Gadag: ದೇವಾಂಗ ಮಹಿಳಾ ಮಂಡಳದ ಆರನೇ ವಾರ್ಷಿಕೋತ್ಸವ ಹಾಗೂ ಪದಗ್ರಹಣ ಸಮಾರಂಭವು ಶ್ರೀ ಹಳೇ ಬನಶಂಕರಿ ದೇವಿ ಸಮುದಾಯ ಭವನದಲ್ಲಿ ವಿಜೃಂಭಣೆಯಿಂದ ನೆರವೇರಿತು
ಸಮಾರಂಭಕ್ಕೆ ಉದ್ಘಾಟಕರಾಗಿ ಕರ್ನಾಟಕ ರಾಜ್ಯ ದೇವಾಂಗ ಸಂಘ ಮಹಿಳಾ ಘಟಕದ ಕಾರ್ಯಾಧ್ಯಕ್ಷರಾದ ಶ್ರೀಮತಿ ತಾರಾಮತಿ ವಾಸಪ್ಪನವರ ಮುಖ್ಯ ಅತಿಥಿಗಳಾಗಿ ನವೋದಯ ವಿದ್ಯಾಲಯ ಸಮಿತಿಯ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕಿಯರಾದ ಶ್ರೀಮತಿ ಅನುರಾಧ ಕೊಳ್ಳಿ ದೇವಾಂಗ ಮಹಿಳಾ ಮಂಡಳದ ಗೌರವ ಅಧ್ಯಕ್ಷರು ಹಾಗೂ ಉತ್ತಮ ಮಹಿಳಾ ಉದ್ಯಮಿ ಪ್ರಶಸ್ತಿ ವಿಜೇತರಾದ ಶ್ರೀಮತಿ ನಿರ್ಮಲ ಕೊಳ್ಳಿಯವರು ಆಗಮಿಸಿದ್ದರು. ಮಹಿಳಾ ಮಂಡಳದ ಅಧ್ಯಕ್ಷರಾದ ಶ್ರೀಮತಿ ಸುಜಾತ ಕಾಕಂಡಕಿ ಕರ್ನಾಟಕ ರಾಜ್ಯ ದೇವಾಂಗ ಸಂಘ ಮಹಿಳಾ ಘಟಕದ ಉಪಾಧ್ಯಕ್ಷರಾದ ಶ್ರೀಮತಿ ವಜ್ರ ಪೆಂಟ ಸಂಘಟನಾ ಕಾರ್ಯದರ್ಶಿ ಶ್ರೀಮತಿ ಗೀತಾ ದೇವಾಂಗಮಠ ನಿರ್ದೇಶಕರಾದ ಶ್ರೀಮತಿ ಗಾಯತ್ರಿ ಬೆಲ್ಲದ್ ಮಹಿಳಾ ಮಂಡಳದ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ರತ್ನಬಾಯಿ ಗಾರ್ಗಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು ವಿಶೇಷ ಆಹ್ವಾನಿತರಾದ ಗದಗ್ ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷರಾದ ಶ್ರೀ ದಶರಥ ರಾಜ ಕೊಳ್ಳಿ ಕರ್ನಾಟಕ ರಾಜ್ಯ ದೇವಾಂಗ ಸಂಘದ ಸಂಘಟನಾ ಕಾರ್ಯದರ್ಶಿ ಶ್ರೀ ಪ್ರಭು ನೀಲಗುಂದ ಗದಗ ಜಿಲ್ಲಾ ದೇವಾಂಗ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಕೊಪ್ಪಳ ಹಾಗೂ ಜಿಲ್ಲಾ ದೇವಾಂಗ ಯುವಕರ ಸಂಘದ ಅಧ್ಯಕ್ಷರಾದ ಶ್ರೀ ರಾಜು ಕೋಚಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು
