ನಗರದ ವಿದ್ಯಾದಾನ ಸಮಿತಿ ಪ್ರೌಢಶಾಲೆಯಲ್ಲಿ ಗುರುವಾರ ವಿಶ್ವ ಅಯೋಡಿನ್ ಕೊರತೆಯ ನಿಯಂತ್ರಣ ದಿನ ಹಾಗೂ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತದಲ್ಲಿ 350-ಮಿಲಿಯನ್ ಜನರು ಅಸಮರ್ಪಕ ಅಯೋಡಿನ್‌ಯುಕ್ತ ಉಪ್ಪನ್ನು ಸೇವಿಸುವುದರಿಂದ ಅಯೋಡಿನ್ ಕೊರತೆಯ ನ್ಯೂನ್ಯತೆಗೆ ಒಳಗಾಗುವ ಅಪಾಯದಲ್ಲಿದ್ದಾರೆ. ಅದರಲ್ಲಿ 54-ಮಿಲಿಯನ್ ಜನರು ಗಳಗಂಡ ಮತ್ತು 2-ಮಿಲಿಯನ್ ಜನರು ಕ್ರೆಟಿನಿಸಂನಿAದ ಬಳಲುತ್ತಿದ್ದಾರೆ. ಪ್ರತಿವರ್ಷ 9-ಮಿಲಿಯನ್ ಗರ್ಭಿಣಿಯರು ಹಾಗೂ 8-ಮಿಲಿಯನ್ ನವಜಾತ ಶಿಶುಗಳು ಅಯೋಡಿನ್ ಕೊರತೆಯ ನ್ಯೂನ್ಯತೆಗೆ ಒಳಗಾಗುವ ಅಪಾಯದಲ್ಲಿದ್ದಾರೆ.
ಅಯೋಡಿನ್ ಕೊರತೆಯು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಅಯೋಡಿನ್ ಲೋಹೀಯ ಜಾಡಿನ ಅಂಶ, ಥೈರಾಡ್ ಹಾರ್ಮೋನುಗಳ ಪ್ರಮುಖ ಅಂಶವಾಗಿದೆ. ಅಯೋಡಿನ್ ಕೊರತೆಯು ಪ್ರಪಂಚದಲ್ಲಿ ತಡೆಗಟ್ಟಬಹುದಾದ ಮೆದುಳಿನ ಹಾನಿಯ ಸಾಮಾನ್ಯ ಕಾರಣಗಳಲ್ಲಿ ಒಂದಾಗಿದೆ.
ಅಯೋಡಿನ್ ಕೊರತೆಯಿಂದ ಉಂಟಾಗುವ ತೊಂದರೆಗಳೆAದರೆ ವಯಸ್ಕರಲ್ಲಿ ಹೈಪೋಥೈರಾಯ್ಡಿಸಮ್, ಹೈಪರ್ ಥೈರಾಯ್ಡಿಸಮ್, ಗಳಗಂಡ, ನಿಶ್ಯಕ್ತಿ, ಕಾರ್ಯ ನಿರ್ವಹಣೆಯ ವೈಫಲ್ಯ ಮುಂತಾದ ಕಾಯಿಲೆಗಳು ಕಂಡುಬರಬಹುದು,ಗರ್ಭಿಣಿಯರಲ್ಲಿ ಇದರ ಪ್ರಭಾವವು ಹೆಚ್ಚಾಗಿರುವುದರಿಂದ ನಿರ್ಜೀವ ಜನನ, ಬುದ್ಧಿಮಾಂದ್ಯತೆಯ ಮಕ್ಕಳ ಜನನ, ಕಿವುಡು, ಮೂಕತನದ ಮಕ್ಕಳ ಜನನಕ್ಕೆ, ಗರ್ಭಪಾತ ಮತ್ತು ನಿಶ್ಯಕ್ತಿ ಮತ್ತೀತರ ಸಮಸ್ಯೆಗಳು ಉಂಟಾಗಬಹುದಾಗಿದೆ,ಮಕ್ಕಳಲ್ಲಿ ಕಲಿಕೆಯಲ್ಲಿ ಹಿಂದುಳುವಿಕೆ, ದೈಹಿಕ ಮತ್ತು ಮಾನಸಿಕ ವಿಕಲತೆ, ಕುಂಠಿತ ಬೆಳವಣಿಗೆ, ಮೆಳ್ಳಗಣ್ಣು ಮತ್ತು ನಡಿಗೆಯಲ್ಲಿ ಲೋಪದೋಷಗಳು ಕಂಡುಬರುವ ಸಾಧ್ಯತೆಗಳಿರುತ್ತವೆ.
Wಊಔ ಪ್ರಕಾರ ಪ್ರತಿದಿನ ನಾವು 5 ಗ್ರಾಂ. ಉಪ್ಪನ್ನು ಸೇವಿಸಬಹುದು (1-ಣsಜಿ ಕ್ಕಿಂತ ಸ್ವಲ್ಪ ಕಡಿಮೆ) ಪ್ರತಿದಿನ ಅವಶ್ಯವಿರುವ ಅಯೋಡಿನ್ ಪ್ರಮಾಣ ವಯಸ್ಸು ಪ್ರಮಾಣ 0-59 ತಿಂಗಳ 90 ಮೈಕ್ರೋ ಗ್ರಾಂ,06-12 ವರ್ಷ 120 ಮೈಕ್ರೋ ಗ್ರಾಂ.12 ವರ್ಷಕ್ಕಿಂತ ಮೇಲ್ಪಟ್ಟ 150 ಮೈಕ್ರೋ ಗ್ರಾಂ. ಗರ್ಭಿಣಿಯರು ಹಾಗೂ ಹಾಲುಣಿಸುವ ತಾಯಂದಿರು 250 ಮೈಕ್ರೋ ಗ್ರಾಂ. ಸೇವಿಸಬಹುದು ಎಂದು ಮಾಹಿತಿ ನೀಡಿದರು.
