ಪ್ರೊ .ರವಿ ಸಿ ಎಸ್ ಆಗಮಿಸಿದ್ದರು. ಇವರೊಂದಿಗೆ ಬೇರೆ ಬೇರೆ  ಎಂಟು ವಿಭಾಗಗಳಲ್ಲಿ ನಿರ್ಣಾಯಕರಾಗಿ  ಪ್ರೊ. ಅಕ್ಷತಾ ಶೇಟ್ ಪ್ರೊ. ಅಲ್ವಿನಾ ದಲ್ಬಂಜನ್. ಪ್ರೊ ಆನಂದ್. ಪ್ರೊ. ಶರೀಫ್ ಬೆನಕಲ್. ಆಗಮಿಸಿದ್ದರು ತದನಂತರ ಎಲ್ಲ ನಿರ್ಣಾಯಕರನ್ನ ವಾಣಿಜ್ಯ ಮಹಾವಿದ್ಯಾಲಯದ ಪರವಾಗಿ ಗೌರವಿಸಲಾಯಿತು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ ಕೆ ಗಿರಿರಾಜ ಕುಮಾರ್ ವಹಿಸಿಕೊಂಡಿದ್ದರು. ಅವರೊಂದಿಗೆ ಮಹಾವಿದ್ಯಾಲಯದ ಉಪ ಪ್ರಾಚಾರ್ಯರು ಐ ಕ್ಯು ಎ ಸಿ ಕೋ -ಆರ್ಡಿನೇಟರ್ ಡಾ. ವಿ ಟಿ ನಾಯ್ಕರ್ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಪ್ರತ್ಯಾಗ್ರ -2024 ವಾಣಿಜ್ಯ ಹಬ್ಬ ಈ  ಕಾರ್ಯಕ್ರಮದಲ್ಲಿ ಒಟ್ಟು 15 ತಂಡಗಳು , 150 ಸ್ಪರ್ದಾಳುಗಳು ಭಾಗವಹಿಸಿದ್ದರು ಪ್ರತಿ ತಂಡಕ್ಕೆ ಒಂದು ಸ್ಟಾಲ್  ಅಂಗಡಿಯನ್ನು ನೀಡಲಾಗಿತ್ತು ತಮ್ಮ ತಮ್ಮ ಅಂಗಡಿಗಳಲ್ಲಿ ಲಘು ಆಹಾರ ಸಾಮಗ್ರಿಗಳನ್ನ ಮನೆಯಿಂದ ತಂದು ಮಹಾವಿದ್ಯಾಲಯಕ್ಕೆ ಬಂದು ಅವುಗಳನ್ನು ಸಿದ್ಧಪಡಿಸಿದ್ದರು ಅಂಗಡಿಯ ಅಲಂಕಾರ, ವಿಭಿನ್ನ ಆಹಾರಗಳ ರಚನೆ  ಮಾರುವ ಒಂದು ವಿಧಾನಗಳ ಮೇಲೆ ಅವರಿಗೆ ಅಂಕಗಳನ್ನು ಹಾಕಿ ಪ್ರಶಸ್ತಿಯನ್ನು ನೀಡಲಾಯಿತು. ಸಂಜೆ ನಡೆದ ಬಹುಮಾನ ವಿತರಣ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನ ಹಂಚಿಕೊಂಡು ಈ  ವಾಣಿಜ್ಯ ಆಹಾರ ಮೇಳಗಳಲ್ಲಿ ನಾವು ಗ್ರಾಹಕರನ್ನ ಆಕರ್ಷಿಸುವುದು, ಹೆಚ್ಚಿನ ಲಾಭವನ್ನು ಹೇಗೆ ಗಳಿಸಬೇಕು ಅಂಗಡಿಗೆ ಬರುವ ಗ್ರಾಹಕರೊಂದಿಗೆ ಹೀಗೆ ನಡೆದುಕೊಳ್ಳಬೇಕು, ಸಂಜೆ ಸ್ಪರ್ಧೆ ಮುಗಿದ ಮೇಲೆ ವ್ಯವಹಾರದ ಲಾಭ ನಷ್ಟಗಳು ಬಂದಾಗ ಎಲ್ಲರನ್ನ ಹೇಗೆ ಮನಸ್ಸು ಪರಿವರ್ತನೆ ಮಾಡಬೇಕು ಹೀಗೆ ಅನೇಕ ಅತ್ಯುತ್ತಮ ಮಾಹಿತಿಯನ್ನು ಈ ಒಂದು ವಾಣಿಜ್ಯ ಆಹಾರ ವೇಳಾದಲ್ಲಿ ನಾವು ಕಲಿತುಕೊಂಡೆವು ಆಯೋಜಿನ ಮಾಡಿದ ಎಲ್ಲ ಶಿಕ್ಷಕರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ತಮ್ಮ ಅನಿಸಿಕೆಗಳಲ್ಲಿ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಪ್ರತ್ಯಾಗ್ರ ಕಾರ್ಯಕ್ರಮದ ಮುಖ್ಯಸ್ಥರಾದ ಪ್ರೊ. ಎಸ್ ಬಿ ಜಾದವ್, ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ರವಿ ಕುಲಕರ್ಣಿ. ಬಿ ಬಿ ಎ ಹಾಗೂ ಬಿ ಸಿ ಎ ವಿಭಾಗದ ಪ್ರಚಾರರಾದ ಪ್ರೊ. ಲಿಂಗರಾಜ್ ರಶ್ಮಿ ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಡಾ. ಸವಿತಾ ಬಂಡಾರ್ಕರ್. ಪ್ರೊ. ಎಸ್ಎಂ ಬೆಲ್ಗಾಂ. ಪ್ರೊ. ಫಿರೋಜ್ ಖಾನ್ ಯು ಎಂ. ಪ್ರೊ. ಪ್ರಿಯಾಂಕ ಕಬಾಡಿ ಪ್ರೊ. ಸುನಿತಾ ತಿರುಲಪುರ್, ಪ್ರೊ ಈಶ್ವರ್ ಯಾವುಗಲ್, ಪ್ರೊ. ಮೋಹನ್ ಡಿ, ಶ್ರೀ ಪ್ರಶಾಂತ್ ಹೊಂಬಾಳಿ ಶ್ರೀ ಆದಿತ್ಯ ಜೋಶಿ, ಸಂಸ್ಥೆಯ ಆಫೀಸ್ ಸುಕ್ರಿಡೆಂಟ್ ಪ್ರಾಣೇಶ್ ಬೆಳ್ಳಟ್ಟಿ ಶ್ರೀ ರವೀಶ್, ಶ್ರೀ ಬಸವರಾಜ್ ಹಳ್ಳಿಕೇರಿ, ಶ್ರೀ ಬಡಿಗೇರ್ ಅಂಗ ಸಂಸ್ಥೆಗಳ ಶಿಕ್ಷಕ ಹಾಗೂ ಸಿಬ್ಬಂದಿ ವರ್ಗದವರು ಈ ಒಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.