ಜ್ಯೋತಿ ಬೆಳಗಿಸುವುದರೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಉದ್ಘಾಟಕರಾಗಿ ಮಾತನಾಡಿದ ಶ್ರೀಮತಿ ತಾರಾಮತಿ ವಾಸಪ್ಪ ನವರ್ ದೇವಾಂಗ ಮಹಿಳಾ ಮಂಡಲವನ್ನು ಇನ್ನೂ ಮಾಡಬಹುದಾಗಿತ್ತು ಸಮಾಜವನ್ನು ಸಂಘಟನೆ ಮಾಡಬೇಕು ಬೆಳೆಸಬೇಕು. ಮಹಿಳೆಯರು ಮನೆಯಲ್ಲೂ ಹೊರಗಡೆಯೂ ದುಡಿಯಬೇಕು ಹಾಗಿದ್ದು ಸಮಾಜದಲ್ಲಿ ಸೇವಾ ಮನೋಭಾವನೆಯಿಂದ ನಮ್ಮನ್ನು ನಾವು ತೊಡಗಿಸಿ ಕೊಂಡಾಗ ಧೈರ್ಯವಾಗಿ ಮುಂದೆ ಬಂದಾಗ ಏನನ್ನಾದರೂ ಸಾಧಿಸಬಹುದು ಬೇರೆ ಸಮಾಜದವರನ್ನು ನೋಡಿದಾಗ ನಾವು ಬಹಳ ಹಿಂದಿದ್ದೇವೆ ಎನಿಸುತ್ತದೆ. ಸರ್ಕಾರದಿಂದ ಸಿಗುವ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ರಾಜ್ಯಮಟ್ಟಕ್ಕೆ ಪದಾಧಿಕಾರಿಗಳಾಗಿ ಆಯ್ಕೆಯಾಗಿ .ಯಾವುದೇ ಕೆಲಸಕ್ಕೆ ಹಿಂಜರಿಯಬೇಡಿ. ನಿಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಿ ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ಅನುರಾಧ ಕೊಳ್ಳಿಯವರು ಮಾತನಾಡಿ ನನ್ನ ತವರುಮನೆಗೆ ಬಂದಿದ್ದು ನನಗೆ ಬಹಳ ಸಂತೋಷವಾಗಿದೆ.
ಮೊದಲಿನ ನಮ್ಮ ಹಿರಿಯರು ಕಟ್ಟಿದ್ದ ದೇವಾಂಗ ಮಹಿಳಾ ಮತ್ತೆ ಹುಟ್ಟಿ ಬಂದಿದ್ದು ಬಹಳ ಸಂತೋಷವೆನಿಸುತ್ತದೆ. ನೀವೆಲ್ಲರೂ ಇದನ್ನು ಹೆಚ್ಚು ಹೆಚ್ಚು ಸದಸ್ಯತ್ವವನ್ನು ಪಡೆಯುವುದರ ಮೂಲಕ ಬೆಳೆಸಿ ಎಂದರು.
ನಂತರ ಗೌರವಾಧ್ಯಕ್ಷರಾದ ಶ್ರೀಮತಿ ನಿರ್ಮಲ ಕೊಳ್ಳಿಯವರು ಮಾತನಾಡಿ ಈ ವೇದಿಕೆ ಮಹಿಳೆಯರ ಪ್ರತಿಭೆ ಹೊರ ಹಾಕಲು ಸೂಕ್ತ ವೇದಿಕೆ ಮಹಿಳೆಯರು ಈ ವೇದಿಕೆಯ ಸದುಪಯೋಗವನ್ನು ಪಡೆದುಕೊಳ್ಳಿ ಎಂದರು. ಗದಗೆ ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷರಾದ ಶ್ರೀ ದಶರಥ ರಾಜ ಕೊಳ್ಳಿಯವರು ಮಾತನಾಡಿ ಮಹಿಳೆಯರ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಆಪರೇಷನ ಸಿಂಧೂರ ಒಂದು ಜೀವಂತ ಉದಾಹರಣೆಯಾಗಿದೆ. ಆ ತಂಗಿಗಳು ಮಹಿಳೆಯರ ಸಿಂಧೂರವನ್ನು ಅಳಿಸಿದರೆ ಆ ಕೃತ್ಯಕ್ಕೆ ತಕ್ಕ ಪಾಠವನ್ನು ನಮ್ಮ ಭಾರತದ ಹೆಮ್ಮೆಯ ಮಹಿಳೆಯರಾದ ವ್ಯೋಮೋಕ ಸಿಂಗ್ ಹಾಗೂ ಸೋಫಿಯಾ ಖುರೇಷಿಯವರು ತೋರಿಸಿ ಕೊಟ್ಟಿದ್ದಾರೆ. ಇದರಲ್ಲೇ ಗೊತ್ತಾಗುತ್ತೆ ಮಹಿಳೆಯರು ಯಾವುದರಲ್ಲಿಯೂ ಕೂಡ ಕಮ್ಮಿ ಇಲ್ಲ ಅಂತ ಹಾಗೆನೇ ನಮ್ಮ ಸಮಾಜದ ಮಹಿಳೆಯರು ಕೂಡ ಅಷ್ಟೇ ಶಕ್ತಿಶಾಲಿ ಹಾಗೂ ಪ್ರತಿಭಾವಂತರಿದ್ದಾರೆ ಎಂದರು.