ಎಪಿಡೆಮಿಯೋಲಾಜಿಸ್ಟ್, ಡಾ.ಪ್ರವೀಣ ನಿಡಗುಂದಿ,ಮಾತನಾಡಿ ವಿಶ್ವ ಅಯೋಡಿನ್ ಕೊರತೆಯ ನಿಯಂತ್ರಣ ದಿನ ಹಾಗೂ ಸಪ್ತಾಹ ಕಾರ್ಯಕ್ರಮದ ಮಹತ್ವವನ್ನು ಎಲ್ಲರಿಗೂ ತಿಳಿಸಿದರು ಹಾಗೂ ಅಯೋಡಿನ್ ಕೊರತೆಯನ್ನು ತಡೆಗಟ್ಟುವಿಕೆಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ದಿನನಿತ್ಯದ ಆಹಾರದಲ್ಲಿ ಅಯೋಡಿನ್‌ಯುಕ್ತ ಉಪ್ಪನೇ ಬಳಸುವುದು,ಉಪ್ಪು ಹಾಕಿದ ಡಬ್ಬಿಗಳನ್ನು/ಭರಣಿಗಳನ್ನು ಸರಿಯಾಗಿ ಮುಚ್ಚಳ ಹಾಕಿಡುವುದು,ಆಹಾರವನ್ನು ತಯಾರಿಸಿದ ನಂತರ ಉಪ್ಪನ್ನು ಆಹಾರಕ್ಕೆ ಸೇರಿಸುವುದು,ಪಡಿತರ ಅಂಗಡಿ ಮಾಲಿಕರಿಗೆ ಅಯೋಡಿನ್ ಮಹತ್ವವನ್ನು ತಿಳಿಸಬೇಕು ಮತ್ತು ಅಯೋಡಿನ್‌ಯುಕ್ತ ಉಪ್ಪನ್ನು ಮಾರಾಟ ಮಾಡಲು ತಿಳಿಸಬೇಕು.ಶಾಲೆಗಳಲ್ಲಿ ಮಕ್ಕಳಿಗೆ ಅಯೋಡಿನ್ ಮಹತ್ವದ ಕುರಿತು ಆರೋಗ್ಯ ಶಿಕ್ಷಣ ನೀಡಬೇಕು.ಶಾಲೆಗಳಲ್ಲಿ ಮತ್ತು ಅಂಗನವಾಡಿ ಕೇಂದ್ರಗಳ ಶಿಕ್ಷಕರಿಗೆ ಮಕ್ಕಳಿಗೆ ಆರಂಭಿಕ ಜಾಗೃತಿ ಮತ್ತು ಪೋಷಣೆ ಇರುವುದರಿಂದ ಅಯೋಡಿನ್ ಮಹತ್ವದ ಕುರಿತು ಆರೋಗ್ಯ ಶಿಕ್ಷಣ ನೀಡಬೇಕು ಎಂದು ತಿಳಿಸಿದರು.
ಮುಖ್ಯೋಪಾಧ್ಯಾಯರಾದ ಶ್ರೀಮತಿ ಎಸ್.ವಿ.ಬಂಡಿ, ಮಾತನಾಡಿ ದಿನನಿತ್ಯ ಬಳಕೆಯಾಗುವ ಉಪ್ಪಿನ ಮಹತ್ವ ಹಾಗೂ ಮನೆಯಲ್ಲಿ ಶೇಖರಿಸಿಡಬಹುದಾದ ಹಾಗೂ ಬಳಸುವ ವಿಧಾನವನ್ನು ವಿವರಿಸಿದರು. ಮಕ್ಕಳಿಗೆ ಪೌಷ್ಠಿಕ ಆಹಾರದ ಜೊತೆಗೆ ಅಯೋಡಿನ್‌ಯುಕ್ತ ಉಪ್ಪನ್ನು ದಿನಂಪ್ರತಿ ಸೇವಿಸಲು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಆರ್.ಹೆಚ್.ಮೋನೆ, ಯು.ಎಸ್.ನಿಪ್ಪಾಣಿಕರ, ಶ್ರೀಮತಿ ಗೀತಾ ಹನುಮಂತಗೌಡ ಪ್ರಾಧ್ಯಾಪಕರು, ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿಯ ಅಧಿಕಾರಿಗಳು, ಜಿಲ್ಲಾ ಸಮೀಕ್ಷಣಾಧಿಕಾರಿಗಳ ಕಚೇರಿಯ ಅಧಿಕಾರಿಗಳು/ಸಿಬ್ಬಂದಿಯವರು ಹಾಗೂ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಮ್.ಎಸ್.ರಬ್ಬನಗೌಡ್ರ,, ರವರು ನಿರೂಪಿಸಿ ವಂದಿಸಿದರು.