ಗದಗ: ಶ್ರಮಿಕರಾಗಿರುವ ಹಮಾಲರು ಮತ್ತು ಚಕ್ಕಡಿಯವರು ತಮ್ಮ ಮಕ್ಕಳಿಗೆ ಆದರ್ಶ ಮೌಲ್ಯಗಳೊಂದಿಗೆ ಉತ್ತಮ ಶಿಕ್ಷಣ ನೀಡಿ ಅವರ ಭವ್ಯ ಭವಿಷ್ಯವನ್ನು ರೂಪಿಸಲು ಮುಂದಾಗಬೇಕೆAದು ಎಪಿಎಂಸಿ ಯಾರ್ಡನ ಗದಗ ಬೆಟಗೇರಿ ಜನರಲ್ ವರ್ಕರ್ಸ ಹಾಗೂ ಹಮಾಲರ ಚಕ್ಕಡಿಯವರ ಸಮಿತಿಯ ಅಧ್ಯಕ್ಷ ಸುಭಾಸ್ ಕಟಗೇರಿ ಹೇಳಿದರು.
ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡದ ಬಾಲಕರ ವಸತಿ ನಿಲಯದ ಸಭಾಂಗಣದಲ್ಲಿ ಸಂಘದಿAದ ಎರ್ಪಡಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಶಿಕ್ಷಣದಿಂದ ವ್ಯಕ್ತಿ ದೊಡ್ಡ ಸ್ಥಾನವನ್ನು ತಲುಪಬಲ್ಲ ಎಂದರು.
ಸಮಿತಿಯ ಗೃಹ ಮಂಡಳಿ ವಿಭಾಗದ ಅಧ್ಯಕ್ಷ ಆದಪ್ಪ ಮಾರೆಪ್ಪನವರ ಮಾತನಾಡಿ ಕಷ್ಟದ ಜೀವನ ಬದುಕಿನಲ್ಲಿ ಪಾಠ ಕಲಿಸುವದು. ಹಮಾಲರ, ಚಕ್ಕಡಿಯವರ, ಕಾರ್ಮಿಕರ ಮಕ್ಕಳು ಇಂದು ಕಷ್ಟಪಟ್ಟು ಅಭ್ಯಾಸ ಮಾಡಿ ಉನ್ನತ ಶಿಕ್ಷಣ ಪಡೆದು ಜೀವನ ರೂಪಿಸಿಕೊಂಡಿರುವ ಉದಾಹರಣೆಗಳಿವೆ ಎಂದರಲ್ಲದೆ ಅಯ್ಯಪ್ಪ ನಾಯ್ಕರ್ ಅವರ ನಾಯಕತ್ವದ ಗುಣಗಳನ್ನು ಹಾಗೂ ಪರಿಶ್ರಮ ಸಾಧನೆಯನ್ನು ಶ್ಲಾö್ಯಘಿಸಿದರು.
ಗದಗ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಗೂಳಯ್ಯ ಮಾಲಗಿತ್ತಿಮಠ ಹಾಗೂ ಮಾಜಿ ಸೈನಿಕ ವೀರಪ್ಪ ಬಿಂಗಿ ಅವರು ಶಿಕ್ಷಣ ಬದುಕಿನಲ್ಲಿ ಬದಲಾವಣೆ ತರಬಲ್ಲದು ಕಾರಣ ನಾವಿಂದು ಶಿಕ್ಷಣಕ್ಕೆ ಒತ್ತು ನೀಡಬೇಕೆಂದರು.
ಇದೇ ಸಂದರ್ಭದಲ್ಲಿ ಪವಿತ್ರ ಕಾಶೀ ಯಾತ್ರೆ ಕೈಗೊಳ್ಳುತ್ತಿರುವ ಹಮಾಲರ ಮುಖಂಡ ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡದ ಬಾಲಕರ ವಸತಿ ನಿಲಯದ ಅಧ್ಯಕ್ಷ ಅಯ್ಯಪ್ಪ ನಾಯ್ಕರ್, ಉಪಾಧ್ಯಕ್ಷೆ ಶ್ರೀಮತಿ ಶಾರದಾ ಅಯ್ಯಪ್ಪ ನಾಯ್ಕರ್ ಹಾಗೂ ಕೃಷ್ಣಾ ಅಯ್ಯಪ್ಪ ನಾಯ್ಕರ್ ಅವರನ್ನು ಗದಗ ಬೆಟಗೇರಿ ಜನರಲ್ ವರ್ಕರ್ಸ ಹಾಗೂ ಹಮಾಲರ ಚಕ್ಕಡಿಯವರ ಸಮಿತಿಯಿಂದ ಸನ್ಮಾನಿಸಿ ಯಾತ್ರೆಗೆ ಶುಭ ಕೋರಲಾಯಿತು.