ಗದಗ ಜಿಲ್ಲಾ ದೇವಾಂಗ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಕೊಪ್ಪಳ ಅವರು ಮಾತನಾಡಿ ದೇವಾಂಗ ಸಮಾಜದ ಹಿಂದಿದ್ದ ಮಹಿಳಾ ಸಂಘ ಹೆಚ್ಚು ಕಾರ್ಯಗತವಾಗಿತ್ತು. ಅದೇ ರೀತಿ ಈಗಿನ ಮಹಿಳಾ ಸಂಘವು ಹೆಚ್ಚು ಹೆಚ್ಚು ಕೆಲಸವನ್ನು ಮಾಡುತ್ತಿದೆ. ಎಲ್ಲರೂ ಮನೆಯಿಂದ ಹೊರ ಬಂದು ಸಾಧನೆ ಮಾಡಿ ಎಂದರು. ಜನಗಣತಿಯಲ್ಲಿ ನಮ್ಮ ಸಮಾಜಕ್ಕೆ ಅನ್ಯಾಯ ಆಗುತ್ತಿದೆ ರಾಜ್ಯಮಟ್ಟದ ಸಂಘಟನೆಗಳು ಇದರಲ್ಲಿ ಹೆಚ್ಚಿನ ಕಾಳಜಿ ವಹಿಸಿ ನಮ್ಮ ಸಂಖ್ಯೆಯನ್ನು ತೋರಿಸಬೇಕು. ಇಲ್ಲದಿದ್ದರೆ ಸರ್ಕಾರದ ಎಲ್ಲಾ ಸೌಲಭ್ಯಗಳಿಂದ ನಾವು ವಂಚಿತರಾಗುತ್ತೇವೆ ಎಂದರು.
ರಾಜ್ಯ ದೇವಾಂಗ ಸಂಘ ಮಹಿಳಾ ಘಟಕದ ಉಪಾಧ್ಯಕ್ಷರಾದ ಶ್ರೀಮತಿ ವಜ್ರ ಪೆಂಟಾ ಅವರು ಮಾತನಾಡಿ ನಮ್ಮ ಮಹಿಳಾ ಮಂಡಳಕ್ಕೆ ಇನ್ನೂ ಹೆಚ್ಚು ಹೆಚ್ಚು ಸದಸ್ಯರಾಗಿರಿ ಎಂದು ಮನವಿ ಮಾಡಿದರು.
ರಾಜ್ಯ ದೇವಾಂಗ ಸಂಘ ಮಹಿಳಾ ಘಟಕದ ಸಂಘಟನಾ ಕಾರ್ಯದರ್ಶಿಗಳಾದ ಶ್ರೀಮತಿ ಗೀತಾ ದೇವಾಂಗಮಠ ಅವರು ಪದಗ್ರಹಣ ಕಾರ್ಯ ನಿರ್ವಹಿಸಿ ಮಾತನಾಡುತ್ತಾ ಮಹಿಳೆಯರು ಆತ್ಮಸ್ಥೈರ್ಯ ಎನ್ನುವ ದೀಪದಂತೆ ಧೈರ್ಯದಿಂದ ಮುಂದೆ ಬರಬೇಕು ಎಂದರು. ಅಧ್ಯಕ್ಷರಾದ ಶ್ರೀಮತಿ ಸುಜಾತ ಕಾಖಂಡಕಿಯವರು ನೂತನ ಅಧ್ಯಕ್ಷರಾದ ಶ್ರೀಮತಿ ವೀಣಾ ನೀಲಗುಂದ್ ಅವರಿಗೆ ಬ್ಯಾಡ್ಜ್ ತೊಡಿಸುವುದರ ಮೂಲಕ ಅಧಿಕಾರ ಹಸ್ತಾಂತರ ಮಾಡಿದರು .ಕಾರ್ಯದರ್ಶಿ ಶ್ರೀಮತಿ ಶಿಲ್ಪಾ ಕೊಪ್ಪಳ ಅವರನ್ನು ಸನ್ಮಾನಿಸಿ ಅವರ ಪದವಿಯನ್ನು ನೀಡಲಾಯಿತು. ಪದಾಧಿಕಾರಿಗಳೆಲ್ಲರಿಗೂ ಗುಲಾಬಿ ಹೂ ನೀಡುವುದರ ಮೂಲಕ ಸ್ವಾಗತಿಸಲಾಯಿತು.
