ಜಿಲ್ಲೆ

ಡಾ ಮಲ್ಲಿಕಾರ್ಜುನ್ ಸಿಪುತ್ರಪ್ಪ ಉಪ್ಪಿನ ನಿವೃತ್ತಿ ನಿಮಿತ್ಯ ಸನ್ಮಾನ

Gadag - Shivanand Hiremath
ಸರ್ಕಾರಿ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದು ಒಂದು ಸುದೈವ: ಡಾ. ಉಪ್ಪಿನ್ 
ಗದಗ: ವೈದ್ಯಕೀಯ ಸೇವೆ ಒಂದು ಪವಿತ್ರವಾದ ಕಾರ್ಯವಾಗಿದ್ದು ಕಳೆದ ಮೂರುವರೆ ದಶಕಗಳಿಂದ ವೈದ್ಯರಾಗಿ ಸರ್ಕಾರಿ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದು ಒಂದು ಸುದೈವ ಎಂದು ಖ್ಯಾತ ವೈದ್ಯ ಡಾ. ಮಲ್ಲಿಕಾರ್ಜುನ್ ಸಿಪುತ್ರಪ್ಪ ಉಪ್ಪಿನ್ ಅವರು ಹೇಳಿದರು.
ವಿವೇಕಾನಂದ ಬಡಾವಣೆ ವಾಯು ವಿಹಾರ ಬಳಗದಿಂದ ಪಂಡಿತ್ ಪಂಜಾಕ್ಷರ ಗವಾಯಿಗಳವರ ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ಇತ್ತೀಚಿಗೆ ಸರ್ಕಾರಿ ಸೇವೆಗೆ ಸಲ್ಲಿಸಿ ನಿವೃತ್ತರಾದ ಡಾ ಮಲ್ಲಿಕಾರ್ಜುನ್ ಸಿಪುತ್ರಪ್ಪ ಉಪ್ಪಿನ್ ಅವರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನಗೊಂಡು ಅವರು ಮಾತನಾಡುತ್ತಾ ತಾವು ವೈದ್ಯರಾಗಿ ಗ್ರಾಮೀಣ ಭಾಗದಲ್ಲಿ ಜನ ಜಾಗೃತಿ ಮೂಡಿಸಿ ಅನೇಕ ವೈದ್ಯಕೀಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗ್ರಾಮೀಣ ಭಾಗದ ಜನರ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಕುರಿತಾದ ಸಲ್ಲಿಸಿದ  ಸೇವೆ   ತಮಗೆ ತೃಪ್ತಿ ತಂದಿದೆ ಎಂದು ಅವರು ಹೇಳಿದರು.
ನಿವೃತ್ತ ಬಿಎಸ್ಎನ್ಎಲ್ ಅಧಿಕಾರಿ ಎಸ್ ಎಸ್ ಪಾಟೀಲ್ ಅವರು ಮಾತನಾಡಿ ಡಾ ಉಪ್ಪಿನವರು ಸ್ನೇಹಮಯ ವೈದ್ಯರಾಗಿದ್ದು ಇವರ ಕಾಲದಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿ ಜನರ ಆರೋಗ್ಯವನ್ನು ಕಾಪಾಡುವುದರಲ್ಲಿ ಇವರ ಸೇವೆ ಅನನ್ಯ ಎಂದು ಅವರು ಹೇಳಿದರು.  ಕೃಷಿ ನಿವೃತ್ತ ಅಧಿಕಾರಿ ಕೆ ಐ ಕುರುಗೋಡು ಅವರು ಮಾತನಾಡಿ ಡಾ. ಉಪ್ಪಿನವರು ವೈದ್ಯಕೀಯ  ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ  ಅಪಾರವಾಗಿದ್ದು ಅವರ ನಿವೃತ್ತಿ ಜೀವನ ಸುಖಕರವಾಗಲಿ ಎಂದು  ಅವರು ಶುಭ  ಹಾರೈಸಿದರು.
ಪ್ರಾಚಾರ್ಯ ಗಂಗಾಧರ ಹಿಡಿಕಿಮಠ ಅವರು ಮಾತನಾಡಿ ವೈದ್ಯಕೀಯ ರಂಗ ಅತ್ಯಂತ ಕಠಿಣ ವಾಗಿದ್ದು ವೈದ್ಯರು ಪ್ರತಿದಿನ ರಿಸ್ಕ್ ಅನ್ನು ತೆಗೆದುಕೊಂಡು ತಮ್ಮ ಜೀವನದ ಹಂಗನ್ನು ತೊರೆದು ಜನರ ಜೀವನ ಕಾಪಾಡುತ್ತಿರುವರು ಸಮಾಜ ವೈದ್ಯರನ್ನು ಗೌರವದಿಂದ ಕಾಣಬೇಕೆಂದು ಅವರು ಹೇಳಿದರು.
 ಸಮಾರಂಭದಲ್ಲಿ ಅಂಬಾಸಾ ಜಮಾದಾರ್, ಎಂ ಕೆ ನಂದೀಶ್,  ಎಸ್ ಟಿ ಮೂಲಿಮನಿ, ಕೆಎಂ ಯತ್ನಟ್ಟಿ, ನಿವೃತ್ತ ಪ್ರಾಚಾರ್ಯ ಪಿ ಎಸ್ ಕಣವಿ, ಜಿ ಎಸ್ ಯತ್ನಟ್ಟಿ, ಮಂಗಳೂರು ಆಪ್ಟಿಕಲ್, ಕೆ ಎಮ್ ಕಮತರ್, ಎಸ್ ಎಸ್ ಪಾಟೀಲ್,  ಕೆ ಐ ಕುರುಗೋಡು ಆರ್ ಆರ್ ಕಾಶಪ್ಪನವರ್, ಮನೋಹರ್ ಸಾಸ್ವಿಹಳ್ಳಿ, ಕೆ ಬಿ ಭಜಂತ್ರಿ ಗಳೆಲ್ಲ ಸೇರಿ ಡಾ. ಉಪ್ಪಿನವರಿಗೆ ಸನ್ಮಾನ ಮಾಡಿ ಅವರ ನಿವೃತ್ತ ಜೀವನ ಸುಖಕರವಾಗಲಿ ಎಂದು ಹಾರೈಸಿದರು ಪ್ರಾರಂಭದಲ್ಲಿ ಆರ್ ಆರ್ ಕಾಶಪ್ಪನವರ ಕಾರ್ಯಕ್ರಮ ನಡೆಸಿದರೆ ಕೊನೆಗೆ ಕೆ ಬಿ ಭಜಂತ್ರಿ ಗುರುಗಳು   ವಂದಿಸಿದರು.
 ವರದಿ. ವಿವೇಕಾನಂದ ವಾಯು ವಿಹಾರ ಬಳಗ