ಜಿಲ್ಲೆ

ಕ.ವಿ.ಮಂ.ನಿವೃತ್ತ ನೌಕರರ ಮಾಸಿಕ ಸಭೆಯಲ್ಲಿ ಸನ್ಮಾನ.

ಗದಗ: ಕ.ವಿ.ಮಂ. ನಿವೃತ್ತ ನೌಕರರ ನೂತನ ಸಮುದಾಯ ಭವನದಲ್ಲಿ ಜಿ.ಎಂ.ಯಾನಮಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಮುಖ್ಯ ಅತಿಥಿಗಳಾಗಿ ಕಬ್ಬಿಗರ ಕೂಟದ ಸಂಸ್ಥಾಪಕ ಅಧ್ಯಕ್ಷರು ಹಾಗೂ ಸಾಹಿತಿಗಳಾದ ಡಿ.ವ್ಹಿ.ಬಡಿಗೇರ ಅವರು ಆಗಮಿಸಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಸಸಿಗಳಿಗೆ ನೀರು ಹಾಕಿ ಉದ್ಘಾಟನೆ ಮಾಡುತ್ತ. ಇಂದು ನಾವು ಉತ್ತಮ ಪರಿಸರ ಹೊಂದುವುದು ಅಗತ್ಯವಾಗಿದೆ. ಗಾಳಿ, ನೀರು, ಭೂಮಿ, ಎಲ್ಲವೂ ನಮ್ಮ ಪರಿಸರದ ಭಾಗವಾಗಿದ್ದು ಅವೆಲ್ಲವೂ ಆರೋಗ್ಯಕರವಾಗಿದ್ದರೆ ಮಾತ್ರ ನಾವೆಲ್ಲರೂ ಆರೋಗ್ಯದಿಂದಿರಲು ಸಾಧ್ಯ. ಪರಿಸರವನ್ನು ಉಳಿಸುವುದು, ಬೆಳೆಸುವುದು, ಮಾಲಿನ್ಯಮುಕ್ತ ಮಾಡುವುದರ ಜೊತೆಗೆ ಮುಂದಿನ ಪೀಳಿಗೆಯ ಸಲುವಾಗಿ ಗಿಡ ನೆಡುವುದು ಮತ್ತು ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.

ಎ.ಎನ್.ಬಸ್ತಿ ಹಾಗೂ ಬಿ.ಎಂ.ಬಾಣಿಯವರು ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ದಾಸೋಹ ಸೇವೆಯನ್ನು ವಹಿಸಿಕೊಂಡಿದ್ದರು. ಎಲ್ಲರಿಗೂ ಶಾಲು ಹೊದಿಸಿ ಫಲಪುಷ್ಪನೀಡಿ ಗೌರವಪೂರ್ವಕ ಸನ್ಮಾನಿಸಲಾಯಿತು. ವಾಯ್.ಬಿ.ಭಾನಾಪೂರ ಅವರು ಶರಾವತಿ ಪತ್ತಿನ ಸಹಕಾರಿ ಸಂಘ ಹಾಗೂ ಸಮುದಾಯ ಭವನದ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಎಸ್.ಬಿ.ಓಲಿ ಅವರು ಕೇಂದ್ರ ಸಮಿತಿಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಈ ತಿಂಗಳಲ್ಲಿ ಜನಿಸಿದ ಸದಸ್ಯರ ಹುಟ್ಟು ಹಬ್ಬ ಆಚರಿಸಲಾಯಿತು. ಹೊಸ ಸದಸ್ಯರಿಗೆ ಸದಸ್ಯತ್ವ ಕಾರ್ಡ ವಿತರಿಸಲಾಯಿತು. ವ್ಹಿ.ಪಿ.ಸವಡಿ, ವ್ಹಿ.ಎಸ್.ಹೊಸಮನಿ, ಜಿ.ಆರ್.ಅಗಸಿಯವರ, ಬಿ.ಎಂ.ಕAಬಿ, ಎಂ.ಜಿ.ಫತ್ತೇನವರ, ಜೆ.ಡಿ.ನದಾಫ, ಆಯ್.ಎಸ್.ಸರೂರ, ಎಸ್.ಆರ್.ಕಲಾಲ, ಎಸ್.ಎಫ್.ಸೈದಾಪೂರ, ಎಂ.ಎA.ಗದಗ, ಎಸ್.ಎಂ.ನಾಗಸಮುದ್ರ, ಜಿ.ಬಿ.ಕೊಪ್ಪಳ, ಸುಧಾಕರ ಹಿತ್ತಲಮನಿ, ಶ್ರೀಮತಿ ಎ.ಬಿ.ರಾಠೋಡ ಹಾಗೂ ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು. ವ್ಹಿ.ಎಲ್.ಅಯ್ಯನಗೌಡರ ಹಾಗೂ ಎನ್.ಎಂ.ಬಾಗಲಿ ಪ್ರಾರ್ಥಿಸಿದರು. ಎಸ್.ಆರ್.ಕುಂದರಗಿ ಸ್ವಾಗತಿಸಿದರು. ಜೆ.ಎನ್.ಹವಳೆ ವಂದಿಸಿದರು ಎಂದು ಬಿ.ಎನ್.ಘಾಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.