ಎಂ ಬಿ ಬಿ ಎಸ್ ಹಾಗೂ ಎಂ ಡಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಧಾನಿಗಳನ್ನು ಸನ್ಮಾನಿಸಲಾಯಿತು ರಾಜ್ಯ ದೇವಾಂಗ ಸಂಘಕ್ಕೆ ಆಯ್ಕೆಯಾದ ಶ್ರೀಮತಿ ವಜ್ರ ಪೆಂಟ,ಶ್ರೀಮತಿ ಗೀತಾ ದೇವಾಂಗಮಠ ಹಾಗೂ ಶ್ರೀಮತಿ ಗಾಯತ್ರಿ ಬೆಲ್ಲದ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಕಾರ್ಯಕ್ರಮವನ್ನು ಶ್ರೀಮತಿ ಪುಷ್ಪ ಗುಗ್ಗರಿ ನಡೆಸಿದರು. ಶ್ರೀಮತಿ ಶಕುಂತಲಾ ಬೀಜಲಿ ಅವರು ನೆರವೇರಿಸಿದರು.
ಅಧ್ಯಕ್ಷರಾದ ಶ್ರೀಮತಿ ಸುಜಾತ ಕಾಖಂಡಕಿ ಅವರು ಈ ಎರಡು ವರ್ಷಗಳ ಅವಧಿಯಲ್ಲಿ ನಡೆದ ಕಾರ್ಯ ಚಟುವಟಿಕೆಗಳನ್ನು ವಿವರಿಸಿ ತಮಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು ಅರ್ಪಿಸಿದರು .
ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಯೋಗ ಡ್ಯಾನ್ಸ್ ಆಕರ್ಷಿತವಾಗಿತ್ತು.
ಕಾರ್ಯಕ್ರಮದಲ್ಲಿ ರತ್ನ ಪುರಂತರ ಪ್ರಾರ್ಥಿಸಿದರು. ಶ್ರೀಮತಿ ಭಾರತಿ ಗಡ್ಡಿ ಎಲ್ಲರನ್ನೂ ಸ್ವಾಗತಿಸಿದರು. ಶ್ರೀಮತಿ ರತ್ನಬಾಯಿ ಗಾರ್ಗಿಯವರು ಪ್ರಸ್ತಾವಿಕವಾಗಿ ಮಹಿಳಾ ಮಂಡಳದ ಬಗ್ಗೆ ಮಾತನಾಡಿದರು. ಶ್ರೀಮತಿ ಮೇಘ ಜವಳಿ, ಶ್ರೀಮತಿ ನೇತ್ರಾವತಿ ಜೂಜಗಾರ್, ಶ್ರೀಮತಿ ಭಾಗ್ಯ ಆರಿ ಅತಿಥಿಗಳ ಪರಿಚಯ ಮಾಡಿದರು. ಶ್ರೀಮತಿ ವಿಜಯಲಕ್ಷ್ಮಿ ಕಡಕೋಳ ವಂದಿಸಿದರು .
ಕಾರ್ಯಕ್ರಮದಲ್ಲಿ ವಿವಿಧ ಸಂಘಗಳ ಪದಾಧಿಕಾರಿಗಳು ಸಂಘದ ಪದಾಧಿಕಾರಿಗಳಾದ ಕಸ್ತೂರಿ ಕಾಲವಾಡ ,ಸುಧಾ ಕಂಗೂರಿ ,ಗೀತಾ ಕಳಸಣ್ಣವರ್ ಯಶೋಧ ಬಾಗೋಡಿ ಭುವನೇಶ್ವರಿ ಹತ್ತಿ ಕಾಳ, ಶೋಭಾ ಆರಿ, ಪ್ರತಿಭಾ ಹತ್ತಿ ಕಾಳ ಮುಂತಾದವರು ಭಾಗವಹಿಸಿದ್ದರು.ಕುಮಾರಿ ರಕ್ಷಿತಾ ಗಿಡ್ನoದಿ ಕಾರ್ಯಕ್ರಮ ನಿರೂಪಿಸಿದರು.