ಜಿಲ್ಲೆ

ದೇವಾಂಗ ಮಹಿಳಾ ಮಂಡಳದಿಂದ ಬನಶಂಕರಿ ಪೂಜೆ

Gadag - Shivanand Hiremath

Gadag: ದೇವಾಂಗ ಮಹಿಳಾ ಮಂಡಳದಿಂದ 51ನೆ ಬನಶಂಕರಿ ಪೂಜೆ ಹಾಗೂ ಮಾಸಿಕ ಸಭೆಯನ್ನು ಭಾಗ್ಯ ಆರಿ ಹಾಗೂ ಶೋಭಾ ಆರಿ ಅವರ ಮನೆಯಲ್ಲಿ ಆಯೋಜಿಸಲಾಗಿತ್ತು. ಲಲಿತಾ ಸಹಸ್ರನಾಮಾವಳಿಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.

ಭಾಗ್ಯ ಅರಿಯವರು ಎಲ್ಲರನ್ನೂ ಸ್ವಾಗತಿಸಿದರು. ಶ್ರೀಮತಿ ರತ್ನ ಎಸ್ ಘಾರ್ಗಿಯವರು ನವರಾತ್ರಿಯ ಅಂಗವಾಗಿ ಪಾರ್ವತಿಯ ಒಂಬತ್ತು ಅವತಾರಗಳನ್ನು ಸವಿಸ್ತಾರವಾಗಿ ವಿವರಿಸಿದರು. ವಜ್ರಾ ಪೆಂಟ ಅವರು ಹಾಡನ್ನು ಹಾಡಿದರು. ಅಧ್ಯಕ್ಷರಾದ ಶ್ರೀಮತಿ ಸುಜಾತ ಕಾಕಂಡ್ಕಿ ಅವರು ಗಾಂಧೀಜಿ ಹಾಗೂ ಶಾಸ್ತ್ರೀಜಿ ಅವರ ಜಯಂತಿಯ ಅಂಗವಾಗಿ ಅವರ ಜೀವನದ ಬಗ್ಗೆ ವಿವರಿಸಿದರು.

ಗೌರವಾಧ್ಯಕ್ಷರಾದ ಶ್ರೀಮತಿ ನಿರ್ಮಲಾ ಕೊಳ್ಳಿ  ಅವರು ಮಾತನಾಡಿ ಸಂಘದ ಮುಂದಿನ ಕಾರ್ಯಕ್ರಮಗಳ ಬಗ್ಗೆ ಹೇಳಿದರು.

ಎಲ್ಲರು ಭಕ್ತಿ ಗೀತೆಗಳನ್ನು ಹಾಡಿದರು ನಂತರ ಉಡಿ ತುಂಬಲಾಯಿತು. ಮಹಾಮಂಗಳಾರತಿ ನಂತರ ಅಲ್ಪೋಪಹಾರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು .

ಕಾರ್ಯಕ್ರಮದಲ್ಲಿ ಭಾರತಿ ಗಡ್ಡಿ, ಸುಧಾ ಕಾಂಗೂರಿ,ವೀಣಾ ನೀಲಗುಂದ, ಶಿಲ್ಪ ಕೊಪ್ಪಳ, ಪ್ರತಿಭಾ ಹತ್ತಿಕಾಳ್, ಶಕುಂತಲಾ ಬೀಜಿಲಿ, ನೇತ್ರಾವತಿ ಜೂಜಾಗಾರ್, ಶಾಂತ ಗುತ್ತಿ, ಶಾಂತಕ್ಕ ಹೊನ್ನಳ್ಳಿ, ಮಂಜುಳಾ ಹೊನ್ನಳ್ಳಿ, ಸುಧಾ ಬಳ್ಳಿ, ಶೈಲಾ ಗಿಡ್ನಂದಿ, ಯಶೋಧಬಾಯಿ ಗಿಡ್ನಂದಿ, ವಜ್ರ ಪೆಂಟ, ಯಶೋಧ ಬಾಗೋಡಿ, ಚಿತ್ರಾ ನಂದರ್ಗಿ, ಪ್ರೇಮಾ ನಂದರ್ಗಿ ಮುಂತಾದವರು ಉಪಸ್ಥಿತರಿದ್ದರು.