ಜಿಲ್ಲೆ

ದೇವಾಂಗ ಮಹಿಳಾ ಮಂಡಳದಿಂದ ಬನಶಂಕರಿ ಪೂಜೆ

Gadag - Shivanand Hiremath

Gadag: ದೇವಾಂಗ ಮಹಿಳಾ ಮಂಡಳದ ವತಿಯಿಂದ 48 ನೇ ಮಾಸಿಕ ಸಭೆ ಹಾಗೂ ಬನಶಂಕರಿ ಪೂಜೆಯನ್ನು ಗೌರವಾಧ್ಯಕ್ಷರಾದ ಶ್ರೀಮತಿ ನಿರ್ಮಲಾ  ಕೊಳ್ಳಿ ಅವರ ಮನೆಯಲ್ಲಿ ಆಯೋಜಿಸಲಾಗಿತ್ತು. ಮೊದಲಿಗೆ ಲಲಿತಾ ಸಹಸ್ರನಾಮಾವಳಿಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.ನಂತರ ನಿರ್ಮಲಾ  ಕೊಳ್ಳಿಯವರು ಎಲ್ಲರನ್ನೂ ಸ್ವಾಗತಿಸಿದರು. ಶ್ರೀಮತಿ ಗೀತಾ ದೇವಾಂಗ ಮಠ ರವರು ನಾಗರ ಪಂಚಮಿ ಹಬ್ಬದ ಆಚರಣೆಯ ಮಹತ್ವವನ್ನು ತಿಳಿಸಿದರು. ರತ್ನಾಬಾಯಿ ಗಾರ್ಗಿಯವರು ಶ್ರಾವಣ ಮಾಸದಿಂದ ಹಬ್ಬಗಳು ಪ್ರಾರಂಭವಾಗುತ್ತವೆ. ಭಾರತೀಯರಿಗೆ ಹಬ್ಬಗಳನ್ನು ಆಚರಿಸುವುದೇ ಒಂದು ವೈಶಿಷ್ಟ್ಯ .ಪ್ರತಿಯೊಂದು ಹಬ್ಬಕ್ಕೂ ಅದರದೇ ಆದ ಕಥೆ ಮಹತ್ವಗಳಿರುತ್ತವೆ ಎಂದರು. ಈ ಮಾಸದಲ್ಲಿ ಪೂಜೆ ಪುನಸ್ಕಾರಗಳಿಗೆ ಹೆಚ್ಚಿನ ಮಹತ್ವ ಇರುತ್ತದೆ ಎಂದರು.

ಯಶೋದಬಾಯಿ ಗಿಡ್ನಂದಿಯವರು ದೇವರ ದಾಸಿಮಯ್ಯನವರ ವಚನಗಳನ್ನು ಹೇಳಿ ವಿವರಿಸಿದರು. ಗೌರವಾಧ್ಯಕ್ಷರಾದ ಶ್ರೀಮತಿ ನಿರ್ಮಲ ಕೊಳ್ಳಿಯವರು ಮಾತನಾಡಿ ಸಂಘದ ಮುಂದಿನ ಯೋಜನೆಗಳನ್ನು ತಿಳಿಸಿದರು. ಶ್ರೀಮತಿ ಭಾರತಿ ಗಡ್ಡಿಯವರು ಮಾತನಾಡಿ ತಮ್ಮ ವಧು ವರರಮಾಹಿತಿ ಕೇಂದ್ರವಾದ ಸಪ್ತಪದಿಯಿಂದ ಆದ ಜೋಡಿಗಳು ಮತ್ತು ಅದರ ನೋಂದಣಿ ಬಗ್ಗೆ ತಿಳಿಸಿದರು.  ಅಧ್ಯಕ್ಷರಾದ ಶ್ರೀಮತಿ ಸುಜಾತ ಕಾಕಂಡಕಿಯವರು ಮಾತನಾಡಿ ಮಾಸಿಕ ಸಭೆಯಲ್ಲಿ ಚರ್ಚಿಸುವ ವಿಷಯಗಳ ಬಗ್ಗೆ ಹೇಳಿದರು. ಮುತ್ತೈದೆಯರಿಗೆ ಉಡಿ ತುಂಬಲಾಯಿತು ದೇವಿಗೆ ಮಂಗಳಾರತಿ ಮಾಡಲಾಯಿತು. ಅಲ್ಪೋಪಹಾರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಕಾರ್ಯಕ್ರಮದಲ್ಲಿ ಶೈಲಜಾ ಗಿಡ್ನಂದಿ ಶಕುಂತಲಾ ಬಿಜಲಿ,ಪುಷ್ಪ ಗುಗ್ಗರಿ,ಪ್ರತಿಭಾ ಹತ್ತಿಕಾಳ,  ಶಾಂತಾಗುತ್ತಿ ವೀಣಾ ನಿಲಗುಂದ, ಶಿಲ್ಪ ಕೊಪ್ಪಳ,  ನೇತ್ರಾವತಿ ಜೂಜುಗಾರ, ಶೋಭಾ ಆರಿ, ಗೀತಾ ಗುಗ್ರಿ, ರತ್ನ ಪುರಂತರ, ಮಹಾಲಕ್ಷ್ಮಿ  ಚಳಗೇರಿ,  ರತ್ನ ಚಳಗೇರಿ, ಭಾಗ್ಯ ಆರಿ ,ಸುಧಾಕಂಗೂರಿ, ಶಾಂತ ಗುತ್ತಿ, ರತ್ನ ಪುರಂತರ್, ಮಂಜುಳಾ ಹೊನ್ನಳ್ಳಿ  ಉಪಸ್ಥಿತರಿದ್ದರು.