ಗದಗ: ಗದಗ ಜಿಲ್ಲಾ ರೋಣ ತಾಲೂಕ ಯಾ.ಸ. ಹಡಗಲಿ ಗ್ರಾಮದಲ್ಲಿ ಶ್ರೀ ಕಲ್ಮೇಶ್ವರ ಸೇವಾ ನಾಟ್ಯ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಕಲ್ಮೇಶ್ವರ ಹಾಗೂ ಹೊನ್ನೆಂತಮ್ಮದೇವಿಯ ಜೋಡು ರಥೋತ್ಸವ ಅಂಗವಾಗಿ ಅಣ್ಣನ ಆಜ್ಞೆ, ತಂಗಿಯ ಪ್ರತಿಜ್ಞೆ ಎಂಬ ಸುಂದರ ನಾಟಕ ಪ್ರದರ್ಶನ ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಬಸವಂತಪ್ಪ ಎಚ್. ತಳವಾರ ಮಾಜಿ ಅಧ್ಯಕ್ಷರು, ಗದಗ ಜಿಲ್ಲಾ ಬಿಜೆಪಿ ಎಸ್.ಟಿ. ಮೋರ್ಚಾ ಇವರು ಉದ್ಘಾಟಿಸಿ ಮಾತನಾಡಿದರು. ನಾಟಕ ಮನರಂಜನೆಯೊAದಿಗೆ ಸಂದೇಶ ನೀಡುವಂತರಿಲಿ, ಹಬ್ಬ ಹರಿದಿನ ಜಾತ್ರೆಗಳ ಸಂದರ್ಭದಲ್ಲಿ ಪೂರ್ವಕಾಲದಿಂದ ಗ್ರಾಮೀಣ ಪ್ರದೇಶದಲ್ಲಿ ಅಭಿನಯಿಸಿರುವ ಸಾಮಾಜಿಕ, ಪೌರಾಣಿಕ, ಐತಿಹಾಸಿಕ ಸಮಾಜದ ಪರಿವರ್ತನೆಗಾಗಿ ಕವಿಗಳು ತಮ್ಮ ಕಲ್ಪನೆಯಿಂದ ರಚಿಸಿರುವ ನಾಟಕಗಳು ಸಮಾಜದ ಅಂಕು-ಡೊಕುಗಳ ತಿದ್ದುವ ಮಹಾಸಾಧನೆಗಳು ನಾಟಕಗಳು ಮನರಂಜನೆಗಾಗಿ ಜೊತೆಗೆ ಸಾಮಾಜಿಕ ಉತ್ತಮ ಸಂದೇಶ ನೀಡುವಂತೆ ಇದ್ದರೆ ಕಲಾಭಿಮಾನಿಗಳು ಹೃದಯಪೂರ್ವಕವಾಗಿ ಸ್ವೀಕರಿಸುತ್ತಾರೆ. ಇದರಿಂದ ಸಮಾಜದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಂದ ಜನತೆ, ಜಾಗೃತಿಗೊಳ್ಳುವಲ್ಲಿ ನಾಟಕಗಳ ಪಾತ್ರ ಹಿರಿದಾಗಿರುವುದರಿಂದ ಕಲೆ ಮತ್ತು ಕಲಾವಿದರು ಉಳಿಯಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು. ಸಮಾಜಕ್ಕೆ ಗಟ್ಟಿ ಸಂದೇಶ ಒದಗಿಸುವ ನಾಟಕಗಳು ಇಂದು ಆಧುನಿಕ ಭರಾಟೆಯಲ್ಲಿ ಚಲನಚಿತ್ರದ ಅಬ್ಬರದಲ್ಲಿ ಸಿಲುಕಿ ಕಣ್ಮರೆಯಾಗುತ್ತಿವೆ. ಸಾಮಾಜಿಕ ನಾಟಕಗಳು ಇಂದು ಗ್ರಾಮಾಂತರ ಪ್ರದೇಶದಲ್ಲಿ ಉಳಿದ ಜನರಿಗೆ ಮನರಂಜನೆ ಒದಗಿಸುತ್ತೇವೆ. ಜಾಗತೀಕರಣದ ಭರಾಟೆಯಲ್ಲಿ ರಂಗಕಲೆಗಳು ನಶಿಸುತ್ತಿರುವ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಟಿ.