ಜಿಲ್ಲೆ

ನೂರರ ವೇಗದಲ್ಲಿ ಹೋಗಿ, 108 ವಾಹನದಲ್ಲಿ ಬರುವಂತಾಗಬೇಡಿ : ಸಿದ್ಧರಾಮೇಶ್ವರ ಗಡೇದ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ, ಗದಗ

ನಗರದ ಚಿಕ್ಕಟ್ಟಿ ಶಾಲೆಯಲ್ಲಿ ಸೋಮವಾರ ಅಪರಾಧ ತಡೆ ದಿನಾಚರಣೆ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪೊಲೀಸ್​ ಇನ್ಸಪೆಕ್ಟರ್​ ಸಿದ್ಧರಾಮೇಶ್ವರ ಗಡೇದ, ತಂತ್ರಜ್ಞಾನ ಮುಂದುವರೆಯುವ ಮೊದಲು ಬಸ್​ ದರೋಡೆ, ಮನೆ ಕಳ್ಳತನ ಹೀಗೆ ಸಣ್ಣ ಪುಟ್ಟ ಕಳ್ಳತನ ಮಾಡುತ್ತಿದ್ದರು. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹಣ ಕೊಡಲು ಹೋಗುವಾಗ ವ್ಯಕ್ತಿಯನ್ನು ಹಿಡಿದು ಹೊಡೆದು ಬಡಿದು ದರೋಡೆ ಮಾಡುತ್ತಿದ್ದರು. ಮಾನವನು ಬುದ್ಧಿವಂತಿಕೆಯಿಂದ ಹಣ, ಚಿನ್ನಾಭರಣಗಳನ್ನು ಬ್ಯಾಂಕಗಳಲ್ಲಿ ಜಮಾ ಮಾಡಲು ಆರಂಭಿಸಿದಾಗ ಬ್ಯಾಂಕ್​ ದರೋಡೆ ಮಾಡಲು ಆರಂಭಿಸಿದರು. ಹಣವನ್ನು ೋ ಮೂಲಕ ವರ್ಗಾಯಿಸಲು ಆರಂಭಿಸಿದಾಗ ಕಳ್ಳರು ಸಹ ಅಪ್ಡೇಟಾಗಿ ಆನ್​ಲೈನ್​ನಲ್ಲಿಯೇ ಹಣ ದೋಚುವದನ್ನು ಕಲಿತರು. ಹೀಗೆ ತಂತ್ರಜ್ಞಾನ ಬೆಳೆದಂತೆ ಅಪರಾಧ ಪ್ರಕರಣಗಳ ವೈಖರಿ ಬದಲಾಗುತ್ತಿದೆ. ದರೋಡೆಕೋರರು ಆನ್​ಲೈನ್​ ಮೂಲಕ 2024 ನೇ ಜನೆವರಿಯಿಂದ ಡಿಸೆಂಬರ್​ ವರೆಗೆ ಒಂದೇ ವರ್ಷದಲ್ಲಿ 3340 ಕೋಟಿ ಹಣವನ್ನು ದೋಚಿದ್ದಾರೆ. ಜನರು ಎಚ್ಚರ ವಹಿಸಬೇಕು. ಅನಾಮಿಕ ಕರೆಗಳನ್ನು ಸ್ವೀಕರಿಸಬಾರದು. ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಮಾಹಿತಿ ನಿಡಬಾರದು ಎಂದು ಹೇಳಿದರು.

ನೂರರ ವೇಗದಲ್ಲಿ ಹೋಗಿ, ನೂರಾ ಎಂಟರಲ್ಲಿ ಬರುವಂತಾಗಬೇಡಿ:

ಬೈಕ್​ ಸವಾರರು ಮಾತ್ರ ಎಷ್ಟೇ ತುರ್ತು ಕೆಲಸವಿದ್ದರೂ ನೂರರ ವೇಗದಲ್ಲಿ ಹೋಗಬಾರದು. ನೂರರ ವೇಗದಲ್ಲಿ ಹೋಗುವಾಗ ಅಪಾಯದ ಮುನ್ಸೂಚನೆಗಳು ಹೆಚ್ಚಿರುತ್ತವೆ. ಶರವೇಗದಲ್ಲಿ ಹೋಗುವುದು ಗಾಡಿಗೂ ನಮ್ಮ ಬಾಡಿಗೂ ಎರಡಕ್ಕೂ ಒಳ್ಳೆಯದಲ್ಲ ವೇಗ ಹೆಚ್ಚಾದಂತೆಲ್ಲ ಮೈಲೇಜು ಸಹ ಕಡಿಮೆಯಾಗುತ್ತದೆ. ರ್ಷಣೆ ಹೆಚ್ಚಾಗಿ ಎಂಜಿನ್​ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆ ಸಹ ಹೆಚ್ಚಿರುತ್ತದೆ ಎಂದು ನುಡಿದರು.

ಪ್ರೊ. ಎಸ್​. ವೈ. ಚಿಕ್ಕಟ್ಟಿ, ಶೋಭಾ ಸ್ಥಾವರಮಠ, ಅನಿಲ್​ ನಾಯಕ್​, ಶ್ರೀಶೈಲ ಬಡಿಗೇರ ಇತರರು ಇದ್ದರು.