ಗದಗ: ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಬಿ.ಅಸೂಟಿಯವರು ಇತ್ತೀಚಿಗಷ್ಟೇ ಸಮಸ್ತ ಪಂಚ ಗ್ಯಾರಂಟಿ ಯೋಜನೆಗಳಾದ ಗ್ರಹಲಕ್ಷ್ಮೀ. ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಸಂಬಂಧ ಪಟ್ಟ ಇಲಾಖೆಗಳಾದ ಮಹಿಳಾ ಮತ್ತು ಮಕ್ಕಳ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಅಧಿಕಾರಿಗಳ ವಿಶೇಷ ಸಭೆಯನ್ನು ಇತ್ತೀಚಿಗಷ್ಟೇ ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಕಚೇರಿಯಲ್ಲಿ ಆಯೋಜಿಸಲಾಗಿತ್ತು.
ಈ ಒಂದು ವಿಶೇಷ ಸಭೆಯಲ್ಲಿ ಘನ್ ರಾಜ್ಯ ಸರಕಾರದ ಮಹಾತ್ವಾಕಾಂಕ್ಷಿ ಪಂಚ ಯೋಜನೆಗಳ ಸದುಪಯೋಗವು ಪ್ರತಿಯೊಂದು ಅರ್ಹ ಕುಟುಂಬವರ್ಗದವರಿಗೂ ತಲುಪುವಂತಾಗುವ ಸದುದ್ದೇಶದೊಂದಿಗೆ ಮತ್ತು ಅರ್ಹ ಫಲಾನುಭವಿಗಳಿಗೆ ಗ್ರಹಲಕ್ಷ್ಮೀ ಯೋಜನೆಯನ್ನು ಪಡೆಯುವುದರಲ್ಲಿ ಉಂಟಾಗುತ್ತಿರುವ ತಾಂತ್ರಿಕ ತೊಂದರೆಗಳಾದ ಜಿ.ಎಸ್.ಟಿ ಹಾಗೂ ಆದಾಯ ತೆರಿಗೆ.ರೆಷನ್ನಕಾಡ೯ನಲ್ಲಿ ಯಜಮಾನಿ ಬದಲಾವಣೆಯಿಂದ ಗೃಹ ಲಕ್ಶ್ಮೀ ಯೋಜನೆಗೆ ಅರ್ಜಿ ಹಾಕಲು ತಾಂತ್ರಿಕ ತೊಂದರೆ ಕುರಿತು ಚರ್ಚೆಸುವ ಸಂಬಂಧವಾಗಿ ಸಭೆ ಕರೆದು ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆಯಲಾಯಿತು. ಅದರಲ್ಲಿ ಪ್ರಮುಖವಾಗಿ ಗ್ರಹಲಕ್ಷ್ಮೀ ಯೋಜನೆಯ ಸದುಪಯೋಗ ಪಡೆಯುತ್ತಿರುವ ಕುಟುಂಬದ ಯಜಮಾನಿಯು ಅಕಾಲಿಕ ಮೃತರಾದರೆ, ಅವರ ಹೆಸರನ್ನು ಕಡಿತಗೊಳಿಸಿ ಕುಟುಂಬದ ಇತರೆ ಮಹಿಳಾ ಸದಸ್ಯರ ಹೆಸರು ಸೇರ್ಪಡೆಗೊಳಿಸುವುದರಲ್ಲಿ ಉಂಟಾಗುತ್ತಿರುವ ಸಮಸ್ಯೆಯ ಕುರಿತು ಚರ್ಚಿಸಲಾಯಿತು. ಅದರಂತೆ ಕುಟುಂಬ ವರ್ಗವು ಇಲಾಖೆಯಿಂದ ಕೈಗೊಳ್ಳಲಾದ ಸಮೀಕ್ಷೆಯು ಈ ಹಿಂದಿನ ತುಂಬಾ ನಾಗರಿಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ ಕಾರಣ ಕುರಿತು ಕ್ರಮ ಕೈಗೊಳ್ಳಬೇಕು. ಹಾಗೂ ಅನ್ನ ಭಾಗ್ಯ ಯೋಜನೆಯಿಂದ ದೊರಕುವ ಆಹಾರ ಧಾನ್ಯ ಕಾಳ ಸಂತೆಯಲ್ಲಿ ಮಾರಾಟವಾಗುವುದನ್ನು ತಡೆಯಲು ಅಗತ್ಯ ಕ್ರಮಕೈಗೊಳ್ಳಬೇಕು,ಮತ್ತಿತರೆ ಪ್ರಮುಖ ವಿಷಯಗಳ ಮೇಲೆ ವಿಶೇಷ ಚರ್ಚೆ ಮಾಡುವುದರೊಂದಿಗೆ ಸಭೆಯನ್ನು ಜರುಗಿಸಲಾಯಿತು.