ವಿ. ಮಾಧ್ಯಮಗಳ ಹಾವಳಿ ಹೆಚ್ಚಾಗಿರುವುದರಿಂದ ರಾತ್ರಿ ವೇಳೆಯಲ್ಲಿ ಹೆಣ್ಣುಮಕ್ಕಳು ಟಿ.ವಿ. ನೋಡುವುದರಿಂದ ಗ್ರಾಮೀಣ ಪ್ರದೇಶದಲ್ಲಿ ನಾಟಕಗಳು ಮಾಯವಾಗಿವೆ. ಇಂತಹ ನಾಟಕಗಳನ್ನು ಪುನಶ್ಚೇತನ ಮಾಡಲಿಕ್ಕೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಹೆಚ್ಚು ನಾಟಕಗಳನ್ನು ಪ್ರದರ್ಶನ ಮಾಡಬೇಕೆಂದು ಯುವಕ, ಯುವತಿಯರಿಗೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ ಈ ನಾಟಕ ಸಂಘಕ್ಕೆ ದೇಣಿಗೆ ನೀಡಿದರು.
ಕಾರ್ಯಕ್ರಮದ ಜ್ಯೋತಿಯನ್ನು ಶಿವಬಸಪ್ಪನವರು, ಶಿದ್ಲಿಂಗಪ್ಪನವರ ಬೆಳಗಿಸಿದರು. ಈ ಕಾರ್ಯಕ್ರಮದಲ್ಲಿ ನಿಂಗಯ್ಯನವರು ಪೂಜಾರ, ಮಲ್ಲಪ್ಪ ಕೆಂಪಶಿ, ಕಲ್ಲಯ್ಯನವರ, ಪೂಜಾರ, ಬಸನಗೌಡ ಪಾಟೀಲ, ಶೇಖಪ್ಪ ಹ. ಯಲಿಗಾರ, ಡಾ. ರಾಜು ಸವದತ್ತಿ, ಎಂ.ಬಿ. ಪಾಟೀಲ, ಬಸನಗೌಡ ಧಾರವಾಡ, ಹನುಮಂತಗೌಡ ಪೊಲೀಸಪಾಟೀಲ, ಆನಂದಗೌಡರ ಬೆಂಗೇರಿ, ಯಲ್ಲಪ್ಪ ಹಳ್ಳದ, ವೀರಯ್ಯ ಮುಳ್ಳೂರು, ರುದ್ರಗೌಡ ಪಾಟೀಲ, ಶಿವಪ್ಪ ಹನುಮಕ್ಕನವರ, ಗೂರಪ್ಪ ಬೋಪ್ಲಾಪೂರ, ಡಾ. ಶರಣಪ್ಪ ಹನುಮಕ್ಕನವರ, ಮಂಜು ಮಡ್ಲಿ, ಶೇಖಪ್ಪ ನೀ. ಮಾದರ, ಕಲ್ಲಪ್ಪ ಎ. ಹಡಪದ, ಹನುಮಂತ ಹನುಮಕ್ಕನವರ, ರುದ್ರಪ್ಪ ಅಳ್ಳೊಳ್ಳಿ (ಹರ‍್ಮೋನಿಯಂ ಮಾಸ್ತರ), ಶಬ್ಬೀರ ಬಾದಾಮಿ, ಕುಮಾರ ಹೊಳೆಆಲೂರ, ಮಾಂತೇಶ ಡೊಳ್ಳಿನ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೊನೆಯಲ್ಲಿ ವಂದನಾರ್ಪಣೆಯೊAದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.