ಜಿಲ್ಲೆ

ಶಾಲಾ ಶಿಕ್ಷಕರ ನೇಮಕಾತಿ! ಕಾನೂನು ಇಲಾಖೆ ಅಭಿಪ್ರಾಯ ಬೇಕು: ಮಧು ಬಂಗಾರಪ್ಪ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ಸುಪ್ರೀಂ ಕೋರ್ಟ್​ನಲ್ಲಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ಹಾಗಾಗಿ ಹೊಸ ಶಿಕ್ಷಕರ ನೇಮಕಾತಿ ಸಂಬಂಧ ಕಾನೂನು ಇಲಾಖೆ ಅಭಿಪ್ರಾಯ ಕೇಳಿದ್ದೇವೆ. ಕಾನೂನು ಇಲಾಖೆ ಅಭಿಪ್ರಾಯ ನೀಡಿದ ನಂತರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಮಧು ಬಂಗಾರಪ್ಪ ತಿಳಿಸಿದರು.

ಸುಪ್ರೀಂ ಕೋರ್ಟ್​ನಲ್ಲಿ ಮಹಿಳಾ ಅಭ್ಯಥಿರ್ಗಳು ನೇಮಕಾತಿ ಸಂದರ್ಭದಲ್ಲಿ ಪತಿ ಅಥವಾ ತಂದೆಯ ಆದಾಯ ಪ್ರಮಾಣ ಪತ್ರ ಲಗತ್ತಿಸಬೇಕಾ? ಎಂಬ ಪ್ರಕರಣ ಇದ್ದು ಸುಪ್ರೀಂಕೋರ್ಟ ಆದೇಶದಂತೆ ಶಿಕ್ಷಣ ಇಲಾಖೆ ನೇಮಕಾತಿ ಮಾಡಿಕೊಳ್ಳುತ್ತದೆ. ಒಂದು ವೇಳೆ ಪ್ರಕರಣದಲ್ಲಿನ ಎರಡೂ ಪಾಟಿರ್ಯ ಅಭ್ಯಥಿರ್ಗಳನ್ನು ಈ ನೇಮಕಾತಿಯಲ್ಲಿ ಪರಿಗಣಿಸಬುದು ಎಂದು ಶಿಕ್ಷಣ ಇಲಾಖೆಯಿಂದ ಕಾನೂನು ಇಲಾಖೆಯನ್ನು ಕೇಳಿಕೊಂಡಿದ್ದೇವೆ ಎಂದು ಸಚಿವ ಮಧು ಬಂಗಾರಪ್ಪ ಶಿಕ್ಷಕರ ನೇಮಕಾತಿ ಪ್ರಕರಣ ಕುರಿತು ಉತ್ತರಿಸಿದರು.

ದ್ವಿಭಾಷಾ ಸೂತ್ರ! ಸಿಎಂ ನಿರ್ಣಯವೇ ಅಂತಿಮ:

ರಾಜ್ಯದಲ್ಲಿ ತ್ರಿಭಾಷಾ ಅಥವಾ ದ್ವಿಭಾಷಾ ಸೂತ್ರ ಕುರಿತು ಚರ್ಚೆ ಆಗುತ್ತಿದೆ. ಈ ವರೆಗೂ ಯಾವುದೇ ರೀತಿ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಂಡಿಲ್ಲ. ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಚರ್ಚೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲಾಗುವುದ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದ್ವಿಭಾಷಾ ಕುರಿತು ಸಿಎಂ ಸಿದ್ದರಾಮಯ್ಯ ಅವರು ಕೆಲವಡೆ ಚರ್ಚೆ ಮಾಡಿದ್ದು ನಿಜ. ಆದರೆ ಅಂತಿಮ ತೀರ್ಮಾನ ಕೈಗೊಳ್ಳಲು ಸಾರ್ವಜನಿಕರಿಂದ ಅಭಿಪ್ರಾಯ ಪಡೆಯಬೇಕಾಗುತ್ತದೆ. ಎಸ್​ಇಪಿ ಸಮಿತಿಯಲ್ಲಿ ತೀರ್ಮಾನ ಕೈಗೊಂಡು ನಂತರ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರಕ್ಕೆ ಬರಲಾಗುತ್ತದೆ. ಈ ನಿರ್ಣಯ ಮುಂದಿನ ವರ್ಷಕ್ಕೆ ಅಂತಿಮಗೊಳ್ಳುತ್ತದೆ. ಇದಕ್ಕೆ ಶಾಸಕರ ಅಭಿಪ್ರಾಯವನ್ನು ಪಡೆಯಬೇಕಾಗುತ್ತದೆ ಎಂದು ಮಧು ಬಂಗಾರಪ್ಪ ಹೇಳಿದರು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯ ಸರ್ಕಾರ ಒಪ್ಪುವುದಿಲ್ಲ, ಪ್ರತ್ಯೇಕ ರಾಜ್ಯ ಶಿಕ್ಷಣ ನೀತಿಯನ್ನು(ಎಸ್​ಇಪಿ)ರಾಜ್ಯ ಸರ್ಕಾರ ಪ್ರೋತ್ಸಾಹಿಸುತ್ತದೆ. ಹಾಗಾಗಿ ಎಸ್​ಇಪಿ ಸಮಿತಿಯಲ್ಲಿ ದ್ವೀಭಾಷಾ, ತ್ರಿಭಾಷಾ ಸೂತ್ರ ಬಗ್ಗೆ ಚಚಿರ್ಸಲಾಗವುದು ಎಂದರು.