ಜಿಲ್ಲೆ

ದೇವಾಂಗ ಮಹಿಳಾ ಮಂಡಳದಿಂದ ಬನಶಂಕರಿದೇವಿ ಪೂಜೆ.

Gadag - Shivanand Hiremath
Gadag: ದೇವಾಂಗ ಮಹಿಳಾ ಮಂಡಳದ 67ನೇ ಮಾಸಿಕ ಸಭೆ ಹಾಗೂ ಬನಶಂಕರಿ ದೇವಿ ಪೂಜೆಯನ್ನು ಸಂಘದ ಸದಸ್ಯರಾದ ಶ್ರೀಮತಿ ಮಂಜುಳಾ ಹೊನ್ನಳ್ಳಿ ಯವರ  ಮನೆಯಲ್ಲಿ ಏರ್ಪಡಿಸಲಾಗಿತ್ತು. ಮೊದಲಿಗೆ ಎಲ್ಲ ಸದಸ್ಯರಿಂದ ಲಲಿತಾ ಸಹಸ್ರನಾಮ ಪಠಣ ಜರುಗಿತು. ಶ್ರೀಮತಿ ಮಂಜುಳಾ ಹೊನ್ನಳ್ಳಿ ಯವರು ಎಲ್ಲರನ್ನು ಸ್ವಾಗತಿಸಿದರು.ಶ್ರೀಮತಿ ಸುಧಾ ಬಳಿಯವರು  ಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಕೃಷ್ಣನ ಜೀವನ ಚರಿತ್ರೆ ಕುರಿತು ಸವಿಸ್ತಾರವಾಗಿ ತಿಳಿಸಿದರು. ಗೌರವಾಧ್ಯಕ್ಷರಾದ ಶ್ರೀಮತಿ ರತ್ನಾ ಬಾಯಿ ಘಾರ್ಗಿಯವರು ಮಾತನಾಡಿ ಶ್ರಾವಣ ಮಾಸದ ಮಹತ್ವವನ್ನು ತಿಳಿಸಿದರು. ಕಾರ್ಯಾಧ್ಯಕ್ಷರಾದ ಶ್ರೀಮತಿ ಭಾರತಿ ಗಡ್ಡಿಯವರು ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಬಗ್ಗೆ ಮಾತನಾಡಿದರು. ಶ್ರೀಮತಿ ವಿಜಯಲಕ್ಷ್ಮೀ ಹತ್ತಲಗೇರಿಯವರು ಮಾತನಾಡಿ ಶ್ರಾವಣ ಮಾಸದಿಂದ   ಕಾರ್ತಿಕ ಮಾಸದವರೆಗೂ ಭೂಮಿಯನ್ನು ಯಾರು ಕಾಪಾಡಿದರು ಎಂಬುದನ್ನು ವಿಸ್ತಾರವಾಗಿ ತಿಳಿಸಿದರು.
     ಶ್ರೀಮತಿ ವಜ್ರ ಪೆಂಟಾ ಹಾಗೂ ಶ್ರೀಮತಿ ಭಾಗ್ಯ ಆರಿ ಇವರಿಂದ ದೀಪಜ್ಯೊತಿ ನೃತ್ಯ ನಡೆಯಿತು. ಅಧ್ಯಕ್ಷರಾದ ಶ್ರೀಮತಿ ವೀಣಾ ನೀಲಗುಂದ ವರು ಮಾತನಾಡಿ ಅಂತಾರಾಷ್ಟ್ರೀಯ ಕೈ ಮಗ್ಗ ದಿನದ ಹಾಗೂ ಸೀರೆಯ ಬಗ್ಗೆ ತಿಳಿಸಿದರು. ಕೊನೆಯಲ್ಲಿ ಎಲ್ಲಮಹಿಳೆಯರಿಗೂ  ಉಡಿ ತುಂಬಲಾಯಿತು. ನಂತರ ಭಕ್ತಿಗೀತೆ ಗಳನ್ನು ಹಾಡಿ ಮಹಾಮಂಗಳಾರತಿ ಯೊಂದಿಗೆ ಮಂಗಲವಾಯಿತು.
      ಕಾರ್ಯಕ್ರಮದಲ್ಲಿ ಶಾಂತಾ ಹೊನ್ನಳ್ಳಿ.ಸುಜಾತಾ ಕಾಖಂಡಕಿ. ಗೀತಾ ದೇವಾಂಗಮಠ. ವಿಜಯಲಕ್ಷ್ಮೀ ಕಡಕೊಳ. ಶೈಲಜಾ ಗಿಡ್ನಂದಿ.ರತ್ನಾ ಗಾಡದ.ಲಕ್ಷ್ಮೀ ಗಾರ್ಗಿ.ಸವಿತಾ ದೇವಧರ.ರತ್ನಾ ಚಳಗೇರಿ. ಮಹಾಲಕ್ಷ್ಮಿ ಚಳಗೇರಿ.ಶೊಭಾ ಆರಿ.ಗಾಯತ್ರಿ ಬೆಲ್ಲದ.ಶಿಲ್ಪಾ ಸಣಕಲ್.ಶಕುಂತಲಾ ಗಂಜಿ. ಮೇಘಾ ಜವಳಿ.ಆಶಾ ಜವಳಿ.ಜಯಶ್ರೀ ಶಿವಳ್ಳಿ. ಪುಷ್ಪ ಗುಗ್ಗರಿ. ರತ್ನಾ ಪುರಂತರ. ನೇತ್ರಾವತಿ ಜೂಜಗಾರ. ಪ್ರಮೀಳಾ ನಂದರಗಿ. ಸೀತ ಹೊನ್ನಳ್ಳಿ. ಅಮೃತವರ್ಷಿಣಿ ಹೊನ್ನಳ್ಳಿ.ಆಶಾ ಹೊನ್ನಳ್ಳಿ . ಮುಂತಾದವರು ಭಾಗವಹಿಸಿದ್ದರು.