ಈ ಸಂಧರ್ಭದಲ್ಲಿ. ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾದ ನೀಲಮ್ಮ ಬೋಳನವರ. ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯರಾದ ಈಶ್ವರ ಹುಣಶಿಕಟ್ಟಿ, ವಿವಿಧ ಇಲಾಖೆ ಅಧಿಕಾರಿಗಳಾದ ಶಿರಹಟ್ಟಿ ತಾಲೂಕಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಮೃತ್ಯುಂಜಯ ಗು ಗುಡ್ಡದಾನವೇರಿ, ಗದಗ ಜಿಲ್ಲಾ ಆಹಾರ ಇಲಾಖೆಯ ಸಹಾಯಕ ನಿರ್ದೇಶಕರಾದ ಏನ್ ಬಿ ದೊಡ್ಡಮನಿ, ಗದಗ ತಾಲೂಕಾ ಸಿಡಿಪಿಓ ಶ್ರೀಮತಿ ಹುಲಗೆವ್ವ ಎಸ್ ಜೋಗೇರ, ನರಗುಂದ ತಾಲೂಕಾ ಸಿಡಿಪಿಓ ಕೆ ಎಚ್ ಹುಲಕೋಟಿ, ಮುಂಡರಗಿ ತಾಲೂಕಾ ಸಿಡಿಪಿಓ ಮಹಾದೇವ ಇಸರನಾಳ್, ಲಕ್ಷ್ಮಶ್ವರ ತಾಲೂಕಾ ಆಹಾರ ನೀರಿಕ್ಷಕರಾದ ಜೆ ಪಿ ಕುರುಬರ, ಮುಂಡರಗಿ ಆಹಾರ ನೀರಿಕ್ಷಕರಾದ ಜೆ ಬಿ ಅಮಾತಿ, ಗದಗ ಗ್ರಾಮೀಣ ವಲಯದ ಆಹಾರ ನೀರಿಕ್ಷಕರಾದ ಎಮ್ ಎಸ್ ಹಿರೇಮಠ್, ಗದಗ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಪದ್ಮಾವತಿ ಜಿ, ಶಿರಹಟ್ಟಿ ತಾಲೂಕಾಆಹಾರ ನೀರಿಕ್ಷಕರಾದ ಶ್ರೀಮತಿ ಮಂಜುಳಾ ಆಯ್ ಆಕಳದ, ಗದಗ ಜಿಲ್ಲಾ ಆಹಾರ ಇಲಾಖೆಯ ಸಹಾಯಕ ಪ್ರೋಗ್ರಾಮರ ಆದ ಸಿ ಬಿ ಮುಳಗುಂದ, ರೋಣ ತಾಲೂಕಾ ಆಹಾರ ನೀರಿಕ್ಷಕರಾದ ಶ್ರೀಮತಿ ಸುವರ್ಣ ಎಮ್, ಜಮ್ಮನಕಟ್ಟಿ, ರೋಣ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀಮತಿ ಶಿವಗಂಗಮ್ಮ ಹಾಗೂ ಇನ್ನಿತರರು ಉಪಸ್ಥಿತರಿದ್ದರು.