ಸನ್ಮಾನಕ್ಕೆ ಉತ್ತರವಾಗಿ ಮಾತನಾಡಿದ ಅಯ್ಯಪ್ಪ ನಾಯ್ಕರ್ ತಮ್ಮ ಕಷ್ಟದ ಬದುಕನ್ನು ಸ್ಮರಿಸಿಕೊಂಡರು. ನಾನು ಶಾಲೆ ಕಲಿಯದಿದ್ದರೂ ಶಾಲೆ ಕಲಿಯುವ ಮಕ್ಕಳಿಗೆ ವಸತಿ ನಿಲಯ ಸ್ಥಾಪನೆ ಮಾಡುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಅಲ್ಪ ಸೇವೆ ಮಾಡುವ ಅವಕಾಶ ದೊರೆತಿರುವದು ತೃಪ್ತಿ ತಂದಿದೆ ಇದಕ್ಕೆಲ್ಲ ರಾಜಕೀಯ ಮುಖಂಡರು, ಅಧಿಕಾರಿಗಳು, ಮಠಾಧೀಶರು, ಮಾಧ್ಯಮ ಮಿತ್ರರು ಮಾರ್ಗದರ್ಶನ ಸಹಕಾರ ನೀಡಿದ್ದಾರೆ ಎಂದರು.
ದುಡಿದ ವ್ಯಕ್ತಿಗೆ ಇಳಿ ವಯಸ್ಸಿನಲ್ಲಿ ಮಕ್ಕಳ ಆಶ್ರಯವಿಲ್ಲದೆ ಪರಿತಪಿಸುವವರಿಗಾಗಿ ವೃದ್ಧಾಶ್ರಮ ತೆರೆಯುವ ಉದ್ದೇಶವಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ನಮ್ಮ ಹಮಾಲರ ಮತ್ತು ಚಕ್ಕಡಿಯವರ, ಕಾರ್ಮಿಕರ ಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸಿದ ಸಾಧನೆ, ಪಡೆದ ಉನ್ನತ ಹುದ್ದೆಯೇ ಸಾಕ್ಷೀಯಾಗಿವೆ ಎಂದರು.
ಸಮಿತಿಯ ಕಾರ್ಯದರ್ಶಿ ಇಮಾಮಸಾಬ ರೋಣದ ಸ್ವಾಗತಿಸಿ ನಿರೂಪಿಸಿದರು, ರಾಜೇಸಾಬ ಕಣವಿ ಪ್ರಾಸ್ತಾವಿಕವಾಗಿ ಮಾತನಾಡಿದರು ಹುಸೇನಸಾಬ ವಡವಿ ಪರಿಚಯಿಸಿದರು ಕೊನೆಗೆ ಮಾರುತಿ ರಾಯಲ್‌ರಡ್ಡಿ ವಂದಿಸಿದರು.
ಸಮಾರAಭದಲ್ಲಿ ರಾಮಚಂದ್ರ ಹರಿಜನ, ಜಹಾಂಗೀರಸಾಬ, ಮುಕ್ತುಂಸಾಬ ನಾಗನೂರ, ಯಲ್ಲಪ್ಪ ಬೇವಿನಮರದ, ರಿಯಾಜ ದೊಡ್ಡಮನಿ, ರಂಗಪ್ಪ ಯರಗುಡಿ, ಅಲ್ಲಾಭಕ್ಷಿ ನದಾಫ್, ರವಿ ರಾಯಲದಡ್ಡಿ, ಬಸವರಾಜ ಬೇವಿನಮರದ, ಈರಣ್ಣ ಮಾಡೊಳ್ಳಿ, ಈರಣ್ಣ ಪ್ರತಾಪಸಿಂಗ, ಮಹ್ಮದ ಅಣ್ಣಿಗೇರಿ, ಹನುಮಂತಪ್ಪ ಜಾನಗಾರ, ಮಾಯಪ್ಪ ಬೆಣ್ಣಿ, ಗೋವಿಂದಪ್ಪ ಮುಂಡರಗಿ, ಹಮೀದ್ ಅಣ್ಣಿಗೇರಿ, ಬಸವರಾಜ ಸೂಡಿ, ಈರಪ್ಪ ಮುಧೋಳ ಸೇರಿದಂತೆ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದರು.