ಗದಗ: ಮಂಗಳವಾರ ಗದಗ ತಾಲುಕಾ ಮಟ್ಟದ ಕ್ರೀಡಾಕೂಟ ಶ್ರೀ ಎಚ್.ಕೆ. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿತು. ವ್ಹಿ.ಡಿ.ಎಸ್. ಶ್ರೀಮತಿ ಎಸ್.ಪಿ. ಹುಯಿಲಗೋಳ ಬಾಲಕಿಯರ ಪ್ರಾಥಮಿಕ ವಿಭಾಗದ ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವರು ಈ ವಿದ್ಯಾರ್ಥಿನಿಯರಿಗೆ ದೈಹಿಕ ಶಿಕ್ಷಕರಾದ ಶ್ರೀ ಆರ್.ಎಸ್. ಲಮಾಣಿಯವರು ಮಾರ್ಗದರ್ಶನ ನೀಡಿದರು.
ಕೀರ್ತನಾ ಅವರಡ್ಡಿ 100 ಮೀ. ಓಟದಲ್ಲಿ ಪ್ರಥಮ, 80 ಮೀ. ಆಡೆತಡೆ ಓಟದಲ್ಲಿ ದ್ವಿತೀಯ, ಉದ್ದ ಜಿಗಿತದಲ್ಲಿ ದ್ವಿತೀಯ, ಗುಂಡು ಎಸೆತದಲ್ಲಿ ದ್ವಿತೀಯ, ರೂಪಾ ತುಂಬರಮಟ್ಟಿ ಗುಂಡು ಎಸೆತದಲ್ಲಿ ಪ್ರಥಮ, ಉದ್ದ ಜಿಗಿತದಲ್ಲಿ ಪ್ರಥಮ, ಪ್ರತೀಕ್ಷಾ ಚವ್ಹಾಣ ಎತ್ತರ ಜಿಗಿತದಲ್ಲಿ ದ್ವಿತೀಯ, 200 ಮೀ. ಓಟದಲ್ಲಿ ತೃತೀಯ ಉದ್ದ ಜಿಗಿತದಲ್ಲಿ ತೃತೀಯ, ರಕ್ಷಿತಾ 400 ಮೀ. ಓಟದಲ್ಲಿ ಪ್ರಥಮ, ಸುಷ್ಮೀತಾ ನರಗುಂದ ಎತ್ತರ ಜಿಗಿತದಲ್ಲಿ ದ್ವಿತೀಯ, ಅರ್ಪಿತಾ ಕಾತರಕಿ 400 ಮೀ. ಓಟದಲ್ಲಿ ದ್ವಿತೀಯ, ಸ್ಫೂರ್ತಿ ಲಮಾಣಿ 600 ಮೀ. ಓಟದಲ್ಲಿ ಪ್ರಥಮ, ಸ್ನೇಹಾ ಚಿಮ್ಮನಕಟ್ಟಿ 200 ಮೀ. ಓಟದಲ್ಲಿ ಪ್ರಥಮ, ಸ್ನೇಹಾ ಕರಮೇರಿ 600 ಮೀ. ಓಟದಲ್ಲಿ ಪ್ರಥಮ,
ಗುಂಪು ಆಟಗಳಲ್ಲಿ 400 ಮೀ. ರೀಲೇಯಲ್ಲಿ ಪ್ರಥಮ, ಖೋಖೋದಲ್ಲಿ ಪ್ರಥಮ, ವ್ಹಾಲಿಬಾಲ ನಲ್ಲಿ ದ್ವಿತೀಯ, ಥ್ರೋಬಾಲದಲ್ಲಿ ದ್ವಿತೀಯ, ಕಬ್ಬಡ್ಡಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಈ ಅಭಿನಂದನೀಯ ಸಾಧನೆ ಗೈದ ವಿದ್ಯಾರ್ಥಿನಿಯರಿಗೆ ಹಾಗೂ ದೈಹಿಕ ಶಿಕ್ಷಕರಿಗೆ ವಿದ್ಯಾದಾನ ಸಮಿತಿಯ ಅಧ್ಯಕ್ಷರಾದ ಶ್ರೀ ಡಿ.ಬಿ. ಹುಯಿಲಗೋಳ ಹಾಗೂ ವಿದ್ಯಾದಾನ ಸಮಿತಿಯ ಕ್ರೀಯಾಶೀಲ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ಬಿ. ಹುಯಿಲಗೋಳರವರು, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಸಿಇಓ ರವರಾದ ಶ್ರೀ ಪಿ ಎಚ್ ಕಡಿವಾಲ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಆರ್.ಆರ್. ಜಾಲಿಹಾಳ ಹಾಗೂ ಸಮಸ್ತ ಶಿಕ್ಷಕ ಶಿಕ್ಷಕಿಯರು ಹಾಗೂ ಸಿಬ್ಬಂದಿ ವರ್ಗದವರು ಹಾರ್ದಿಕ ಅಭಿನಂದನೆಗಳನ್ನು ತಿಳಿಸುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಲಿ ಎಂದು ಶುಭ ಕೋರಿರುವರು.