ಜಿಲ್ಲೆ

ದೇವಾಂಗ ಮಹಿಳಾ ಮಂಡಳದಿoದ ಮಕ್ಕಳ ದಿನಾಚರಣೆ

Gadag - Shivanand Hiremath
Gadag:  ದೇವಾಂಗ ಮಹಿಳಾ ಮಂಡಳದ ವತಿಯಿಂದ ಮಕ್ಕಳ ದಿನಾಚರಣೆಯನ್ನು ದೇವಾಂಗ ನೌಕರರ ಸಂಘದಲ್ಲಿ ಆಚರಿಸಲಾಯಿತು. ಮುಖ್ಯ ಅತಿಥಿಗಳು ಹಾಗೂ ನಿರ್ಣಾಯಕ ರಾಗಿ ಮಹಿಳಾ ಮಂಡಲದ ಗೌರವಾಧ್ಯಕ್ಷರಾದ ಶ್ರೀಮತಿ ನಿರ್ಮಲ ಕೊಳ್ಳಿ ಉಪಾಧ್ಯಕ್ಷರಾದ ಶ್ರೀಮತಿ ಯಶೋದಾಬಾಯಿ ಗಿಡ್ನಂದಿ ಹಾಗೂ ಶಾಂತ ಗುತ್ತಿಯವರು ಆಗಮಿಸಿದ್ದರು
    ಮಕ್ಕಳು ವಿವಿಧ ರೀತಿಯ ವೇಷಭೂಷಣಗಳನ್ನು ಧರಿಸಿದ್ದರು ಒನಕೆ ಓಬವ್ವ ಬಸವಣ್ಣ ಹಣ್ಣಿನ ವೇಷಗಳು ದ.ರಾ .ಬೇಂದ್ರೆ ಜವಾಹರಲಾಲ್ ನೆಹರು ಮುಂತಾದ ವೇಷಭೂಷಣಗಳನ್ನು ಧರಿಸಿದ್ದರು
   ಸ್ಪರ್ಧೆಯ ನಂತರ ಬಹುಮಾನ ವಿತರಿಸಲಾಯಿತು ನಿರ್ಮಲ ಕೊಳ್ಳಿಯವರು ಮಾತನಾಡಿ ಮಕ್ಕಳು ಸಂತೋಷದಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಅವರ ತಂದೆ ತಾಯಿಯರ ಆಸಕ್ತಿಯನ್ನು ಶ್ಲಾಘಿಸಿದರು ಯಶೋಧಾಬಾಯಿ ಗಿಡ್ನಂದಿಯವರು  ಮಾತನಾಡಿ ಮಕ್ಕಳಿಗೆ ನಮ್ಮ ದೇಶದ ಹೋರಾಟಗಾರರ ನೆನಪು ಮಾಡಲು ಈ ವೇದಿಕೆ ಅನುಕೂಲವಾಗಿದೆ ಅವರಂತೆ ನೀವು ಆಗಬೇಕೆಂದು ತಿಳಿಸಿದರು
    ಅಧ್ಯಕ್ಷರಾದ ಸುಜಾತ ಕಾಖಂಡಕಿಯವರು ಮಾತನಾಡಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದಕ್ಕಾಗಿ ಅಭಿನಂದಿಸಿದರು
     ಶ್ರೀಮತಿ ಗೀತಾ ದೇವಾಂಗ ಮಠ ಕಾರ್ಯಕ್ರಮ ನಿರೂಪಿಸಿದರು ಭಾಗ್ಯ ಆರಿ ಪ್ರಾರ್ಥಿಸಿದರು ಶೈಲಜಾ ಗಿಡ್ನಂದಿ ಎಲ್ಲರನ್ನೂ ಸ್ವಾಗತಿಸಿದರು ರತ್ನ ಪುರಂತ ರ ಪ್ರಾಸ್ತಾವಿಕವಾಗಿ ಮಾತನಾಡಿದರು ಭಾರತಿ ಗಡ್ಡಿ ವಿಜೇತರ ಪಟ್ಟಿ ಓದಿದರು ವಿಜಯಲಕ್ಷ್ಮಿ, ಕಡಕೋಳ್ ವಂದಿಸಿದರು ಕಾರ್ಯಕ್ರಮದಲ್ಲಿ ರತ್ನ ಕೆಳಗೇರಿ ಕಸ್ತೂರಿ ಕಾಲವಾಡ್ ವಿದ್ಯಾ ಕೂಬಳ್ಳಿ ಮಂಜುಳಾ ಹೊನ್ನಳ್ಳಿ  ವೀಣಾ ನೀಲಗುಂದ ಶಿಲ್ಪ ಕೊಪ್ಪಳ ಮುಂತಾದವರು ಭಾಗವಹಿಸಿದ್ದರು